ಪುಟ:ರಘುಕುಲ ಚರಿತಂ ಭಾಗ ೧.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳಿ ಶ್ರೀ ಕಾ ರ ಬಾ . ಮರವನ್ನು ರುಳಿಸುವ ಮಾರುತನ ವೇಗವು- ಬೆಟ್ಟವನ್ನುರುಳಿಸುವುದರಲ್ಲಿ ಮುಂದರಿವದುಂಟೆ ? ಚೆನ್ನಾಗಿ ಯೋಚಿಸಿನೋಡು; ಮತ್ತು ನಾನಾರು ? ಎಂಬುದನ್ನು ಅರುಹುವೆನು ಕೇಳು ;- ಪರಮೇಶ್ವರನು - ಮೊಟ್ಟಮೊದಲು ನನ್ನ ಬೆನ್ನಿನಮೇಲೆ ಬಂದ ಹೆಜ್ಜೆಯನ್ನೂರಿ, ಬಳಿಕ ಕೈಲಾಸಗಿರಿಯಂತೆ ಬೆಳಗಿರುವ ತನ್ನ ವಾಹನ ವಾದ ಗೂಳಿಯನ್ನು ಏರುತ್ತಾನೆ, ಈ ನನ್ನ ಬೆನ್ನು ಆತನ ಒಲುಮೆಯಿಂದ ಪವಿತ್ರ ಮಾದುದು. ಪರಶಿವನ ಸೇವಕನಾದ ನಿಕುಂಭನಿಗೆ ನಾನು ಮಿತ್ರನು. ಹೆಸರಿನಲ್ಲಿ ನನ್ನನ್ನು ಕುಂಭೋದರನೆಂದು ಕರೆಯುತ್ತಾರೆ. ಇದಕೋ, ಇದಿರಿಗೆ ಇತ್ಯ ಕಾಣಬರುವ ದೇವದಾರು ತರುವನ್ನು ನೋಡು. ಇದನ್ನು ಶಂಕರನು - ತನ್ನ ಮಗನಂತೆ ಭಾವಿಸಿಕೊಂಡಿದಾನೆ. ಕುಮಾರಸ್ವಾಮಿಯು-ತನ್ನ ತಾಯಿಯ ಹಾಲಿನ ರುಚಿಯನ್ನು ಕಂಡಿರುವ ಹಾಗೆ ಈ ದೇವದಾರುವೂ, ಗೌರಿಯು ತನ್ನ ಕರದಲ್ಲಿನ ಚಿನ್ನದ ಕೊಡದಿಂ ದೆರೆದ ಅಮೃತರಸದ ರುಚಿಯನ್ನು ಬಲ್ಲುದು. ಹಿಂದೆ ಒಂದುಸಾರಿ-ಮದವೇ ರಿದ ಕಾಡಾನೆಯೊಂದು ಇಲ್ಲಿಗೆ ಬಂದು, ತನ್ನ ಮೈತೀಟೆಯನ್ನು ಕಳೆದುಕೊ ಳ್ಳಲು ಈ ಮರದ ತಾಳನ್ನು ತನ್ನ ಕೆನ್ನೆಯಿಂದ ತೀಡಿತು. ಅದರಿಂದ ಇದರ ತಿಗಡು ಮೇಲಕ್ಕೆದ್ದಿತು. ಆಗ - ಸರ್ವಮಂಗಳಯು-ರಕ್ಕಸರ ಬಾಣದ ಪೆಟ್ಟಿನಿಂದ ಗಾಯವಾಗಿ ಚರವು ಸುಲಿದ ತನ್ನ ಕುಮಾರನನ್ನು ನೋಡಿದರೆ ಹೇಗೋ ಹಾಗೆ, ಈ ದೇವದಾರುವನ್ನು ನೋಡಿ ದುಃಖಿಸಿ ದಳು. ಇದರಲ್ಲಿ ಆಕೆಗಿರುವ ಪುತ್ರವಾತ್ಸಲ್ಯವನ್ನು ಇನ್ನು ಹೇಳತಕ್ಕು ದೇನು? ಇದನ್ನು ನೋಡಿ ಕನಿಕರಪಟ್ಟ ಶಿವನು-ನಿಟ್ಟುಗೊಂಡು, ಅಂದ ಮೊದಲ್ಗೊಂಡು ನನಗೆ ಸಿಂಹದ ರೂಪವನ್ನು ಕೊಟ್ಟು ಇಲ್ಲಿರುವಂತೆ ಕಟ್ಟು ಮಾಡಿದನು, ಆತನ ನೇಮದಿಂದ ಆನೆ ಮೊದಲಾದ ಮೃಗಗಳಿಗೆ ಎಡೆ ಲ್ಲದಂತೆ ನಾನು ಈ ಬೆಟ್ಟದ ಗವಿಯೊಳಗೆ ವಾಸಮಾಡುತಲಿದೇನೆ, ಮಹಾ ದೇವನು-ಹಸಿದಹೊತ್ತಿಗೆ ಇಲ್ಲಿಗೆ ಬರುವ ಪ್ರಾಣಿಗಳ ನಿನಗೆ ಆಹಾರ ವೆಂದೂ ಗೊತ್ತು ಮಾಡಿರುವನು. ಮುಕ್ಕಣ್ಣನ ಕಟ್ಟಲೆಯಿಂದ ಹೊತ್ತಿಗೆ ಸರಿಯಾಗಿ ನನಗೆ ಒದಗಿರುವ ಈ ಮಿಕದ ರಕುತವು - ರಾಹುವಿಗೆ ಚಂದಿ ರನ ಸೊದೆಯು ದೊರೆತಂತಾಗಿದೆ. ಹಸಿವೆಗೊಂಡಿರುವ ನನ್ನ ತಣಿವಿಗೆ ಅಷ್ಟು ಸಾಕು, ನಿನ್ನ ಒಲದ ಹುರುಡು-ನನ್ನಲ್ಲಿ ಬೆಲೆಗೊಳ್ಳಲರಿಯದು.