ಪುಟ:ರಘುಕುಲ ಚರಿತಂ ಭಾಗ ೧.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲ ಚರಿತಂ. ೧೫ mmenwer• Viwo ನಿನ್ನ ಸಾರಥಿಗಾಗಲಿ ಕೇಳಬರಲಿಲ್ಲ, ಇಂತಾಸುರಜೆಯ ಮನ್ನಣೆಗೆ ಕೊರತೆಯುಂಟಾದುದೇ ನಿನ್ನ ಕೋರಿಕೆಯು ಕೈಗೂಡದಿರಲು ಕಾರಣ ವಾಯಿತು. ಲೋಕದಲ್ಲಿ ಮಾನ್ಯರನ್ನು ಮಾನಿಸದೆ ಮಾರುವುದು ಮೇ ಲೆಗೆ ಅಡ್ಡಿಯೆಂದು ತಿಳಿ, ಈಗಲಾಸುರ ಸುರಭಿಯನ್ನೇ ಸೇವಿಸಿ ಅನುಗ್ರ ಹವನ್ನು ಪಡೆದು ಬರೋಣ ಎಂದರೆ - ಪಾತಾಳಲೋಕದಲ್ಲಿ ವರುಣನು ಯಜ್ಞವನ್ನು ಮಾಡುತ್ತಿರುವನು, ಹೋಮ ಸಾಧನವಾದ ಹಾಲುಮೊಸ ರು ತುಪ್ಪ ಮೊದಲಾದುವನ್ನು ಹವಣಿಸಿಕೊಡಲು ಹೋಗಿರುವುದು, ಅ ಲ್ಲಿಗೇ ಹೋಗಿ ಬರಬಹುದೆಂದರೆ-ಪಾತಾಳದ ಬಾಗಿಲು ಸರ್ಪಗಳಕಾವ ಲಿನಿಂದ ಒಳ ಹೋಗಲಸದಳವಾಗಿದೆ. ಆದಕಾರಣ ಆಸುರಭಿಗೆ ಬದಲಾಗಿ ಅದರನಂದನೆಯಾದ ಈನಂದಿನಿಯನ್ನು ನಿನ್ನ ಧರ ಪತ್ನಿಯೊಡನೆ ಸರಿಸು ನಾಗಿ ಆರಾಧಿಸು, ಸುಪ್ರೀತವಾದ ಈಧೇನುವೇ ನಿನ್ನ ಕೋರಿಕೆಯ ನೈg ಈಡೇರಿಸುವುದು ಎಂದಿಂತು ವಶಿಪ್ಪಮುನಿ ಯು ವಸುಧಾಧಿಪನೊ ಡನೆ ಉಸಿರುತ್ತಿದ್ದನು., ಹುಲ್ಲಮೇಯಲಿಕ್ಕೆ ತೆರಳಿದ್ದ ನಂದಿನಿಯೆಂಬ ಶ್ರೇಷ್ಠವಾದ ಆಮುನಿಧೇನುವು- ಕಾಡಿನಿಂದ ಹಿಂದಿರುಗಿ ಆ ಹೊತ್ತಿಗೆ ಸರಿ ಯಾಗಿ ಬಂದು ಶುಭವನ್ನು ಸೂಚಿಸಿತು, ಮತ್ತು-ಕಪಿಲವರ್ಸದ ಆ ಆಕ ಳು-ಹಣೆಯಲ್ಲಿರುವ ಡೊಂಕಾಗಿ ಬೆಳೆದ ಬೆಳ್ಳ ದಲಿನ ಹುಟ್ಟು ಮಚ್ಚೆ. ಯಿಂದ, ಚಂದಿರನಿಂದ ಸಂಜೆಯು ಬೆಳಗುವಂತೆ, ಕಂಗೊಳಿಸುತಲಿದ್ದಿತಲ್ಲದೆ ಎಳೆಗರುವನ್ನು ಕಂಡಕೂಡಲೆ ಕಂಭದಂತೆ ತೋರಿವಾದ ತನ್ನ ಕೆಚ್ಚಲಿ ನಿಂದ ಹಸಿಯಿಡುತ, ಯಾಗದ ಮುಗಿವಳಿಯಲ್ಲಿನ ಮಂಗಳ ಸ್ನಾನಕ್ಕಿಂ ತಲೂ ಶುಭಕರವೆನಿಸಿದ, ತುಸಬಿಸಿಯಾಗಿರುವ ಹಾಲಿನಿಂದ ನೆಲವನ್ನು ನ ನಯಿಸುತ ನಿಂತಿತು. ಇದರಮೇಲೆ - ತನ್ನ ಕೌಲಗೊರಸಿನ ತುಳಿತದಿಂ ದೆದ್ದ ಧೂಳಿಗಳ ಸಂಸ್ಪರ್ಶದಿಂದ ಹತ್ತಿರದಲ್ಲಿರುವ ಮಹೀಪತಿಗೆ ತೀರ್ಥ ಸ್ನಾನಕ್ಕಿಂತ ಅಧಿಕವಾದ ಪವಿತ್ರತೆಯನ್ನುಂಟುಮಾಡಿತು. ಆಗ ಶಕು ನ ಶಾಸ್ತ್ರವನ್ನೆಲ್ಲ ಬಲ್ಲ ತಪೋನಿಧಿಯು-ದರ್ಶನಮಾತ್ರದಿಂದ ಪಾವನವ,೦ ರೈವನಂದಿಯು ಇರವಂಕಂಡು, ಶಿಪ್ಪನಮನದೆಣಿಕೆಯು ಕೈಗೂಡುವು ದೆಂದು ಬಗೆದು, ಭೂನಾಥನಂ ಕುರಿತು ಮತ್ತಿಂತೆಂದನು - ಎಲೈ ರಘುಕುಲ ಲಲಾಮನೇ ! ಮಂಗಳಾಂಗಿಯಾದ ಇನಂದಿನಿ ಯ-ತನ್ನ ಹೆಸರನ್ನು ಹೇಳುತ್ತಿರುವ ಸಮಯಕ್ಕೆ ಸರಿಯಾಗಿ ಬಂದು - *