ಪುಟ:ರಘುಕುಲ ಚರಿತಂ ಭಾಗ ೧.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A ಕಥಾರಂಭಂ K ವೇದಗಳೊಳಗೆ ಓಂಕಾರವು ಹೇಗೋ ಹಾಗೆ, ವೈವಸ್ಸತನೆಂಬ ಮ ನುವು-ವಿದ್ಯಾವಂತರಿಗೆ ಮಾನ್ಯನೆನಿಸಿ, ಮೊಟ್ಟಮೊದಲನೆಯ ಅರಸಾಗಿ ನೆಲ ಸಿದನು. ಪವಿತ್ರತರವಾದ ಆತನ ವಂಶದಲ್ಲಿ-ಅತಿ ಪರಿ ಶುದ್ಧ ನಾದ ದಿಲೀ ಪನೆಂಬ ರಾಜರಾಜನು-ಸರಿಪೂತವಾದ ಪಾಲ್ಲ ಡಲೊಳಗೆ ಪೂರ್ಣಚಂದ್ರ ನಂತೆ ಜನಿಸಿ ಬೆಳಗುತಲಿದ್ದನು. ಈತನಿಗೆ ಬಲು ಅಗಲವಾದ ಎದೆಯ, ಗೂಳಿಯಹಿಳಿಲಿನಂತೆ ಎತ್ತರವಾದಹೆಗಲೂ, ಮರದತಾಳನಂತೆ ನೀಳವಾದ ತೋಳೂಇದ್ದು ದರಿಂದ ನೆಲದಾಳಿಕೆಯೆಂಬ ಕತಧರವು, ಅಥವಾ ಪತಾ ಕ್ರಮವು – ತನ್ನ ಕರವವನ್ನು ನೆರವೇರಿಸಲೋಸುಗ ಈ ರೂಪವಾದ ಉಚಿತದೇಹವನ್ನಾಂತು ಬಂದಿರುವುದೋ ಎಂಬಂತೆ ಕಾಣಬರುತಲಿದ್ದ ನು, ಇದಲ್ಲದೆ ಆ ದಿಲೀಪರಾಜನು-ಎಲ್ಲ ವಸ್ತುಗಳಿಗಿಂತ ಮಿಗಿಲೆನಿ ಸಿದ ಬಲವನ್ನೊಳಗೊಂಡು, ಎಲ್ಲ ಪ್ರಾಣಿಗಳಿಗಿಂತ ಮೇಲೆನಿಸಿದ ತೇಜಸ್ಸನ್ನು ಹೊಂದಿ, ಎಲ್ಲರಿಗಿಂತ ಉನ್ನತನೂ ಆಗಿ, ಮೇರುವಿನಂತೆ ಭೂಮಿಯನ್ನೆಲ್ಲ ಆಕ್ರಮಿಸಿ ಎಂದರೆ-ತನ್ನ ಆಳ್ವಿಕೆಗೊಳಪಡಿಸಿಕೊಂಡು ಇದ್ದನು. ಅಪ್ಪದಿಕ್ಕಾಲಕರ ಅಂಶಗಳೂ ಒಟ್ಟಾಗಿ ಈತನಲ್ಲಿ ಕಲೆತಿ ದ್ದುವು. ತನ್ನ ಶ್ರೇಷ್ಠವಾದ ಆಕಾರಕ್ಕೆ ತಕ್ಕ ಪ್ರಜ್ಞೆಯನ್ನುಳ್ಳವನಾಗಿ, ಆ ಪ್ರಜ್ಞೆಗನುಗುಣವಾದ ಶಾಸ್ತ್ರ ಪರಿಚಯವನ್ನು ಪಡೆದು, ಆ ಶಾಸ್ತ್ರಾ ಬ್ಯಾಸಕ್ಕೆ ಅನುರೂಪವಾದ ಕಾರವನ್ನು ಆರಂಭಿಸಿ, ಅದಕ್ಕೆ ಸರಿಯಾದ ಫಲಸಿದ್ದಿ ಯನ್ನೂ ಹೊಂದುತಲಿದ್ದನು. ದುರುಳರನ್ನ ಡಗಿ ಸುವ ಕೌರ್, ಪ್ರತಾಪ, ರಾಜತೇಜಸ್ಸು ಮುಂತಾದ ಭಯಂಕರಗುಣಗಳೂ, ಶಿಷ್ಯ ರನ್ನು ಸಲಹುವ ಸತ್ಕುಲ ಜನ್ಮ, ಶೀಲ, ದಯೆ, ದ್ರಾಕ್ಷಿ ಮೊದಲಾದ ಮನೋಹರ ಸುಗುಣಗಳೂ ಈತನಲ್ಲಿ ಬಡಗೂಡಿದ್ದುದರಿಂದ, ಈ ದೊರೆ ಯು-ಮೊಸಳ ಮುಂತಾದ ಕ್ರೂರಜಂತುಗಳಿಂದಲೂ, ಮುತ್ತು ರತ್ನ ಮೊದಲಾದ ಸನ್ಮಣಿಗಳಿಂದಲೂ ಸಮುದ್ರವು ಹೇಗೋ ಹಾಗೆ, ದುರ್ವೃ ತಿಯಿಂದ ಹಗೆಗಳತಿಕ್ರಮಿಸಲು ಅಸದಳನಾಗಿಯೂ, ಸದ್ಯಾಪಾರದಿಂದ ಸಾಧುಗಳು ಆಶ್ರಯಿಸಲು ಸುಲಭ ನಾಗಿಯೂ ಇರುತ್ತಿದ್ದನು