ಪುಟ:ರಘುಕುಲ ಚರಿತಂ ಭಾಗ ೧.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ಕಾ ರ ದಾ. [ಅ ಕ್ರಮವಾಗಿ ಉಚಿತ ಸತ್ಕಾರಗಳನ್ನಿತ್ತರು. ಆಗಲಾ ಅರಸು-- ಆವ ರಾಚರಿಸಿದ ಪೂಜೆಪುರಸ್ಕಾರಗಳನ್ನು ವಿನಯಪೂರ್ವಕವಾಗಿ ಪರಿಗ್ರಹಿಸಿ ಮುಂದರಿದು, ಸಾಯಂಕಾಲದ ಹೊಮಾನುಷ್ಠಾನವನ್ನು ಮುಗಿಸಿ, ಸ್ವಾ ಹಾದೇವಿಯಿಂದೊಡಗೂಡಿದ ಯಜ್ಜೆಶ್ವರನಂತೆ ಅರುಂಧತಿಯ ಸೇವೆಯ ನ್ನು ಕೈಗೊಳ್ಳುತ್ತ ಕುಳಿತಿರುವ ತ ಪೋನಿಧಿಯಾದ ವಶಿಷ್ಠ ಮುನಿಯ ಸಂ ದರ್ಶನವನ್ನು ಮಾಡಿಕೊಂಡನು. ಬಳಿಕ- ತನ್ನ ಹೆಂಡತಿಯ ತಾನೂ ಭಯಭಕ್ತಿಗಳೊಡನೆ, ಬೇಗನೆ ಹತ್ತಿರಕ್ಕೆ ಬಂದು,ಮುನಿದಂಪತಿಗಳ ಅಡಿ ದಾವರೆಗಳಂ ಪಿಡಿಯಲು, ಅರುಂಧತೀವಶಿಪ್ಪರು-ಅರಸೀತಿಗೂ ಅರಸನಿಗೂ ಪ್ರೀತಿಪೂರ್ವಕವಾಗಿ ಹರಸಿದರು. ಆಮೇಲೆ- ಮಹಾ ಮುನಿಯು- ಮ ಹಾರಾಜನಿಗೆ ಮನ್ನಣೆಯಂಗೈದು, ಆತನಿಗೆ ಮಾರ್ಗಾಯಾಸವು ಕಳದ ಒಳಿಕ ರಾಜ್ಯವೆಂಬ ಆಶ್ರಮದಲ್ಲಿ ಮುನಿಯಂತಿರುವ ಆತನನ್ನು ಕುರಿತು, ರಾಜ್ಯಾಂಗಗಳ ವಿಷಯವಾಗಿ ಕುಶಲ ಪ್ರಶ್ನೆ ಮಾಡಿದನು:- ಹಗೆಗಳನ್ನು ಅಡಗಿಸಿದವನೂ, ವಾಚಾಲಕರೊಳಗೆ ಮೊದಲನೆಯ ವನೂ ಆಗಿರುವ ಅರಸು-ವೇದನಿಧಿಯಾದ ವಶಿಷ್ಠವನಿಯ ಪ್ರಶ್ನಾನಂತ ರದಲ್ಲಿ ಅರ್ಥಗರ್ಭಿತಗಳಾದ ಮಾತುಗಳನ್ನಾಡ ತೊಡಗಿದನು:- ಎಲೈ ಕುಲಗುರುವೇ ! ನನಗೆ ಒದಗಬಹುದಾಗಿರುವ ದೈವಿಕ ಗಳೂ, ಮಾನುಷಗಳೂ ಆದ ಆಪತ್ತುಗಳ ಸುಳಿವಿಲ್ಲದಂತೆ ಮಾಡಲು ನೀ ನು ಬದ್ಧ ಕಂಕಣನಾಗಿರುವಲ್ಲಿ, ಎನ್ನ ಯು ರಾಜ್ಯಾಂಗಗಳಲ್ಲಿ ಕುಶಲವು ನೆಲೆ ಗೊಳ್ಳದಿರಲು ಕಾರಣವೇನು ? ಸಕಲವೂ ಸಂಪನ್ನವಾಗಿಯೇ ಇದೆ. ಮಂತ್ರಕರನೂ ಪ್ರಯೋಕ್ತನೂ ಆಗಿರುವ ನಿನ್ನ ಮಂತ್ರ ಪ್ರಯೋಗ ದಿಂದಲೇ ಹಗೆಗಳಲ್ಲಿ ಅಡಗಿ, ಅವರ ಸುಳಿವೇ ಇಲ್ಲದಂತಾಗಿರುವಲ್ಲಿ, ಇದಿ ರಿಗೆ ಕಂಡುದನ್ನು ಮಾತ್ರವೇ ಗುರಿಹಿಡಿದು ಹೊಡೆವ ನನ್ನ ಶರಗಳಿಗೆ ಕೆಲಸವೇ ಇಲ್ಲದಂತಾಗಿದೆ, ಆದುದರಿಂದಲೇ ಮಾನುಷವಾದ ಆಪದಕ್ಕೆ ಎಡೆಯಿಲ್ಲ. ಕರಠನಾದ ನೀನು-ವಿಧಿಯನನ್ನು ಸರಿಸಿ ಅಗ್ನಿ ಗಳಲ್ಲಿ ಕೊ ಡುವ ಆಹುತಿಯೇ-ಮಳೆಯಿಲ್ಲದೆ ಬಣಗುವ ಪೈರುಗಳಿಗೆ ಸೆಬ್ಬೆಯನ್ನನು ಸರಿಸಿದ ಮಳೆಯಾಗಿ ಪರಿಣಮಿಸಿ, ಬೆಳೆಯು ಹುಲುಸಾಗಲು ಕಾರಣವಾ ಗುತ್ತಿರುವಲ್ಲಿ, ದೈವಿಕವಾದ ಕೇಡಿಗೆಡೆಯೆಲ್ಲಿ ? ಎಲೈ ಮಹಾಮುನಿಯೇ! ನನ್ನ ದೇಶದ ಪ್ರಜೆಗಳೆಲ್ಲ ಈತಿ ಬಾಧೆಗಳ ಸುದ್ದಿಯನ್ನೇ ಅರಿಯದೆ