ಪುಟ:ರಘುಕುಲ ಚರಿತಂ ಭಾಗ ೧.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sy ಶ್ರೀ ಶಾ ರ ದ . vvvvv ಇದರಮೇಲೆ ಇನ್ನೊಂದು ವಿಶೇಷವುಂಟು -ಬಲ್ಲವರು ಅನ್ನೋನ್ಯ ಸಲ್ಲಾಪದಿಂದ ಗೆಳತನವು ಮೊಳೆಯುವುದೆಂದು ಹೇಳುವರು. ಈ ಹಳು ವದೊಳು ಕಲೆತ ನಮ್ಮಿಬ್ಬರಿಗೂ ಅದು ನೆರವೇರಿದೆ. ಆದಕಾರಣ ಪಶು ಪತಿಯ ಅನುಚರನಾದ ನೀನು ಒಡನಾಡಿಯಾದ ನನ್ನ ಬಯಕೆಯನ್ನು ಭಂಗಪಡಿಸಬಾರದು ಎಂದು ಹೇಳಿ ವಿ-ವಿಸಿದನು. ಇಂತೆಂದ ದಿಲೀಪನ ನುಡಿಯನ್ನಾಲಿಸಿ, ಕೇಸರಿಯು-ಅವನ ಮನದೆ ಣಿಕೆಯಂತೆ ನಡೆಯಿಸಲು ಹಾಗೆಯೇ ಆಗಲೆಂದು ಮಾತುಕೊಟ್ಟಿತು. ಕೂಡಲೆ ಕ್ಷಿತಿಪತಿ ಯ ಕೈ ಕಟ್ಟು ಬಿಟ್ಟಿತು. ಭೂಪತಿಯು-ಬಾಣ ಬತ್ತ ೪ಕೆಗಳನ್ನೊಂದೆಡೆಯೊಳು ತೆಗೆದಿಟ್ಟು, ದೇಹಾಭಿಮಾನವನ್ನು ಬಿಟ್ಟು, ಆ ಹರಿಯ ಇದಿರಿಗೆ ತನ್ನ ದೇಹವನ್ನು ಅಡಗಿನುಂಡೆಯಂತೆ ಒಪ್ಪಿಸಲು ಹತ್ತಿರಕ್ಕೆ ಬಂದನು, ಮತ್ತು - ಶಿರಬಾಗಿ ನೆಲಮೊಗನಾಗಿ ಮಲಗಿದನು. ಈಗಾಗ ಹರಿಯು ತನ್ನ ಮೇಲೆ ತೀವ್ರವಾಗಿ ಕುಪ್ಪಳಿಸಿ ಬೀಳುವುದೆಂದು ಇದಿರುನೋಡುತಲಿದ್ದನು, ಆಗ-ಮುಗಿಲಿನಲ್ಲಿ ನಿಂತ ದೇವರ್ಕಳು ತಮ್ಮ ಕರದಿಂದ ನರಪತಿಯಮೇಲೆ ಭೂಮಳೆಗರೆದರು. ಆ ಬಳಿಕ - ಸೊದೆಯಂತೆ ಸೊಗಯಿಸುತಲಿ ರುವ ' ಎನ್ನ ಮುದ್ದು ಕಂದನೇ ಮೇಲಕೇಳು ? ಎಂದು ಕೇಳ ಎಂದ ನುಡಿಯನ್ನು ಕೇಳಿದ ನರಪತಿಯು-ಎದ್ದು ನಿಂತು, ತನ್ನನ್ನು ಹತದ ತಾಯಿಯಂತೆ ಇದಿರಿಗೆ ನಿಂತು ಹಾಲನ್ನು ಬಟ್ಟಡಿಸುತಲಿರುವ ಪಯನಿಯನ್ನು ಮಾತ್ರ ಕಂಡನಲ್ಲದೆ, ಸಿಂಹವನ್ನು ಕಾಣಲೇ ಇಲ್ಲ. ಮುಂದೋರದೆ ಅಚ್ಚರಿಗೊಂಡು ಅಲು ಗದೆ ನಿಂತನು. ಆಗೆಲಾ ಮುನಿಧೇನುವು - ಎಲೈ ಸಾಧುವೇ ! ನಿನ್ನ ಬಕುತಿಯ ನೆಲೆಯನ್ನರಿಯಲು ಇದೊಂದು ಇಂದ್ರಜಾಲವನ್ನು ಕಲ್ಪಿಸಿ ಪರಿಕಿಸಿದೆನು. ಮುನಿಯ ಮೈಮೆಯಿಂದ ಮೃತ್ಯುವೂ ನನ್ನನ್ನು ಇರಿ ಯಲಾರನು. ಇನ್ನುಳಿದ ಕರಮಿಕಗಳು ಇದಿರಿಸಬಲ್ಲವೆ ? ಎಲೈ. ಕಂದನೇ ! ನೀನು ನಿನ್ನ ಕುಲಗುರುವಿನಲ್ಲಿ ತೋರಿದ ಭಕ್ತಿಯಿಂದಲೂ, ನನ್ನಲ್ಲಿ ತೋರಿದ ಕನಿಕರದಿಂದಲೂ ನನವಾರ ಮೆಚ್ಚಿರುವೆನು, ನಿನಗೆ ಬೇಕಾದ ವರವನ್ನು ಕೇಳು, ಪಾಲನ್ನು ಮಾತ್ರ ಕರೆವ ಪಶುವನ್ನಾಗಿ ನನ್ನನ್ನು ನೆನೆಯಬೇಡ, ಪಸನ್ನಳಾದರೆ, ಕೋರಿದ ಕೋರಿಕೆಗಳನ್ನೆಲ್ಲ ಕರೆವ ಕಾಮಧೇನುವೆಂದು ತಿ೪ - ಎಂದಿತು.