ಪುಟ:ರಘುಕುಲ ಚರಿತಂ ಭಾಗ ೧.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ರಘುಕುಲಚರಿತಂ •••••••••••••m wwwಯ ಆ ಬಳಿಕ ಪ್ರಜಾನಾಥನಾದ ದಿಲೀಪನು - ಬಹು ಕಾಲದಿಂದ ತನ್ನ ಹೆಗಲಮೇಲೆ ಹೊತ್ತಿರುವ ಪ್ರಜೆಗಳನ್ನಾಳತಕ್ಕ ಹೇರಳವಾದ ಹೊರೆಯನ್ನು ಸ್ವಲ್ಪ ಹಗುರವಾಗುವಂತೆ ಮಾಡಿಕೊಳ್ಳ ಬೇಕೆಂದು ನೆನೆದು, ಹುಟ್ಟಿದ್ದು ಮೊದಲು ಸ್ವಭಾವದಿಂದಲೂ, ವಿದ್ಯಾಭ್ಯಾಸದಿಂದಲೂ ತನ ಮಗನು ಚೆನ್ನಾಗಿ ಪಳಗಿ, ವಿನಯಾದಿ ಸುಗುಣಸಂಪನ್ನನಾಗಿದಾನೆ, ಇನ್ನು ಮೇಲೆ ಖಂಡಿತವಾಗಿ ಹೆಮ್ಮೆಗೆ ಒಳಗಾಗುವುದಿಲ್ಲ ಎಂದು ತಿಳಿದು, ಅವನನ್ನು ಯುವರಾಜ ಪದವಿಯಲ್ಲಿ ನೆಲೆಗೊಳಿಸಿದನು, ಚೆನ್ನಾಗಿ ಅರ ೪ರುವ ತಾವರೆಯಲ್ಲಿ ಬಹಳ ಹೊತ್ತಿನಿಂದ ನೆಲೆಗೊಂಡಿದ್ದ ಕಾಂತಿ ಲಕ್ಷ್ಮಿಯು - ಹೊಸದಾಗಿ ಅರಳುತಲಿರುವ ನೈದಿಲೆಯಲ್ಲಿ ಸುವಾಸನೆಯೇ ಮೊದಲಾದ ಗುಣದ ಆಸೆಯಿಂದ, ತನ್ನ ಒಂದು ಭಾಗವನ್ನು ನೆಲೆಗೊ೪ ಸುವಹಾಗೆ - ದಿಲೀಪನಲ್ಲಿ ಬಹುಕಾಲದಿಂದ ನೆಲೆಗೊಂಡಿರುವ ರಾಜ್ಯ ಲಕ್ಷ್ಮಿಯ ಹೊಸದಾಗಿ ಯುವರಾಜ ಪದವಿಯನ್ನು ಪಡೆದಿರುವ ರಘು ವಿನಲ್ಲಿ ವಿನಯಾದಿ ಸುಗುಣಗಳ ಬಯಕೆಯಿಂದ, ಮೆಲ್ಲಗೆ ಒಂದಡಿಯ ಸ್ಕಿಟ್ಟಳು. ಆಗ-ಅನಿಲನಿಂದ ಅನಲನಹಾಗೂ, ಮಳೆಗಾಲವು ತೊಲಗುತ ಬರುವುದರಿಂದ ರವಿಯಹಾಗೂ, ಮದವೇರುತ ಬರುವಲ್ಲಿ ಕಪೋಲದ ಬಿರಿತದಿಂದ ಆನೆಯಹಾಗೂ, ತನಗೆ ಊಡಾಗುತಲಿರುವ ರಘುವಿನಿಂದ ಅರಸು ಬಲು ಅಸದಳನೆನಿಸಿದನು. ತರುವಾಯ - ಶತಮ೩ನಿಗೆಣೆಯೆನಿಸಿದ್ದ ದಿಲೀಪನು - ರಾಜ ಕುಮಾರನಿಂದ ಹಿಂಬಾಲಿಸಲ್ಪಟ್ಟ ರುವ ಬಿಲ್ಲಾಳಾದ ರಘುವನ್ನು ಹೊ ಮಾಶಗಳ ರಕ್ಷಣೆಗಾಗಿ ನೇಮಿಸುತ್ತಾ, ಒಂದು ಕಡಮೆ ನೂರು ಯಾಗ ಗಳನ್ನು ಕ್ರಮವಾಗಿ ಅಡ್ಡಿಯಿಲ್ಲದಂತೆ ಆಚರಿಸಿದನು, ಆ ಹಿಂದೆ - ವಿಧಿಯಪ್ರಕಾರ ಕತುವನ್ನೆಸಗುತಲಿರುವ ದಿಲೀಪನು - ಉಳಿದ ನೂರ ನೆಯ ಯಜ್ಞವನ್ನೂ ನೆರವೇರಿಸಬೇಕೆಂದು ಬಗೆದು, ಮರಳಬಿಟ್ಟ ಅಧ್ಯರದ ಅಶವು ತಡೆಯಿಲ್ಲದೆ ನಡೆಯುತಲಿರುವಲ್ಲಿ, ಕಾವಲುಗಾರರಾದ ಬಿಲ್ಲಾಳುಗಳ ಇದಿರಿಗೇ, ಅರಿತಕ್ಕೆ ಬಾರದ ಮೆಯುಳ್ಳವನಾಗಿ ಇಂದ್ರನು ಅದನು, ಅಹಹ ! ಅಪಹರಿಸಿದನು. ಆಗ ರಘುವಿನ ಸೇನೆಯು-ಬಲು ಕಳವಳಗೊಂಡಿತು, ಮುಂದೇನ ಮಾಡಬೇಕೆಂಬುದನ್ನು ಅರಿಯಲಿಲ್ಲ, ಅಚ್ಚರಿಗೆಡೆಯಿಲ್ಲದಂತಾಯಿತು ; ಜಡವಾಗಿ ನಿಂತಿತು. ಮುಂದಿನ