ಪುಟ:ರಘುಕುಲ ಚರಿತಂ ಭಾಗ ೧.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ. ಯಶೋವಂತರಾಗಲಿಕ್ಕೂ, ದಿಗ್ವಿಜಯಮಂಗೆಯ್ಯುತಲಿದ್ದ ರಲ್ಲದೆ ಹಣದಾ ಶೆಯಿಂದಲಾಗಲಿ,ತೋಳುಬಲದ ಪೊಗರಿನಿಂದಲಾಗಲೀ ಅಲ್ಲ. ಸಂತತಿಯ ತಂತುವು ಕತ್ತರಿಸಿ ಹೋಗಬಾರದೆಂಬ ಧರವನ್ನು ಪರಿಪಾಲಿಸಲಿಕ್ಕೇ ಗ್ಯ ಹಸ್ಥಾಶ್ರಮವನ್ನು ಪರಿಗ್ರಹಿಸುತ್ತಿದ್ದರಲ್ಲದೆ, ಕಾಮಭೋಗಗಳ ಕುತೂಹ ಲದಿಂದಲ್ಲ. ಮತ್ತು-ಬಾಲ್ಯದಲ್ಲಿಯೇ ವಿದ್ಯೆಗಳನ್ನೆಲ್ಲ ಕಲಿತು, ಪ್ರಾಯದೊ ಳಗೆ ಗೃಹಸ್ಥಾಶ್ರಮದಿಂದ ಸಂಸಾರಸುಖದಲ್ಲಿ ಆಸಕ್ತರಾಗಿ, ಮುಪ್ಪುಬ ರುತಲಿರುವಾಗ ವಾನಪ್ರಸ್ಥಾಶ್ರಮ ಸ್ವೀಕಾರದಿಂದ ಮುನಿವರಗಳನ್ನು ಆಶ್ರಯಿಸಿ, ಅವಸಾನಕಾಲದೊಳಗೆ ಸನ್ಮಾಸವನ್ನವಲಂಬಿಸಿ, ಪರವಾ ಧ್ಯಾನದಿಂದ ಶರೀರವನ್ನು ಬಿಡುವ ಸಂಪ್ರದಾಯವು - ಅವರ ಕುಲಕ ಮವಾಗಿ ಬರುತಲಿದ್ದು ದರಿಂದ ನಾಲ್ಕಾಶ್ರಮಗಳ ಧಮ್ಮಗಳೂ ಈ ವಂಶದ ಅರಸರಲ್ಲಿ ಆಯಾಯ ಕಾಲದೊಳಗೆ ತಪ್ಪದೆ ಆಚರಣೆಯಲ್ಲಿದ್ದುವು. ಈ ಯದ್ಯಪಿ-ರಘರಾಜ ಚರಿತ್ರೆಯ ವಿಭವವನ್ನೆಲ್ಲ ವಿವರಿಸುವಷ್ಟು ನಾಗೈಭವದ ತಿರುಳು ನನಗೆ ಇಲ್ಲ, ಆದರೆ- ಆ ಅವಸಿಪಾಲರ ಸು? ಇರತಾವಳಿಯು-ಬಗೆಬಗೆಯಿಂದ ನನ್ನ ಕರ್ಣಾಲಂಕಾರವಾಗಿ, ವಿಚಾರ ವಿಲ್ಲದೆ ಅವರ ಅನ್ವಯ ಕ್ರಮವನ್ನು ವರ್ಣಿಸಲಿಕ್ಕೆ ನನ್ನನ್ನು ಪ್ರೇರಿಸು ತಲಿದೆ, ಇದರಿಂದ ಚಾಪಲ್ಯಕ್ಕೊಳಗಾಗಿ, ದುಡುಕಿ, ಹೇಳತೊಡಗಿದೆನು. ಹೊನ್ನಿನ ಒಳ್ಳಣ್ಣವಾಗಲಿ, ಇತಲೋಹದ ಬೆರಕೆಯಿಂದುಂಟಾದ ಕಲೆ (ಬಚ್ಚ) ಯೇ ಆಗಲೀ ಆ ಚಿನ್ನವನ್ನು ಬೆಂಕಿಯಲ್ಲಿ ಪುಟವಿಡುವುದರಿಂದ ತಿಳಿದು ಬರುವ ಹಾಗೆ, ಈ ನನ್ನ ರಘುಕುಲಚರಿತವು-ಕಾವ್ಯಭಾವನಾಪ ರಿಪಕ್ಷ ಬುದ್ಧಿಯುಳ್ಳ ಸುಗುಪರ ಕಿವಿಯನ್ನು ಹೊಕ್ಕರೇ ಅದರ ಗುಣ ದೋಷಗಳವಿಭಾಗವು ವ್ಯಕ್ತವಾಗುವುದು, ಅದರಿಂದ ಮುಂದರಿವೆನು:- - ಇಂತು ನಾಲ್ಕು ಖಂ - PD