ಪುಟ:ರಘುಕುಲ ಚರಿತಂ ಭಾಗ ೧.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಶಾ ರ ದಾ. ಗಮಲನ್ನು ಗಮನಿಸುತ ನಡೆವಾಗ-ತಾವೂ ಮತ್ತು ತಮ್ಮ ಪೂರ್ವಿಕರೂ, ಬ್ರಾಹ್ಮಣರಿಗೆ ದಾನಮಾಡಿದ ಅಗ್ರಹಾರಗಳು- ಯೂಪಸ್ತಂಭಗಳೊಡನೆ ಎತ್ತೆತ್ತಲೂ ಕಾvಬರುತ್ತಿದ್ದುವು, ಅವುಗಳಲ್ಲಿ ವಾಸಮಾಡುವ ಪ್ರೋತ್ರಿ ಯರು ಬಂದು, ಇದರೊಂಡು ಆಚರಿಸಿದ ಸತ್ಕಾರಗಳನ್ನೂ,ಬಳಿಕ ವೇದ ಘೋಷದಿಂದ ಹರಸಿದ ಸಫಲಗಳಾಗುವ ಹರಕೆಗಳನ್ನೂ, ಬಾಗಿದ ಶಿರಸ್ಸಿ ನಿಂದ ಸ್ವೀಕರಿಸುತ ಬಂದರು, ಮತ್ತೆ ಸ್ವಲ್ಪ ಹೊತ್ತಿಗೆ ನಮ್ಮನ್ನಾಳುವ ದೊರೆಯು-ಪಟ್ಟದರಸಿಯೊಡನೆ ಪಯಣಮಾಡುತ್ತಿರುವನು, ಆ ನಮ್ಮೊಡ ಯನನ್ನು ಕಾಣಬೇಕು ಎಂದು ಮುನ್ನಿನಿರುಳಿನಲ್ಲಿ ಹೆಪ್ಪಿಟ್ಟಿದ್ದು ಆಗ ತಾನೆ ಕಡೆದು ತೆಗೆದ ಬೆಣ್ಣೆಯನ್ನು ಕಾಯಿಸಿದ ತುಪ್ಪವನ್ನು ಅಕ್ಕರೆಯಿಂದ ತೆಗೆದುಕೊಂಡು, ತವಕದಿಂದ ಬಂದು ಇದಿರೊ೦ಡ ಹಳ್ಳಿಯ ಮುದುಗೌ ಡರನ್ನು ಮಮತೆಯಿಂದ ಕಂಡು, ನಗುನಗುತ ಅವರ ಯೋಗಕ್ಷೇಮವ ನ್ನು ವಿಚಾರಿಸಿ, ಕಾಡುಹಾದಿಯಲ್ಲಿ ಬೆಳದಿರುವ ಗಿಡಗಳನ್ನು ಅವರಿಗೆ ತೋ ರಿಸಿ, ಈ ಗಿಡದ ಹೆಸರೇನು? ಈ ಬಳ್ಳಿಯ ಹೆಸರೇನು ? ಎಂದು ಕೇಳು ತ್ತಾ ಬರುತ್ತಿದ್ದರು, ಅಂದವಾದ ಅಲಂಕಾರದಿಂದ ಸಯಣಮಾಡುತಲಿ ರುವ ಸುದಕ್ಷಿಣಾ ದಿಲೀಸರಿಗೆ, ಶಿಶಿರಂತುವು ಕಳೆದ ಬಳಿಕ ಚೈತ್ರಮಾ ಸದ ಹುಣ್ಣಿಮೆಯಲ್ಲಿ ಚಿತ್ತಾ ನಕ್ಷತ್ರ ಮತ್ತು ಪೂರ್ಣ ಚಂದ್ರರಿಗೆ ಹೇ ಗೋ ಹಾಗೆ, ಹೊಳವು- ಬೆಳಗುತಲಿದ್ದಿತು, ಸುಂದರನಾದ ದಿಲೀಪನುಅಲ್ಲಲ್ಲಿ ಕಾಣಬರುವ ವಿಶೇಷ ಸಂಗತಿಗಳನ್ನೆಲ್ಲ ತನ್ನ ಪ್ರಿಯಪತ್ನಿಗೆ ತಿಳಿ ಸುತ್ತಾ ತೆರಳುತ್ತಿರುವಾಗ, ಬಹು ಶಾಂತನೂ ಸುಂದರನೂ ಆದ ದಿಲೀಪ ನು-ಅದುವರೆಗೆ ದಾಟಿಬಂದ ಬಹುದೂರವಾದ ದಾರಿಯ ದೂರವನ್ನೇ ಇ ಪೆಂದು ತಿಳಿಯಲಾರದಿದ್ದನು. ಹೆರರಿಗೆ ಅಸದಳವೆನಿಸಿದ ಯಶಸ್ಸನ್ನು ಪಡೆದಿರುವ ರಾಜನು- ರಾಣಿಯೊಡನೆ ರಥ ಪ್ರಯಾಣದಿಂದ ಅನೇಕ ಅರ "ಗಳನ್ನು ದಾಟಿ, ಸಂಜೆಯ ಹೊತ್ತಿಗೆ, ನಿಯಮಪಾನಾದ ಮುನಿಯ ತಪೋವನದ ಬಳಿಗೆ ಬಂದನು, ಅದುವರೆಗೆ ತೇರಿನ ಕುದುರೆಗಳೂ ದಾರಿ ಯನ್ನು ನಡೆದು ಬಳಲಿದ್ದುವು. ಆಗ ಆ ಆಶ್ರಮ ಪದವು ಹೇಗೆ ಇತ್ತೆಂದರೆ:-ಅಲ್ಲಲ್ಲಿ ವಾಸವಾ ಡುವ ತಪಸ್ಸಿಗಳು-ಪ್ರಾತಃಕಾಲದ ಅನುಷ್ಟಾನಗಳನ್ನು ತೀರಿಸಿಕೊಂಡು, ದೂರದಲ್ಲಿನ ಅರಣ್ಯಗಳಿಗೆ ಹೋಗಿ, ಸಮಿತ್ತು, ದರ್ಭೆ, ಹಣ್ಣು ಮುಂತಾ