ಪುಟ:ರಘುಕುಲ ಚರಿತಂ ಭಾಗ ೧.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ದವುಗಳನ್ನು ತೆಗೆದುಕೊಂಡು, ಅಲ್ಲಿಂದ ಹಿಂದಿರುಗಿ, ಸಂಜೆಯ ಹೊತ್ತಿ ನಲ್ಲಿ ತಮ್ಮ ತಪೋವನದೆಡೆಗೆ ಬಂದು ಸೇರುವಾಗ್ಗೆ, ತಂತಮ್ಮ ಎಲೆಮನೆ ಗಳೊಳಗೆ ಬೆಳಗುತ್ತಿರುವ ಅಗ್ನಿಗಳು-ಅದೃಶ್ಯಗಳಾಗಿ ಅವರನ್ನು ಇದಿ ರೋಳುತಲಿದ್ದು ವು, ಚಿಕ್ಕಮಕ್ಕಳು-ತಮ್ಮ ಹಡದ ತಾಯಿಯರನ್ನು ಕಂ. ಡ, ತಿಂಡಿಯನ್ನು ಬೇಡುತ ಸುತ್ತಿಕೊಳ್ಳುವಂತೆ, ಹುಲ್ಲೆಗಳು-ಬಾಗಿಲು ಮುಂದೆ ಹರಡಿರುವ ಹುಲ್ಲುಕಾಳುಗಳಲ್ಲಿ ತಮ್ಮ ಸಾಲನ್ನು ಬೇಡುವಂತೆ ಎಲೆ ಮನೆಗಳ ಬಳಿಯಲ್ಲಿ ಮುನಿಪತ್ನಿಯರನ್ನು ಮುತ್ತಿಕೊಂಡಿದ್ದು ವು. ಆ ಪುಣ್ಯಾಶ್ರಮದ ಗಿಡಗಳ ಬುಡಗಳಲ್ಲಿನ ಪಾತೆಗಳೊಳಗೆ ನಿಲ್ಲುವ ನೀರ ನ್ನು ಹಕ್ಕಿಗಳು ಹೆದರದೆ ಕುಳಿತು ಕುಡಿವುದು ವಾಡಿಕೆಯಾಗಿದ್ದು ದರಿಂದ, ಋಷಿಕನೆಯದು-ಆ ಪಕ್ಷಿಗಳ ನಂಬುಗೆಗಾಗಿ ಹೂವಿನಗಿಡಗಳಿಗೆ ನೀರೆ ರದ ಕೂಡಲೆ ದೂರವಾಗಿ ಸರಿಯುತಲಿದ್ದ ರು, ಪರ್ಣಶಾಲೆಗಳ ಮುಂದೆ ಅಂಗಳಗಳೊಳಗೆ ಬXಗ ಹಾಕಿದ್ದ ಕಾಳುಕಡಿಗಳನ್ನು ಬಿಸಿಲು ತಂ ಪುತ ಬರಲು, ಗುಡ್ಡೆ ಮಾಡುತಲಿದ್ದರು, ಕಾಡಿನಲ್ಲಿ ಮೇಯಲಿಕ್ಕೆ ಹೋಗಿ ದ್ದು ಹಿಂದಿರುಗಿಬಂದ ಮೃಗಗಳು-ಆ ಬೈಲುಗಳಲ್ಲಿ ನಿರ್ಭಯವಾಗಿ ಮ ಲಗಿ, ಮಲಕು ಹಾಕತೊಡಗಿದ್ದು, ಇಂತಹ ಪ್ರಣ್ಣವನದ ಬಾಗಿಲಿನ ಬಳಿಗೆ ಬರುವಾಗ್ಗೆ, ಮುನಿಗಳು-ಅಲ್ಲಲ್ಲಿ ಸಾಯಂಕಾಲದ ಹೋಮಗಳ ನ್ನು ಮಾಡುತಲಿದ್ದ ರು, ಮಂತ್ರ ಪೂರ್ವಕವಾಗಿ ಕೊಟ್ಟ ತುಪ್ಪವೇ ಮೊದ ಲಾದ ಆಹುತಿಗಳನ್ನು ಕೈಗೊಂಡ ಅಗ್ನಿಗಳು ಪ್ರಜ್ವಲಿಸುತಲಿರುವುದನ್ನು ಸೂಚಿಸುತ, ಅವುಗಳಿಂದ ಹೊರಟ ಹೊಗೆಗಳು-ಗಾಳಿ ಮ ಮೂಲಕ ಆಶ್ರ ನದ ಹೊರಗೆ ಬಂದು, ತಪೋವನಕ್ಕೆ ಅತಿಥಿಗಳಾಗಿ ಬರುವ ಪಾಂಥರಿಗೆ ತಮ್ಮ ಸುವಾಸನೆಯಿಂದ ಇಂಪುಕೊಡುತ್ತಾ, ಅವರನ್ನು ಪವಿತ್ರ ರನ್ನಾ ಗಿಯೂ ಮಾಡುತಲಿದ್ದು ವು, ಆ ಬಳಿಕ-ದಿಲೀಪ ಮಹಾರಾಜನು- ರಥವ ನ್ನು ನಿಲ್ಲಿಸಿ, ಬಳಲಿದ ಕುದುರೆಗಳನ್ನು ಸುಧಾರಿಸಿಕೊಳ್ಳುವಂತೆ ಮಾಡೆಂದು ಸಾರಥಿಗೆ ಆಜ್ಞಾಪಿಸಿ, ಮೊದಲು ತನ್ನ ಹೆಂಡತಿಯನ್ನು ಕೆಳಗೆ ಇಳಿಸಿ, ತಾ ನೂ ತೇರಿನಿಂದಿಳಿದನು. ಅಲ್ಲಿಂದ ವನವನ್ನು ಒಳಹೊಕ್ಕು ಬರುತಲಿರು ವಾಗ- ಕಲ ರಾಜನೀತಿ ಕುಶಲನಾಗಿ, ತಮಗೆ ಸಂರಕ್ಷಕನೆನಿಸಿದ ಭೂಪಾ ಲನು ಭಾರೈಯೊಡನೆ ಬರುತಲಿರುವುದನ್ನು ಕಂಡು, ಜಿತೇಂದ್ರಿಯರೂ, ಸ ಹಾಚಾರ ಸಂಪನ್ನರೂ ಆಗಿರುವ ತಪಸ್ಸಿಗಳು-ಬಹುಮಾನ್ಯನಾದ ಆತನಿಗೆ