ಪುಟ:ರಘುಕುಲ ಚರಿತಂ ಭಾಗ ೧.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ. ರಜಗಳನ್ನು ಕೆದರಿ, ಕಾಡು ಮರಗಳ ಮೇಲೆ ಹರಿದು, ಶುಭವನ್ನು ಸೂಚಿಸುತ, ಹಾಯಾಗಿರುವ ಗಾಳಿಯು ಬೀಸುತಲಿದ್ದಿತು. ಇಂತು ಸುಖ ಪ್ರಯಾಣವನ್ನು ಬೆಳೆಸುತಲಿರುವಲ್ಲಿ-ತೇರಿನ ಗಾಲಿಯ ಸದ್ದನ್ನು ಕೇಳಿದ ಕೂಡಲೇ, ಮಳೆಗಾಲದ ಮೋಡವು ಗುಡುಗುತ್ತಿದೆಯೆಂದು ಭ್ರಾಂತಿಗೊಂಡು, ಇದಿರಾಗಿ ತಮ್ಮ ಕೊರಳನ್ನೆತ್ತಿ, ಪಡ್ಡಸ್ವರವನ್ನು ಹೋಲುತ್ತಿರತಕ್ಕ ಶುದ್ಧ ವಿಕೃತವೆಂಬೆರಡು ಬಗೆಯಿಂದ, ಇಂಪಾಗಿ ದನಿಗೈವ ಹೆಣ್ಣು ಗಂಡು' ನವಿಲುಗಳ ಕೇಕಾರವಗಳನ್ನು ಕೇಳಿದರು. ಹಾಗೆಯೇ ಮುಂದೆ ಹೊರಟು, ಸ್ವಲ್ಪ ಹೊತ್ತಿನಲ್ಲಿಯೇ ಹಳು ವವನ್ನು ಹೊಕ್ಕು, ಆಗ-ಇಕ್ಕೆಲದಲ್ಲಿ ಹುಲ್ಲನ್ನು ಮೇಯುತಲಿದ್ದ ಹುಲ್ಲೆಗಳು-ಎಂದೂ ಭಯಗೊಂಡವುಗಳಲ್ಲ, ಅಂತಹ ಬಂಡಿಗಳನ್ನು ನೋಡಿದವುಗಳೂ ಅಲ್ಲ. ಅದರಿಂದ ಹತ್ತಿರದಲ್ಲಿಯೇ ನಿಂತು, ರಥದಲ್ಲಿ ನಟ್ಟ ದಿಟ್ಟಿಯುಳ್ಳವಾಗಿ ದುರುದುರುನೆ ನೋಡುತಲಿದ್ದು ವು, ಸುದಕ್ಷಿಣೆಯು ಗಂಡುಜಿಂಕೆಗಳಲ್ಲಿ ತನ್ನ ಮನದನ್ನನ ಕಣ್ಣಹೋಲಿಕೆಯನ್ನೂ, ದಿಲೀಪ ನು-ಹೆಣ್ಣು ಹುಲ್ಲೆಗಳೊಳಗೆ ತನ್ನ ಸತಿಯನಯನಗಳ ಸಾನ್ನವನ್ನೂ ನೋಡಿಕೊಳ್ಳುತ ಮುಂದರಿವಲ್ಲಿ, ಮಾರ್ಗದ ಮೇಲ್ಬಾಗದೊಳಗೆ, ಆಕಾ ಶದ ಬೈಲಿನಲ್ಲಿ ಸಾಂಸಪಕ್ಷಿಗಳ ಹಿಂಡು ಸಾಲುಗಟ್ಟಿ ಹೋಗುತ್ತಿದ್ದರೆ, ರಾಜದಂಪತಿಗಳ ಪ್ರಯಾಣಸಮಯದಲ್ಲಿ ವಿಚಿತ್ರವಾಗಿರುವಂತೆ ಎಡಬಲ ಭಾಗಗಳ ಕಂಬಗಳಿಲ್ಲದೆ ಕಟ್ಟಿರುವ ತೋರಣ ಮಾಲೆಯ ಹಾಗೆ ಕ್ಷಣಕಾಲಮಾತ್ರ ಕಂಡು ಬರುವುದನ್ನು ತಲೆಯೆತ್ತಿ ನೋಡುತ್ತ ತೆರಳಿದ ರು, ಮಂದಮಾರುತವು-ಅವರು ಪಯಣಮಾಡುವ ಕಡೆಗೇ ಹಿತವಾಗಿ ಬೀಸುತ್ತ, ನಿಮ್ಮ ಕೋರಿಕೆಯು ಕೈಗೂಡುವುದೆಂದು ಸೂಚಿಸುತಲಿದ್ದಿ ತು, ಕುದುರೆಗಳ ಕಾಲ ತುಳಿತದಿಂದ ಮೇಲಕ್ಕೆದ್ದ ಧೂಳಿಯು-ಸುದಹಿ ಣೆಯ ಮುಂಗೂದಲನ್ನೂ, ದಿಲೀಪನ ತಲೆಯಪಾಗನ್ನೂ ಮುಟ್ಟುತಲಿ ರಲಿಲ್ಲ, ಸುದಕ್ಷಿಣಾದಿಲೀಪರು-ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿ ಇರುವಂತೆ ಉತ್ತಮುಜಾತಿಯ ಸ್ತ್ರೀಪುರುಷರು, ಮಾರ್ಗದಲ್ಲಿ-ಅತ್ತಿತ್ತ ಹತ್ತಿರದಲ್ಲಿ ಕಾಣಬರುವ ತಂಪಾದ ಕೊಳಗಳೊಳಗೆ ಕಂಗೊಳಿಸುವ ಕಮಲಗಳ ಮೇಲಣ ತಂಗಾಳಿಯು ಬೀಸುತಲಿದ್ದಿತು, ಆಗಲಾ ಗಂಡಹೆಂಡಿರು-ಆವಾ ಯುವಿನಲ್ಲಿ ತಮ್ಮ ಉಸಿರಿನ ಸುವಾಸನೆಯನ್ನು ಹೋಲುತ್ತಿರುವ