ಪುಟ:ರಘುಕುಲ ಚರಿತಂ ಭಾಗ ೧.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಶ್ರೀ, ಶಾ ರ ದಾ , [ಅ' • «soc• •'ow ಬಡವರಿಗೆ ಆಸರೆಯೆನಿಸಿ, ಕೀರಿಸಂಪನ್ನನಾಗಿರುವಆ ದೊರೆಯುತನ್ನ ಹೆಂಡತಿಯೊಡನೆ ಮಕ್ಕಳ ಸಲಕ್ಕೋಸ್ಕರ ಆಕಳನ್ನು ಸೇವಿಸುವ ನೋಂಪಿಯನ್ನು ಕ್ರಮತಪ್ಪದೆ ನೇಮದಿಂದ ಆಚರಿಸುತ್ತಾ, ಇಪ್ಪ ತೊಂದು ದಿವಸಗಳನ್ನು ಕಳೆದನು. ಮಾರನೆಯ ದಿನವೂ ಎಂದಿನಂತೆ ಆಕಳನ್ನು ಬಿಟ್ಟುಕೊಂಡು ಕಾಡಿಗೆ ಬಂದನು. ಮುನಿಯು ಹೋವು ಧೇನುವು-ತನ್ನ ಆಳುತನದಲ್ಲಿರುವ ಮಹಾರಾಜನಿಗೆ ತನ್ನಲ್ಲಿರುವ ಭಕ್ತಿಯ ಬಗೆಯನ್ನು ಪರಿಕಿಸಬೇಕೆಂದು ನೆನೆಯಿತು. ತಾನು ಹುಲ್ಲುಮೇಯುತ ಲಿರುವಾಗ - ದೊರೆಯ ದಿಟ್ಟಿಯು ಮತ್ತೊಂದೆಡೆಯಲ್ಲಿ ನಟ್ಟಿರುವುದಂ ಕಂಡು, ಇದೇ ಸಮಯವೆಂದು ಭಾವಿಸಿ, ಹತ್ತಿರದಲ್ಲಿದ್ದ, ಗೌರಿಗೆ ತಮ್ಮನ್ನ ನೆಯಾದ ಬೆಟ್ಟದ ತಪ್ಪಲಲ್ಲಿ ದೇವಗಂಗೆಯು ಹರಿಯುತಲಿದ್ದುದರಿಂದ, ಅದರ ಇಕ್ಕೆಲದಲ್ಲಿಯೂ ಹುಲ್ಲು ಬಲುಸೊಂಪಾಗಿ ಬೆಳದಿದ್ದು ದಂ ಕಂಡು, ಅದರ ಪಕ್ಕದೊಳಿರುವ ಒಂದು ಗವಿಯನ್ನು ಹೊಗುತಲಿದ್ದಿತು. ಆದರೆನಿಂಗವೇ ಮೊದಲಾದ ದುಷ್ಮಮಿಕಗಳು ಮಹಾಮಹಿಮೆಯ ಮುನಿಯಾ ಕಳನ್ನು ತೊಂದರೆಪಡಿಸಬೇಕೆಂದು ತಮ್ಮ ಮನದೊಳಗೂ ನೆನೆಯಲಾ ರವು ಎಂದು ಅರಿತಿದ್ದು ದರಿಂದಲೇ - ದೊರೆಯ ದೃಷ್ಟಿಯು-ಆ ಬೆಟ್ಟದ ಚಲುವಿಕೆಯನ್ನು ನೋಡುವುದರಲ್ಲಿ ನೆಲೆಗೊಂಡಿದ್ದಿತು. ಆಗ ಆತನಿಗೆ ಅರಿವಿಲ್ಲದೆಯೇ ಎಲ್ಲಿಂದಲೋ ಹಾರಿಬಂದ ಒಂದು ಸಿಂಹವು ಆ ಧೇನು ವನ್ನು, ಹಾ ! ಹಿಡಿದು ಸೆಳೆಯಿತಲ್ಲಾ!! ಹಾಗಾದಕೂಡಲೆ ಆಕಳು ಬಹು ದೀನಸ್ಸರದಿಂದ ಅಮ್ಮಾ ಎಂದು ಕೂಗಿಕೊಂಡಿತು, ಒಡನೆ ಆ ಗವಿಯಿಂದ ಆ ಕೂಗಿನಂತೆಸೆಲೆಯಹೊರಟಿತು.ಆ ಸದ್ದು -ದೀನರಲ್ಲಿಬಲುದಯೆಯನ್ನು ತೋರುವ ದೊರೆಯ ಬೆಟ್ಟದಲ್ಲಿ ನಟ್ಟಿದ್ದ ದಿಟ್ಟಿಯನ್ನು, ಹಗ್ಗ ವನ್ನೆಸೆದು ಸೆಳೆದಂತೆ ತನ್ನ ಕಡೆಗೆ ಎಳೆದು ತಿರುಗಿಸಿತು. ತತ್‌ಕ್ಷಣವೇ ಬಿಲ್ಲಾಳಾದ ಅರಸು-ಹಿಂದಿರುಗಿ ನೋಡಿದನು, ಆದರೇನು ? ಇನ್ನು ಹೇಳತಕ್ಕುದೇನು? ಪಾಟಲವರ್ಣದ ಆಕಳಿನಮೇಲೆ ಕೆದರಿದ ತಲೆಗೂದಲಿನಿಂದ ತುಂಬಿದ ಮೋರೆಯುಳ್ಳ ನಿಂಹವು ಕುಳಿತಿದೆ, ಬೆಟ್ಟದ ಟೊಂಕದೊಳಗೆ ಕೆಂಗಾವಿ ಗಲ್ಲಿನಿಂದ ತುಂಬಿದ ನೆಲದಮೇಲೆ ಅರಳಿದ ಹೂಗಳಿಂದ ತುಂಬಿ ನಿಂತಿರುವ ಬಾಗೆಯಮರದಂತೆ ಕಾಣಬರುತಲಿದೆ.