ಪುಟ:ರಘುಕುಲ ಚರಿತಂ ಭಾಗ ೧.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೧೩ ~~ ತದನಂತರದಲ್ಲಿ ದಿಲೀಪಮಹಾರಾಜನುಕುಲಪತಿಯಾದ ಮುನಿಯ ತೋರಿದ ಎಲೆಮನೆಯನ್ನು ತನ್ನ ಧರ್ಮಪತ್ನಿಯೊಡನೆ ಒಳಹೊಕ್ಕು, ಪರಿಶುದ್ಧನಾಗಿ, ನೇಮದಿಂದಿರುವ ಆಕೆಯೊಡನೆ ದರ್ಭೆಯ ಹಾಸಿಗೆಯಲ್ಲಿ ಪವಳಿಸಿದ್ದು, ಬೆಳಗಿನ ಜಾವದಲ್ಲಿ ಮುನಿಶಿಷ್ಟರ ಅಧ್ಯಯನಾವೃತ್ತಿ ಯಿಂದ ಬೆಳಗಾಗುತ ಬಂದಿತೆಂದು ತಿಳಿದು ಎಚ್ಚತ್ತನು. - ಇಂತು ವಶಿದ್ಧಾಶ್ರಮಗಮನವೆಂಬ ಪ್ರಥಮಾಧ್ಯಾಯಂ - ಶ್ರೀ. 4 ದ್ವಿತೀಯಾಧ್ಯಾಯಂ, ಸೂಚನೆ | ಸುರಭಿಯು ತನ್ನ ಸೇವಿಸ ನರಸನ ಗುರುಭಕ್ತಿ ಯರಿದು ಮೆಚ್ಚುತ ಎರವಂ | ಕರುಣಿಸೆ ಯಗAತಿ ; ಬಾಂದೊರ ಹರತೇಜವ ತಳೆದ ತೆರದಿ ಗರ್ಭವ ತಾಳy | ಆಮೇಲೆ ಚೆನ್ನಾಗಿ ಬೆಳಗಾಯಿತು, ಅರಸೀತಿಯೂ ಎಚ್ಚತ್ತು ಹೂ ವು ಗಂಧ ಮೊದಲಾದವುಗಳಿಂದ ಆಕಳನ್ನು ಪೂಜಿಸಿದಳು, ಒಳ್ಳೆಯ ಹೆಸ ರುವಾಸಿಯನ್ನೇ ಹಣವನ್ನಾಗಿ ತಿಳಿದವನೆನಿಸಿದ ಜನರೊಡೆಯನು - ಹಾ ಲಕುಡಿದ ಕರುವನ್ನು ಕಟ್ಟಿದಬಳಿಕ ಕಾಡಿನಲ್ಲಿ ಮೇಯಿಸಲಿಕ್ಕೆ ಮುನಿಧೇನುವನ್ನು ಕಣ್ಮಯಕಳಚಿ ಬಿಟ್ಟನು, ತರುವಾಯ - ಹೆಜ್ಜೆ ಯೂರಿದ ತಾವನೆ `ಪವಿತವಾದುದನ್ನಾಗಿ ಮಾಡುತ ಆಕಳ ಮುಂದೆ ಹೊರಟಿತ್ತು, ಗರತಿಯರೊಳಗೆ ಮೊದಲನೆಯವಳೆನಿಸಿದ ಸುದಕ್ಷಿಣೆಯು - ತಪಸ್ಸಿಯ ಆಣತಿಯಂತೆ ತಪೋವನದ ಎಲ್ಲೆಯ ವರೆಗೂ ಅದನ್ನು ಹಿಂಬಾಲಿಸ ತೊಡಗಿದಳು, ವೇದಾರ್ಥವನ್ನು ಅನುಸರಿ ಸುವ ಸ್ಮತಿಯಂತೆ ಕಂಗೊಳಿಸಿದಳು. ಬಳಿಕ ಯಶೋವಂತನೆನಿಸಿ ಜ