ಪುಟ:ರಘುಕುಲ ಚರಿತಂ ಭಾಗ ೧.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ಶ್ರೀ ರ ದ ದುಗುಡವನ್ನು ತೊರೆ, ಲೋಕದಲ್ಲಿ ಮೂಢನಾದ ಮನುಜನು - ಆತ್ಮವಾದ ವಸ್ತುವಿನ 'ವಿನಾಶವನ್ನು ಎದೆಯಲ್ಲಿ ನಟ್ಟ ಶಲ್ಯವನ್ನಾಗಿ ಭಾವಿಸುತ್ತಾನೆ. ಸ್ಥಿರಚಿತ್ತನು - ಆ ಪ್ರಯವಸ್ತು ನಿಯೋಗವನ್ನೇ ಹೃದಯದಲ್ಲಿ ನಟ್ಟಿದ್ದ ಮೊಳೆಯು ಕಳೆದುಹೋಯಿತೆಂದು ತಿಳಿಯುತ್ತಾನೆ. ಕುಶಲಕ್ಕೆ ಇದು ದಾರವೆಂತಲೂ ಭಾವಿಸುವನು, ವಿಷಯಲಾಭ ನಾಳಗಳು • ಕ್ರಮವಾಗಿ ಪಾರ್ಮನಿಗೆ ಹಿತಾಹಿತ ಸಾಧನಗಳಂ ತಲೂ, ಪಂಡಿತನಿಗೆ ಅಹಿತಹಿತ ಸಾಧಕಗಳೆಂತಲೂ ಭಾವನೆಯುಂಟಾ ಗುವುದು. ಶರೀರ ಶರೀರಿಗಳಿಗೆ ಎಂದರೆ ತನ್ನ ದೇಹಾತ್ಮಗಳಿಗೇ ಸಂಯೋಗವಿಯೋಗಗಳು ಸಿದ್ಧವಾಗಿದ್ದು, ಅವುಗಳ ವಿದ್ವಾಂಸನಿಗೆ ವಿವಾದವನ್ನುಂಟುಮಾಡದಿರುವಲ್ಲಿ, ಹೊರಗಿನದಾದ ಪುತ್ರಮಿತ್ರ ಕಳತ್ರಾ ದಿಗಳ ವಿರಹವೆಂಬುದೂ ಸಿದ್ದ ವೆಂತಲೂ, ಸಂತಾಪಕರಗಳಲ್ಲವೆಂತಲೂ ಹೇಳಬೇಕಾದುದೇನು ? ಆದಕಾರಣ ಎಲೈ ಜಿತೇಂದ್ರಿಯಾಗ್ರಗಣ್ಣನೆ ! ಅಜ್ಜನರಂತೆ ಪ್ರಜ್ಞನಾದ ನೀನು - ಶೋಕಕ್ಕೆ ವಶನಾಗಬೇಡ. ತರುಗಿರಿಗಳೆರಡರಮೇಲೆಯೂ ಗಾಳಿಯು ಸಮಾನವಾಗಿ ಬೀಸುತಲಿರು ವಲ್ಲಿ - ಆ ಎರಡೂ ಸಮವಾಗಿ ಚಲನಸ್ವಭಾವದವುಗಳೇ ಆಗಿದ್ದರೆ - ಒಂದಕ್ಕೆ ಚಲವೆಂತಲೂ, ಮತ್ತೊಂದಕ್ಕೆ ಅಚಲವೆಂತಲೂ ಶಬ್ದಾರ್ಥಗಳ ತಾರತಮ್ಯವುಂಟಾಗುತಲಿದ್ದಿತೆ ? ತರುಗಳಂತೆ ಗಿರಿಗಳಿಗೂ ಚಲಸಂ ಜ್ಞೆಯು ಬರುತಲಿದ್ದಿ ತಲ್ಲವೆ ? ಸ್ವತಃ ವಿವೇಕಶಾಲಿಯಾದ ನಿನಗೆ ಹೇಳ ಬೇಕಾದುದೇನಿರುವುದು ? ಎಂದು ಹೇಳಿ ವಿರಮಿಸಿದನು. ಅದನೆಲ್ಲ ಕೇಳಿದ ಅಜನು - ಕುಲಗುರುವಾದ ಜ್ಞಾನಧನನ ಅನು ಜ್ಞೆಯನ್ನು ವಿಧೇಯತೆಯಿಂದ ಪರಿಗ್ರಹಿಸಿ,ಉಚಿತ ಪೂಜಾದಿಗಳಿಂದಮುನಿ .ಶಿಷ್ಯನನ್ನು ಸತ್ಕರಿಸಿ ಕಳುಹಿಸಿಕೊಟ್ಟನು. ಆದರೆ - ಆ ವಚನಜಾ ತವು - ಶೋಕದಿಂದ ನಿಬಿಡವಾದ ಅಜನ ಹೃದಯದಲ್ಲಿ ಹೊಗಲೆಡೆಯಿಲ್ಲದೆ ಹಿಂತಿರುಗಿತೆಂಬಂತಿದ್ದಿತು. ಇನ್ಮವಸ್ತುವಿಯೋಗ ದುಃಖದ ಶಕ್ತಿಯು ಅಂದು ಹೇಳತೀರದು. ಅದೇನು ಸೃಷ್ಟಿ ವೈಚಿತೃವೋ, ಮಾಯಾ ಬಲವೋ, ಮೋಹಪಾಶವೋ, ಅಥವಾಷ್ಪಭಾವವೇನೋ ಹೇಳಲಳವಲ್ಲ. ತದನಂತರದಲ್ಲಿ - ದಶರಥನು ಚಿಕ್ಕವನಾಗಿ, ರಾಜ್ಯಭಾರವನ್ನು ವಹಿಸಲು ಅಸಮರ್ಥನಾಗಿದ್ದುದರಿಂದ, ಸತ್ಯಸೂತೃತವಚನನಾದ ಅಜನು