ಪುಟ:ರಘುಕುಲ ಚರಿತಂ ಭಾಗ ೧.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ಶ್ರೀ ಕಾ ರ ದ , [ಅ ಮನೋಹರನಾಗಿರುವ ದೊರೆಯು-ಬಹುದಯಾಳು, ತನ್ನ ಪ್ರಿಯ ಪತ್ನಿ ಯನ್ನು ಅಲ್ಲಿಂದ ಹಿಂದಕ್ಕೆ ಕಳುಹಿ, ನಾಲ್ಕು ಕಡಲುಗಳನ್ನು ನಾಲ್ಕುಮೆ ಲೆಗಳನ್ನಾಗಿ ಮಾಡಿಕೊಂಡು, ಗೊರೂಪವನ್ನು ಧರಿಸಿದ ಧರೆಯಂ ಪೊರೆಯುವಷ್ಟು ಪ್ರಯತ್ನದಿಂದ ನಂದಿನಿಯನ್ನು, ಮುಸಿಯಾಣತಿಯಂತೆ ಸಂರಕ್ಷಿಸತೊಡಗಿದನು. ಇದಲ್ಲದೆ - ಆ ಆಕಳನ್ನು ಕಾಪಿಡುವ ನೋಂ ಪಿಯಲ್ಲಿ ತಾನೊಬ್ಬನೇ ಕಂಕಣವನ್ನು ಕಟ್ಟಿಕೊಂಡಿರುವುದರಿಂದ ತನ್ನನ್ನು ಹಿಂಬಾಲಿಸಿಬರುತಲಿದ್ದ ಇತರ ಅನುಚರರನ್ನೂ ಹಿಂದಿರುಗಹೇಳಿದನು ಮನುವಂಶದಸರೆಲ್ಲ ತಂತಮ್ಮ ತೋಳುಬಲದಿಂದಲೇ ತಮ್ಮನ್ನು ಕಾಪಾಡಿಕೊಂಬುದು ವಾಡಿಕೆ, ಈತನ ಶರೀರ ಸಂರಕ್ಷಣೆಯ ವಿಷಯ ದಲ್ಲಿ ಪರಾಪೇಕ್ಷೆಯೇ ಇಲ್ಲ. ಅಸಹಾಯಚೂರನಲ್ಲವೆ ? ಬಳಿಕಲಾ ಪೊಡವಿಯೊಡೆಯನು ಪಶುವಂ ಪೊರೆದ ಪರಿಯೆಂತೆಂದ ರೆ:ಬಲುಸವಿಯಾಗಿರುವ ಎಳೆಹುಲ್ಲಿನ ಹಿಡಿಗಳನ್ನು ಕೊಡುತಬಂದನು, ಆಗಾಗ ಆಕಳಿನ ಮೈತುರಿಸುತಲಿದ್ದನು, ಅದರಮೈಮೇಲೆ ನೋಣಗಳು ಬಂದು ಕುಳಿತರೆ ಮೈತಡವಿ ಹಾರಿಸುತಲಿದ್ದನು, ಅದುಹೇಗೆಹೇಗೆ ತಿರು ಗಿನಡೆದರೆ ಹಾಗಹಾಗೆಲ್ಲ ತಾನೂ, ಅದರ ಮನವೊಪ್ಪುವಂತೆ ಅನುಸರಿಸು ತಲಿದ್ದನು, ನಿಂತರೆ ನಿಂತುಕೊಂಬನು, ಹೊರಟರೆ ಮುಂದರಿವನು, ಮಲಗಿ ದರೆ ಕುಳಿತುಕೊಂಬನು, ಜಲಪಾನವನ್ನು ಮಾಡಿದರೆ ತಾನೂ ನೀರನ್ನು ಕುಡಿವನು, ಈ ಪ್ರಕಾರ ಅದರ ನೆಳಲು ಹೇಗೋಹಾಗೆ ಅನುವರಿಸ.ತಿ ದೈನು, ಹೀಗೆ ಬರುತಲಿರುವರಾಜನು - ತನ್ನ ದೊರೆತನದ ತೊಡವಾಗಿರುವ ಛತ್ರ ಚಾಮರಗಳನ್ನು ತೆಗೆದಿಟ್ಟು ಬಂದಿದ್ದ ರೂ ಮುಖದಲ್ಲಿ ಬೆಳಗುವ ಹೊಳವಿನಿಂದ, ನೋಡಿದವರಿಗೆ 'ಈತನು ದೊರೆಯೇಸರಿ' ಎಂದು ಊಹಿ ಸಲು ತಕ್ಕವನಾಗಿದ್ದನು. ಇದರಿಂದ ಹೊರಗೆ ಕಾಣಬರದ ಮದಜಲಧಾರೆ ಯನ್ನೊಳಗೊಂಡಿರುವ ಕೊಬ್ಬಿದ ಮದದಾನೆಯಂತೆ ಕಾಣಬರುತ್ತಿದ್ದನು ಆಮೇಲೆ ಸಣ್ಣ ಸಣ್ಣ ಬಳ್ಳಿಗಳನ್ನು ತೆಗೆದು ಸುರಳಿಯನ್ನು ಸುತ್ತಿ ಕೆದರಿದ್ದ ತಲೆಗೂದಲನ್ನೆಲ್ಲ ಏರಗಟ್ಟಿದನು, ಹೆದೆಯನ್ನೇರಿಸಿದ ಬಿಲ್ಲನ್ನು ಕಯ್ಯಲ್ಲಿ ಹಿಡಿದನು, ಮುನಿಯ ಆಕಳನ್ನು ಕಾಪಿಡುವ ನೆಪದಿಂದ ಕಾಡೊ೪ರುವ ಕೆಟ್ಟ ಮಿಕಗಳನ್ನು ಸದೆಬಡಿಯಲುಜ್ಗಿಸಿರುವವಂತೆ ಕಾಣಬರುತ್ತಾ ಸಂಚರಿಸುತ್ತಿದ್ದನು.