ಪುಟ:ರಘುಕುಲ ಚರಿತಂ ಭಾಗ ೧.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಕರಿತಂ လို ಇm ww• -ಗಿ+ • • • • • - - ೧• • • • • • • • • • • • • •wwwmv YYY+++++ * * * * * * * * * * * /* * \ Y ತಕ್ಕಂತೆ ಕ್ರಮವಾಗಿ ನೆರವೇರಿಸಿದನು, ಅರಸಿತಿಯು ಪೂರ್ಣಗರ್ಭಿಣಿ ಯಾದಳು, ಅಹ್ಮದಿಕ್ಕಾಲಕರ ಅಂಶಗಳ ಮೊತ್ತವೇ ಆಕೆಯ ಗರ್ಭ ದಲ್ಲಿನ ಶಿಶುವಾಗಿದ್ದಿತು. ಒಂದಾನೊಂದು ದಿವಸ - ರಾಜನು ರಾಣಿವಾ ಸಕ್ಕೆ ಬರುತ್ತಿದ್ದನು. ಅರಸಿಯು-ಆನನನ್ನಿ ದಿಲ್ಲೊಂದು ಅಂಜಲಿಯನ್ನು ಜೋಡಿಸಿ, ಮರಾದೆಯನ್ನು ಪಾಲಿಸಬೇಕೆಂದು, ಗರ್ಭಭಾರದಿಂದ ಪೀಠ ವಂ ಬಿಟ್ಟೇಳುವ ಸಡಗರದಲ್ಲಿ ಬಳಲುತ ಚಂಚಲಾಕ್ಷಿಯಾದಳು, ಮಡದಿ ಯನ್ನು ಮಹಾರಾಜನು ನೋಡಿ, ಆನಂದಭರಿತನಾದನು. ಬಾಲಚಿಕಿ ತೈಗಳನ್ನು ಬಲ್ಲ ಜಾಣರಾದ ಬಿಷಗೂರರು - ಗರ್ಭವು ಸುಖವಾಗಿ ಬೆಳೆ ಯುವಂತೆ ಚಿಕಿತ್ಸೆಗಳನ್ನಾಚರಿಸಿದರು, ಅರಸಿತಿಯು ಪ್ರಸವಾಭಿಮು ಖಿಯಾಗುತಲಿದ್ದಳು, ಆಗಲಾ ಭೂಮಿಪಾಲನು - ಮಳೆಗಾಲದ ಮೋಡ ಗಳನ್ನೊಳಗೊಂಡ ಮುಗಿಲಿನಂತಿರುವ ಮಹಿಪ್ತಿಯನ್ನು ನೋಡಿ ಹರ್ಷ ಗೊಂಡನು. ಇನ್ನೇನು ! ಹತ್ತನೆಯ ತಿಂಗಳು ಬಂದಿತು, ಸೂರನೇ ಮೊದ ಲಾದ ಐದು ಗ್ರಹಗಳೂ-ಅಸ್ತಮಯವನ್ನು ಪಡೆಯದೆ, ತಂತಮ್ಮ ಉಚ್ಚ ಸ್ಥಾನಗಳಲ್ಲಿದ್ದು, ಭೂಪಾಲಪುತ್ರನ ಭಾಗ್ಯಸಂಪದವನ್ನು ಸೂಚಿಸುತ ಲಿದ್ದುವು. ಶಚೀದೇವಿಗೆಣೆಯಾದ ಸುದಕ್ಷಿಣೆಯು-ಪ್ರಭಾವವಂತೂ ತ್ಸಾಹಗಳೆಂಬ ಸಾಧನಗಳನ್ನೊಳಗೊಂಡಿರುವ ಶಕ್ತಿಯು ಅಪಾರವಾರ್ಧ ಅರ್ಥ ವನ್ನು ಹೇಗೋಹಾಗೆ, ಶುಭಸಮಯದಲ್ಲಿ ಸುಕುಮಾರನನ್ನು ಹಡೆ ದಳು. ದೆಸೆಗಳು ನಿಲಗಳಾಗಿ ಕಾಣಬರುತ್ತಿದ್ದು ವು, ವಾಯುಗಳು ಹಾಯಾಗಿ ಬೀಸತೊಡಗಿದವು, ಅಗ್ನಿಯು ಬಲವಂದು ಹವಿಸ್ಸನ್ನು ಕೈಗೊಂಡನು, ಆ ಕಾಲದಲ್ಲಿ ಎಲ್ಲವು ಶುಭವನ್ನು ಸೂಚಿಸುತಲಿದ್ದಿತು. ಅಹಹ ! ಇಂತವರ ಹುಟ್ಟಿ ನಾಡಿನ ಮೇಲೆ ಗಲ್ಲವೆ ? ಹೊಲೆಮನೆ ಯೊಳಗೆ ಹಾಸಿಗೆಯಲ್ಲಿ ಸವಳಿಸಿರುವ ಮೇಲಾದ ಹುಟ್ಟುಳ ಹಸುಳೆಯ ಮೈಬೆಳಕು ಸುತ್ತಲೂ ಹರಡಿದಿ ತು, ಆ ಮನೆಯಲ್ಲಿ ನಟ್ಟಿರುಳೊಳಿಟ್ಟ ದೀವಿಗೆಗಳು - ಚಿತ್ರದಲ್ಲಿ ಬರೆದವುಗಳಂತೆ ಕಳೆಗುಂದಿದ್ದು ವು. ಕೂಡಲೆ ರಾಣಿವಾಸದ ಜನರು – ದುಡದುಡನೆ ಓಡಿಬಂದು « ಪುತ್ರೋತ್ಸವವಾ ಯಿತು - ಪ್ರಭುವೇ ?” ಎಂದಮುರ್ದಣೆಯಾದ ವರ್ಣಾವಳಿಯನ್ನು ಉಸಿರಿದರು, ಅರಸು - ಅವರಿಗೆ ಚಂದಿರನಂತೆಸೆವ ಛತ್ರ ಮತ್ತು