ಪುಟ:ರಘುಕುಲ ಚರಿತಂ ಭಾಗ ೧.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ. ಯಜ್ಞ ಯಾಗಾದಿ ಹಬ್ಬವನ್ನು ಮಾಡಿ, ದೇವರ್ಕಳನ್ನು ತಣಿಸುತ ಬಂದನು, ಅದರಿಂದ ತೃಪ್ತನಾದ ಇಂದ್ರ ನು-ನೆಲವು ಹೆಚ್ಚಿಗೆ ಬೆಳಕೆ ಡುವಂತೆ ಮಳೆಗರೆಯುತ್ತಿದ್ದನು.ಹೀಗೆ ಆ ಸುರನರದೇವ- ಮುಖ್ಯಿಗೆ ಮುಝೇಮಾಡುವುದರ ಮೂಲಕ, ದೇವಭೂಲೋಕಗಳನ್ನು ಪೋಷಿಸಿ ಕೊಳ್ಳುತಲಿದ್ದ ರು. ದಿಲೀಪ ಭೂಪನ ಒಳ್ಳೆಯಹೆಸರುವಾಸಿಯು-ಇತರ ಮಹೀಪಾಲರೊಳಗೊಬ್ಬರಿಗೂ ಉಂಟಾಗಿರಲೇ ಇಲ್ಲ.ಏಕೆಂದರೆ-ಪ್ರಜೆ ಗಳಿಗಾವುದೊಂದು ಕುಂದೂ ಇಲ್ಲದಂತೆ ಆಡಳಿತವನ್ನು ಅರಸು ಅಣಿಮಾಡಿ ಟ್ಟದ್ದನು, ಆ ನಾಡಿನ ಜನರೆಲ್ಲ ನೆಮ್ಮದಿಯಾಗಿದ್ದುದರಿಂದ ಕಳ್ಳತನವೆಂಬ ಶಬ್ದ ಕ್ಕೆ ಎಡೆಯಿಲ್ಲದೆ, ತನ್ನನ್ನು ತಾನೇ ಕಳವುಮಾಡಿಕೊಂಡು, ಅರ್ಥವಿಲ್ಲ ದ ಶಬ್ದ ವಾಗಿದ್ದಿತು (ಮೊಲದ ಕೊಂಬು ಎಂಬಂತೆ) ಆ ಪೊಡವಿಯೊಡೆ ಯುನಲ್ಲಿ ಮತ್ತೊಂದು ವಿಶೇಷ ಗುಣವಿದ್ದಿ ತು, ಅದೇನೆಂದರೆ-ಯಾವನಾ ದರೆ ಒಬ್ಬನು ಸುಗುಣಿಯಾಗಿದ್ದರೆ,ಅಂಥವನು-ಹಗೆಯೇ ಆಗಿದ್ದರೂ, ಗಿಗೆ ಮದ್ದು ಹಿತವಾಗುವಂತೆ ಆತನಿಗೆ ಆಪ್ತನಾಗುತ್ತಿದ್ದನು, ಮತ್ತೊಬ್ಬ ನು- ಪರಮಾಪ್ತನೇ ಆಗಿದ್ದರೂ,ದುಮ್ಮನಾಗಿದ್ದರೆ, ಅಂಥವನು-ಹಾವು ಕ ಡಿದಬೆರಳು ಹಗೆ ಯಾಗುವಂತೆ ಅನಿಷ್ಟನೇ ಆಗುವನು. ಇಂತಪ್ಪ ಗುಣರಾ ಶಿಯಾದ ಆ ಮಹೀಶನ ಗುಣಗಳೆಲ್ಲ ಸರಾರ್ಥಗಳಾಗಿದ್ದು ವಲ್ಲದೆ ಸ್ವಾರ್ಥಪ ರಗಳಾಗಿರಲಿಲ್ಲ; ಆದುದರಿಂದಲೇ ಸೃಷ್ಟಿಕತ್ರನಾದ ಬ್ರಹ್ಮನು-ರೂಪ, ರ ಸ, ಗಂಧ, ಸ್ಪರ್ಶ, ಶಬ್ದ ಗಳಿಂದ ಪರೋಪಕಾರಿಗಳಾಗಿರಲೆಂಬ ನೇಮ ದಿಂದ-ನೆಲ, ನೀರು, ಗಾಳಿ, ಬೆಳಕು, ಬೈಲುಗಳೆಂಬ ಪಂಚಭೂತಗ ಇನ್ನೂ ಯಾವವಲಕಾರಣದಿಂದ ನಿರಿಸಿದನೋ, ಆ ಕಾರಣನಾ ಮಗ್ರಿಯಿಂದಲೇ ಈ ಮಹಾರಾಜನನ್ನೂ ನಿಜವಾಗಿ ನಿರಿಸಿ ಇರಬೇಕು ಎಂದು ತೋರುತ್ತದೆ. ಆರಾಜನ ಶಾಸನಕ್ಕೊಳಗಾದ ನೆಲಕ್ಕೆ,ನಾಲ್ಕು ಕಡ ಲುಗಳ ದಡನೇ ಸುತ್ತು ಕೋಟೆಯ ಗೋಡೆಯಾಗಿಯೂ, ಚತುಸ್ಸಾಗರ ರ್ಗ ಮಂಡಲಾಕಾರವಾದ ಕಂದಕವಾಗಿಯೂ ಇದ್ದುವು. ಇದರಿಂದ ಅರಸು-ಇದಿರಾಳಿಲ್ಲದೆ ಭೂಮಂಡಲವನ್ನೆಲ್ಲ ಒಂದೇ ಪಟ್ಟಣವನ್ನು ಹೇ ಗೋಹಾಗೆ ಆಳುತಲಿದ್ದನು. ಮಗಧರಾಜಪುತ್ರಿಯಾಗಿ, ದಾಕ್ಷಣ ಗುಣದ ಸಂಬಂಧದಿಂದ ಸುದಣೆಯೆಂದು ಬಳಕೆಗೆ ಬಂದ ಹೆಸರನ್ನು ಪಡೆದಿದ್ದ ಸಾಧಿಯು-ಯಜ್ಞಕ್ಕೆ ಸಾದ್ದು ಣ್ಯವನ್ನಾಗಿಸುವ ದಕ್ಷಿಣೆಯು