ಪುಟ:ರಘುಕುಲ ಚರಿತಂ ಭಾಗ ೧.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ದಿಲೀಪ ಮಹಾರಾಜನೇನು ಸಾಧಾರಣನೆ ? ಮಹಾನ ಭಾವನಾದ ಚಕ್ರವರಿಯಲ್ಲವೆ ? ಆತನ ಮಹಿಮೆಯು ಲೋಕದಲ್ಲೆಲ್ಲ ಹರಡಿಕೊಂಡಿ ದ್ವಿತು, ಆ ಮಹಾರದಲ್ಲಿ ಕೂಡ ಕಾಡುಮರ ಮೊದಲಾದವುಗಳೂ ಆತನಿಗೆ ರಾಜೋಪಚಾರವನ್ನು ಮಾಡುವಂತೆ ಕಾಣಬಂದುವು:- ವರುಣನಿಗೆಣೆಯೆನಿಸಿದ ಮಹಾರಾಜನು ಅರಣ್ಯದ ದಾರಿಯುದ್ದ ಕ್ಯ ಬರುತಲಿರುವಾಗ-ಹತ್ತಿರದಲ್ಲಿ ಹೊಗಳುಭಟರಿರಲಿಲ್ಲ, ಇಕ್ಕೆಲದ ಸಾ ಲುಮರಗಳ-ತಮ್ಮಲ್ಲಿ ಕುಳಿತು ಕೊಬ್ಬಿ ಕೂಗುತಲಿರುವ ಹಕ್ಕಿಗಳ ದನಿ ಯ ನೆಪದಿಂದ ಮಹಾರಾಜನಿಗೆ ಜಯವಾಗಲಿ, ಪರಾಕು,, ಎಂದೀಪ ಕಾರ ವೈತಾ೪ಕರ ಕೆಲಸವನ್ನು ಮಾಡುವಂತಿದ್ದು ವು. ದೊರೆಯು-ಊ ರಬಿಟ್ಟು ಹೊರಗೆ ಹೊರಡುವಾಗ, ಪುರವಾಸಿಗಳಾದ ಹೆಣ್ಣು ಮಕ್ಕಳು ಮಂ ಗಳಕರವಾದ ಅರಳನ್ನು ಅರಸಿನ ಶಿರದಮೇಲೆ ಎರಚುವುದು ವಾಡಿಕೆ. ಇಲ್ಲಿ ಯ ಮರಗಳಮೇಲೆ ಹಬ್ಬಿರುವ ಎಳೆಬಳ್ಳಿಗಳು-ಅಗ್ನಿಯಂತೆ ಬೆಳಗುತ ಪೂಜ್ಯನೆನಿಸಿ, ತಮ್ಮ ಬಳಿಯೊಳು ಬರುತಲಿರುವ ಆತನನ್ನು, ಎಲರಿನಿಂದ ಅಲುಗಿ, ತಮ್ಮಿಂದ ಉದಿರುತಲಿರುವ ಹೂಗಳಿಂದ ಅರ್ಚಿಸುವಂತಿದ್ದು ವು. ಯದ್ಯಪಿ-ಅರಸು ಹೆರರನ್ನಂಜಿಸುವ ಬಿಲ್ಲನ್ನು ಕಯ್ಯಲ್ಲಿ ಹಿಡಿದು ಬರುತಲಿ ದಾನೆ. ಆದರೂ, ಈತನು ಬಹುಶಾಂತನೂ ಮನೋಹರನೂ ಆಗಿ, ದಯಾ ರಸದಿಂದ ತುಂಬಿದ ಮನಸ್ಸುಳ್ಳವನೆಂದು ಹತ್ತಿರದಲ್ಲಿ ಮೇಯುತಲಿರುವ ಹುಲ್ಲೆಗಳ ಅಂತಃಕರಣಕ್ಕೆ ಗೊತ್ತಾಗುತಲಿದ್ದಿತು, ಅದರಿಂದಲೇ ದೂರಸ ರಿಯದೆ, ತಲೆಯನ್ನೆತ್ತಿ, ಅಲುಗದೆಯ, ರೆಪ್ಪೆ ಬಡಿಯದೆಯೂ, ಆತನನ್ನು ನಿರ್ಭಯವಾಗಿ ನೋಡುತ್ತಿದ್ದು ವ, ತಮ್ಮ ಕಣ್ಣುಗಳು ಬಲು ಅಗಲವಾಗಿ ಹುಟ್ಟದುದು ಸಫಲವಾಯಿತೆಂದು ಸಂಭಾವಿಸುವಂತೆ ಕಾಣಬಂದುವು. ನಿಮ್ಮಲವಾದ ಇಲ್ಲವೆ ಮಲಿನವಾದ ಮನಸ್ಸೇ, ಇವನುಗೆಳೆಯ ಅಥವಾ ಹಗೆ ಎಂಬುದನ್ನು ಸೂಚಿಸುತ್ತದೆಯಲ್ಲವೆ ? ಹೀಗೆ ಇನ್ನು ಸ್ವಲ್ಪ ಮುಂದೆ ಬರುವಲ್ಲಿ-ಬಿದಿರುಮೆಳೆಗಳ ಜಳವೆಯ ಸಂದುಗಳೊಳಗೆ ಗಾಳಿಯ ತೂರಿ, ಸದ್ದಾ ಗುತಲಿದ್ದುದರಿಂದ, ವನದೇವತೆಗಳು-ಪೊದೆಗಳಲ್ಲಿ ಕುಳಿತು, ಕೊಳಲ ನೂದುತ, ತನ್ನ ವಂಶಾವಳಿಯ ಹೆಸರುವಾಸಿಯನ್ನು, ಹಾಡುಗಳನ್ನಾಗಿ ಹೇಳಿಕೊಳ್ಳುವಂತಿರುವುದನ್ನು ಕೇಳುತ ಬಂದನು. ಅಷ್ಟು ಹೊತ್ತಿಗೆ ಬೆಟ್ಟ ಗಳ ಸಂದು ಹೊಳೆಗಳ ತುಂತುರು ಹನಿಗಳಿಂದ ನೆನೆದು, ಕಾಡುಮರಗಳನ್ನ