ಪುಟ:ರಘುಕುಲ ಚರಿತಂ ಭಾಗ ೧.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 ಶ್ರೀ ಕಾ ರ ದ . we ನಿಂತಿತಾದಕಾರಣ ನಿನ್ನ ಮನೋರಥವು ಬಹುಬೇಗನೆ ಸಿದ್ಧಿಸುವುದೆಂ ದು ಭಾವಿಸು. ಇನ್ನು ಮೇಲೆ ನಿಯಮಾಧ್ಯಯನದಿಂದ ವಿದ್ಯೆಯನ್ನು ಪಡೆ ಯುವ ಹಾಗೆ, ನ ನಿ ವೃತ್ತಿಯವನಾಗಿ ನಿತ್ಯವೂ ಈಧೇನುವನ್ನು ಹಿಂಬಾಲಿಸಿ, ಸೇವಿಸುತ್ತಿದ್ದು ಅನ ಗ್ರಹವನ್ನು ಪಡೆ, ಆದರೆ - ವನದೊಳಗೆ ಈ ಸುರಭಿಯು ಮುಂದೆ ಹೊರಟರೆ ನೀನು ಅದರ ಹಿಂದೆಯೇನಡೆ, ನಿಂತಾಗ ನಿಲ್ಲು, ಕುಳಿತಾಗ ಕೂಡು, ಅದುನೀರ ಕುಡಿದರೆ ನೀನೂ ಕುಡಿ, ಇದೇ ಸೇವಾಪ್ರಕಾರವೆಂದರಿ, ಮತ್ತು-ನಿನ್ನ ಇಧರ ಪತ್ನಿ ಯು-ನಿತ್ಯವೂ ಭಕ್ತಿ ಭರಿತಳಾಗಿ ಮುಂಜಾನೆಯಲ್ಲಿ ಇದ್ದೇನುವನ್ನು ಗಂಧ ಪುಷ್ಟಾಕ್ಷತೆಗಳಿಂದ ಅರ್ಚಿಸಿ, ತಪೋವನದ ಎಲ್ಲಿಯವರೆಗೂ ಅದನ್ನು ಹಿಂಬಾಲಿಸುತ್ತಲೂ, ಹಾಗೆಯೇ ಸಂಜೆಯಲ್ಲಿ ಇದಿರೊಳ್ಳುತ ಲೂ ಇರಬೇಕು, ನಿನ್ನಲ್ಲಿ ಅನುಗ್ರಹ ಎಂಟಾಗುವವರೆಗೂ ನಾನುಹೇಳಿದ ರೀತಿಯಿಂದ ನೀನು ಈಧೇನುವಿನ ಸೇವೆಯಲ್ಲಿ ತಪ್ಪದೆ ಆಸಕ್ತನಾಗಿರು. ನಿನ್ನ ಕಾವ್ಯವು ನಿರ್ವಿಘ್ನವಾಗಿ ನಡೆಯಲಿ, ಯೋಗ್ಯರಾದ ಮಕ್ಕಳನ್ನು ಪಡೆದಿರುವವರೊಳಗೆ ನೀನು ಅಗ್ರಗಣ್ಯನಾಗು ಎಂದು ಹರಿಸಿದನು. ಆ ಬಳಿಕ-ಮುನಿಯ ಪ್ರಿಯ ಶಿಷ್ಯನಾದ ದಿಲೀಪನು - ಪತ್ನಿಸಹಿ ತನಾಗಿ, ತಪೋನಿಧಿಯು-ಅಗ್ನಿ ಸಾನ್ನಿಧ್ಯದಲ್ಲಿ ಪ್ರೀತಿಪೂರ್ವಕವಾಗಿ ಹೇ ಆದ ನುಡಿಯು ಎಂದಿಗ ಸವೆಯಾಗ ತಕ್ಕುದಲ್ಲವೆಂದು ಭಾವಿಸಿ, ಆನಂ ದ ಭರಿತನಾಗಿ, ಬಾಗಿದಶಿರಸ್ಸಿನಿಂದ ತಮ್ಮ ಸ್ಪಣೆಯಂತಾಗಲೆಂದು ಒ ಸ್ಪಿಕೊಂಡನು, ಆಹಿಂದೆ ವಿದ್ಯಾವಂತನೂ, ಬ್ರಹ್ಮ ಮಾನಸ ಪುತ್ರನೂ, ಸ ತೃ ಪ್ರಿಯವಚನನೂ ಆಗಿರುವ ಮುನಿಯು-ರಾತ್ರಿಯು ಹೆಚ್ಚುತ ಬರು ವುದನ್ನು ಕಂಡು, ವಿಶ್ವಂಭರಾಧಿಪತಿಗೆ ವಿಶ್ರಮಿಸಿಕೊಳ್ಳಲಿಕ್ಕೆ ಅಪ್ಪಣೆ ಯನಿತ್ತನು. ಆದರೆ-ತಿನಿಧಿಯಾದ ವಶಿಷ್ಠನು-ತನ್ನಯ ತಪೋಮುಹಿಮೆಯಿಂ ದ ಆತನಿಗೆ ರಾಜಾರ್ಹವಾದ ಸಕಲ ಸಲಕರಣೆಗಳನ್ನು ಅಣಿಮಾಡಿ ಕೊಡುವಷ್ಟು ಶಕ್ತನಾಗಿದ್ದ ರೂ, ಶಾಸ್ತ್ರದಪ್ರಕಾರ ಅರಸನನ್ನು ನಿಯಮ ಪರನನ್ನಾಗಿ ಇಟ್ಟಿರಬೇಕಾದುದು ಧುವೆಂದು ಭಾವಿಸಿ, ವನವಾಸೋ ಚಿತವಾಗಿರುವ ದರ್ಭೆಯ ಹಾಸಿಗೆಯೇ ಮುಂತಾದ ಸಾಮಗ್ರಿಯನ್ನು ಒದಗಿಸಿಕೊಟ್ಟನು.