ಪುಟ:ರಘುಕುಲ ಚರಿತಂ ಭಾಗ ೧.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕಾ ರ ದಾ ,

ಆಘ್ರಾಣಿಸಿದನು, ಬಹು ಹಿತವಾಗಿದ್ದಿತು, ಬಿಸಿಲಿನ ಬೇಗೆಯಿಂದ ಬತ್ತಿದ ಕಾಡುಕೊಳದೊಳಗಣ ಬಿರಿದ ನೆಲವನ್ನು, ಮುಂಗಾರು ಹನಿಗಳು ಬೀಳುತಲಿರುವಾಗ, ಆಘಾಣಿಸುವ ಆನೆಯಂತೆ, ತಿರೆಯಾಣ್ಮನೂ ತಣಿ ಯಲೇ ಇಲ್ಲ. ಎಣ್ಣೆ ಸೆಯೋಳಿದಿರಾಳಿಲ್ಲದ ಚಕ್ರವರಿಯಾಗುವ ತನ್ನ ಸುತನು-ದೇವಲೋಕವನ್ನು ದೇವೇಂದ್ರನು ಹೇಗೋಹಾಗೆ, ಈ ಭೂಲೋ ಕವನ್ನು ಭುಜಿಸುವನು ಎಂದು ತಿಳಿದೇ, ರವಸತ್ತರಗಳಾದಭೋಗವಸ್ತು ಗಳು ಬಹಳವಾಗಿದ್ದರೂ, ಅವುಗಳನ್ನೆಲ್ಲ ತೊರೆದು, ಮಹಾರಾಣಿಯುಮೊಟ್ಟಮೊದಲು ಅಂತು ಇನಿದೆನೆಸಿದ ಮಣ್ಣನ್ನು ತಿನ್ನಲು ಮನವಿಟ್ಟಳು. ಹೀಗಿರಲೊಮ್ಮೆ ಕೋಸಲೇಶನು -. ಮಗಧರಾಜನಂದನೆಯಾದ ದಿನ ಮನದನ್ನೆಯು- ನಾಚಿಕೆಗೊಂಡು ತನ್ನ ಮನದ ಬಯಕೆಯನ್ನು ನನ್ನೆ; ದಿಗೆ ತುಸವಾದರು ತಿಳಿಸದಿರನಳ , ಆವುದನು ಬಯಸುವಳೆಂಬುವನ ನೀವಾದರು ತಿಳಿದು ಹೇಳಿ ,, ಎಂದು ಸುದಕ್ಷಿಣೆಯ ಗೆಳತಿಯರನ್ನು ಆದರದಿಂದ ಅಡಿಗಡಿಗೂ ಬೆಸಗೊಳ್ಳುತ್ತಲಿದ್ದನು, ಮಾಗಧಿಯು - ಬಯ ಕೆಯ ಹೊಯಿಲನ್ನು ತಾಳಲಾರದೆ, ಆವಾವುದನು ಬಯಸುತಬಂದಳೊ, ಆ ಕೂಡಲೆ ತಂದು ಇದಿರೋಳಣಿಮಾಡುತಲಿರುವ ಆಯಾಯ ವಸ್ತು ವನ್ನೂ ನೋಡುತಬಂದಳು. ಹೆದೆಯನೇರಿಸಿದ ಬಿಲ್ಲನ್ನು ಹಿಡಿದು ಹೊರ ಡುವ ಆ ದೊರೆಗೆ ಇಸ್ಮವಾದುದು - ದೇವಲೋಕದಲ್ಲಿಯೂ ಅಸದಳವೆ ನಿಸುತಲಿರಲಿಲ್ಲ, ಕಾಲಕ್ರಮದಿಂದ ಬಯಕೆಯ ಬಲೆಯು ಕಡಮೆ ಯಾಗುತ ಬಂದಿತು, ಅವಯವಗಳು ಹೊರನಾಗುತ ಬಂದುವು. ಆಗ ಅರಸೀತಿಯ.-ಹಣ್ಣೆಲೆಗಳುದಿ ರುತಬರುವಲ್ಲಿ, ಪೊಸತೆನೆಸಿ ಹೊಮ್ಮುವ ತ೪ ರುಗಳಿಂದ ತುಂಬಿದ ಎಳೆಯ ಬಳ್ಳಿಯಂತೆ ರಾರಾಜಿಸುತಲಿದ್ದಳು. ಆಗಲಾ ಧೀರನಾದ ದೊರೆಯು - ಇನ್ನು ಸ್ವಲ್ಪ ಕಾಲ ಕಳೆಯಲು, ನಿಧಿಗರ್ಭವಾದ ವಸುಮತಿಯಹಾಗೂ, ಅಂತರದೊಳಗಿಯನ್ನೊಳಗೊ | ಡಿರುವ ಶಮಿಯಹಾಗೂ, ಗುಪ್ತಸಲಿಲವಾದ ಸರಸ್ವತೀ ಸರಿತ್ತಿನಹಾಗೂ, ಗರ್ಭಿಣಿಯಾದ ತನ್ನ ಗೃಹಿಣಿಯನ್ನು ಸಂಭಾವಿಸಿದನು, ಅದುವರೆಗೆ ಒದಗಿದ ಪುಂಸವನನೇ ಮೊದಲಾದ ಉತ್ಸವಗಳನ್ನು ತನ್ನ ಪ್ರಿಯಳ ಲ್ಲಿರುವ ಪ್ರೇಮಕ್ಕ, ಮನಸ್ಸಿನ ಉತ್ಸಾಹಕ್ಕೂ, ತೋಳುಬಲದಿಂದ ದಿಗಂತರಗಳಲ್ಲಿ ಗಳಿಸಿದ ಸಂಪದಗಳಿಗೂ, ತನ್ನ ಉದಾರ ಭಾವಕ್ಕೂ,