ಪುಟ:ರಘುಕುಲ ಚರಿತಂ ಭಾಗ ೧.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧). ರಘುಕುಲ ಚರಿತಂ. ಜಾಣನಾದ ಸಾರಥಿಯು-ನಡೆಯಿಸುವ ತೇರಿನ ಗಾಲಿಯ ಪಟ್ಟಿಯು-ಜಾ ಡನ್ನು ಬಿಟ್ಟು ಅತ್ತಿತ್ತ ಒತ್ತಿಹೋಗದ ಹಾಗೆ, ಸುಶಿಕ್ಷಣದಿಂದ ಸರಿಯಾಗಿ ಪಳಗಿದ್ದ ದಿಲೀಪನ ಪ್ರಜೆಗಳು-ಮನುವಿನ ಕಾಲದಿಂದ ಬಳಕೆಯಲ್ಲಿ ಬಂ ದಿರುವ ಸದಾಚಾರದ ಪದ್ಧತಿಯನ್ನು ಎಷ್ಟಾದರೂ ದಾಟಿ ಹೋಗುತ್ತಿ ರಲಿಲ್ಲ. ಸೂರನು ಬೇಸಗೆಯಲ್ಲಿ ನೆಲದಲ್ಲಿನ ನೀರನ್ನು ತನ್ನ ಕಿರಣಗ ೪ಂದ ಹೀರಿ, ಒಂದಕ್ಕೆ ಸಾವಿರ ಪಾಲಿನಷ್ಟು ಹೆಚ್ಚಾಗಿ ಭೂವ `ಂಡಲಕ್ಕೆ ಮಳೆಗರೆಯುವ ಹಾಗೆ, ದಿಲೀಪ ಭೂಸನೂ-ತನ್ನ ಆಳ್ವಿಕೆಯ ನೆಲದ ಹು ಟ್ಟುವಳಿಯಲ್ಲಿ ಆರನೆಯ ಒಂದು ಪಾಲನ್ನು ಕಂದಾಯವನ್ನಾಗಿ ತೆಗೆದು ಕೊಂಡರೂ, ಅದನ್ನೆಲ್ಲ ಪ್ರಜೆಗಳ ಮೇಲೆ ಗಾಗಿಯೇ ವಿನಿಯೋಗಿಸುತ ಲಿದ್ದನು. ಕಂದಾಯದ ಹಣವು ಯಜ್ಞಯಾಗಾದಿ ಸತ್ಯಾಗಗಳಿಗೆ ಉಪ ಯೋಗಿಸುತಲಿದ್ದಿತು, ಅದರಿಂದ ಸಂತುಷ್ಟರಾದ ದೇವತೆಗಳು-ಹೇರಳ ವಾಗಿ ಮಳೆಗರೆಯುತಲಿದ್ದರು. ಇದರಿಂದ ಬೆಳೆಯು ಹುಲುಸಾಗಿ, ಪ್ರಜೆ ಗಳಿಗೆ ತೃಪ್ತಿಯುಂಟಾಗುತಲಿದ್ದಿತು. ಆ ಅವನಿಪಾಲನು- ಅಸಹಾಯ ಶರನಾಗಿದ್ದು ದರಿಂದ, ಆತನಿಗೆ ಚತುರಂಗಬಲವು- ಛತ್ರ ಚಾಮರಗಳಂತೆ ಅಲಂಕಾರವಾಗಿ ಮಾತ್ರವೇ ಇರುತ್ತಿತ್ತು, ತಡೆಯಿಲ್ಲದ ಶಾಸ್ತ್ರಜ್ಞಾನ, ಬಿಲ್ಲನೇರಿಸಿದ ಬಾಣ, ಇವೆರಡೇ ಎಲ್ಲ ಕೆಲಸಗಳನ್ನೂ ಕೈಗೂಡಿಸುತಲಿ ದ್ದುವು. ಲೋಕದಲ್ಲಿ ಯಾವನಾದರೊಬ್ಬ ಮನುಷ್ಯನಿಗೆ ಹಠಾತ್ತಾಗಿ, ಹಣವು ದೊರೆತರೆ,ಆಗ-ಅವನ ಪೂರ್ವಪುಣ್ಯವು ಉತ್ತಮವಾದುದೆಂತಲೂ, ಅದೇ ಮನುಷ್ಯನು ಅಕಸ್ಮಾತ್ತಾಗಿ ಅಕಾಲ ಮರಣವನ್ನೆ ದಿದರೆ,ಅವನ ಪೂರ್ವಸುಕೃತವು-ಹೀನವಾದುದೆಂತಲೂ, ಜನರು-ಊಹಿಸಿ ತಿಳಿಯುವ ಹಾಗೆ, ಆಧರಾನಾಥನು-ಮೂರನೆಯವರಿಯದಂತೆ ಗುಟ್ಟಾಗಿ ಯೋಚಿಸಿ ಮಾಡಿದ ಉದ್ಯೋಗವು, ಸಾಮಾದಿ ಉಪಾಯಗಳ ಪ್ರಯೋಗದಿಂದ ಕೆ ಲಸವು ಮುಗಿದ ಮೇಲೆಯೇ ಹೆರರಿಗೆ ಗೊತ್ತಾಗುತ ಅದ್ದಿ ತು, ಅದು ಹೊರತು, ನಡುಗಾಲದಲ್ಲಿ - ಹಿಗ್ಗು ವುದು, ತಗ್ಗುವುದು ಮೊದಲಾದ ಮು ಖವಿಕಾರದಿಂದಲಾಗಲೀ, ಮಾತುಗಳ ಹೊರೆಯಿಂದ ಹೋಗಪಡುವ ಮು ನೋಭಾವದಿಂದಲಾಗಲಿ, ವ್ಯಕ್ತ ಪಡುತ್ತಿರಲಿಲ್ಲ. ಇಂತಹ ಸುಗುಣಮಣಿಗಳಿಗೆ ಗಣಿಯಾದ ಆ ರಮಣನುಭಯವು ಬಂದಮೇಲೆಕಳವಳ ಪಡದಹಾಗೆ,ಮೊದಲೇ ರಾಜ್ಯಭಾರವನ್ನೆಲ್ಲ