ಪುಟ:ರಘುಕುಲ ಚರಿತಂ ಭಾಗ ೧.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨). ರಘುಕುಲಚರಿತಂ Jಳ್ಳಿ • ••••••••••••• www w+/ + 7+ ದೊರೆಯು - ಸಿಂಹದಂತೆ ಗಂಭೀರಗನುನವುಳ್ಳವನು, ಹಗೆಗಳ ಹುಟ್ಟನ್ನಡಗಿಸಿದವನು, ಮರೆಹೊಕ್ಕವರನ್ನು ಕಾಪಾಡತಕ್ಕವನೂ ಹೌದು. ಅದರಿಂದ ಸಿಟ್ಟು ಹತ್ತಿತು, ಕಣ್ಣು ಕೆಂಪಡರಿತು, ನಿಂಹವನ್ನು ಕೊಲ್ಲ ತಕ್ಕುದೇ ಸರಿಯೆಂದು ಗೊತ್ತುಮಾಡಿಕೊಂಡನು. ತನಗಾದ ತಿರಸ್ಕಾ ರವನ್ನು ಸಹಿಸಲಾರದೆಹೋದ, ಹೆದೆಯನ್ನಿರಿಸಿದ ಬಿಲ್ಲಿನಲ್ಲಿ ಬಾಣವನ್ನು ತೊಟ್ಟು ಇಡಬೇಕೆಂದು ಸರಳನ್ನು ಹಿರಿದೆತ್ತಲು ಬತ್ತ೪ ಕೆಗೆ ಬೆರಳನ್ನು ಹಾಕಿದನು. ಅಹಹ ! ಇದೊಂದಚ್ಚರಿ !! ಹೊಡಿಯಲಿಕ್ಕೆ ಅಣಿಯಾಗುತಲಿರುವ ಅರಸಿನ ಬಲಗೈ ಬತ್ತಳಿಕೆಯ ಬಾಣದ ಬುಡದಲ್ಲಿ ನೆಲಸಿದೆ, ಬೆರಳಿನ ಉಗುರಿನ ಕಳೆಯು ಸರಳನ ಗರಿಯಲ್ಲಿ ಹರಡಿದೆ, ಮುಂದೆ ಏನೊಂದು ಕೆಲಸವೂ ನಡೆಯದೆ,ಅರಸು-ಅಲುಗದೆ ನಿಂತಹಾಗೆಯೇ ನಿಂತು,ಚಿತ್ರದಲ್ಲಿ ಬರೆದ ಗೊಂಬೆಯಂತೆ ಇರುತಿದ್ದ ನು. ಅಯ್ಯೋ ! ತೋಳುಬಲಕ್ಕೆ ತಡೆಯುಂಟಾಯಿತು, ಅರಸಿನ ರೋಪಕ್ಕೆ ಸಾವಿಲ್ಲದಂತಾಯಿತು, ತನ್ನ ತೇಜಸ್ಸು - ಇದಿರಿಗೆ ಅಪರಾಧಿಯಾಗಿ ನಿಂತಿರುವ ನಿಂಹವನ್ನು ತಾಗದೆ ಹೋಯಿತು. ಆಗ ಏನಮಾಡಬಲ್ಲನು ? ಮಂತ್ರದಿಂದಲೂ ಮೂಲಿಕೆಯಿಂದ ಕೌಲ್ಯವನ್ನು ತಡೆದಾಗ, ಮಹಾಸರ್ಪವು ಹೇಗೊ ಹಾಗೆ, ಮಹಾರಾಜನು - ಹೊಟ್ಟೆಯಲ್ಲಡಗಿದ ಪೌರುಷದ ಅಥವಾ ಶೌದ ಇಲ್ಲವೇ ತೇಜಸ್ಸಿನ ಹೊನ್ನಿನಿಂದ ಕಳವಳಿಸಿ, ಕುದಿಯುತಲಿದ್ದನು. ಬಹು ದೊಡ್ಡ ಮನುಷ್ಯರಲ್ಲಿ ಮೊದಲನೆಯವನೆಂದು ಗಣನೆಗೆ ಬಂದಿದಾನೆ. ಮನುಕುಲಲಲಾಮನೂ ಹೌದು. ಸಿಂಹಕ್ಕಿಂತ ಅಧಿಕವಾದ ಸತ್ವವುಳ ವನೆಂಬುದರಲ್ಲಿ ಸಂದೇಹವೇ ಇಲ್ಲ, ಆದರೇನು ? ತನಗಾದ ಅವಸ್ಥೆಯನ್ನು ಕಂಡು ನಾಚಿಕೆಯಿಂದ ಅಚ್ಚರಿಗೊಂಡಿದಾನೆ ಅಂತಹ ಸಮಯದಲ್ಲಿ. ಆಕಳನ್ನು ಅಡಗಿಸಿಕೊಂಡಿರುವ ನಿಂಹವು - ವಸುಮತೀಶನಿಗೆ ವಿಸ್ಮಯ ವನ್ನುಂಟುಮಾಡುತ್ತಾ, ಮನುಷ್ಯರ ಮಾತಿನಿಂದ ಇಂತೆಂದಿತು - ಎಲೈ ಮಹೀಪಾಲನೇ ! ಸಾಕು, ಸಾಕು, ಇನ್ನು ಸುಮ್ಮನಿರು, ವೃಥಾ ಏಕೆ ಶ್ರಮೆಪಡುತ್ತೀಯೆ ? ಬಲು ಒದ್ದಾಟದಿಂದ ನೀನೊಂದು ವೇಳೆ ಬಾಣವನ್ನು ಇಟ್ಟರೂ, ಅದು-ಈ ನನ್ನಲ್ಲಿ ಏನೊಂದು ಕೆಲಸವನ್ನೂ ಮಾಡಲಾರದು. ಸುಮ್ಮನೆ ತಿಬ್ಬಳಿಯಿಲ್ಲದ ಕಜ್ಜವಮಾಡಲುಜ್ಗಿಸಬೇಡ,