ಪುಟ:ರಘುಕುಲ ಚರಿತಂ ಭಾಗ ೧.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ

  • y 143

v• /• +Mws ತಡೆಯಾಗುವುದಾದರೆ, ಲೋಕದಲ್ಲಿ ಸತ್ಯಾಚರಣೆಯ ಸುದ್ದಿಯೇ ಮುಳುಗಿಹೋಯಿತೆಂಬುದರಲ್ಲಿ ಸಂದೇಹವೇನು? ಅದರಿಂದ ಎಲೈ ಅವು ರೇಕ್ಷರನೆ ! ಮಹತ್ತಾದ ಅಶ್ವಮೇಧಕ್ಕೆ ಅಂಗವಾಗಿ ಶ್ರೇಷ್ಠವೆನಿಸಿರುವ ಈ ಹರಿಯನ್ನು ನೀನು ಬಿಟ್ಟು ಕಳುಹುವುದು ಧಮ್ಮ, ಲೋಕದಲ್ಲಿ ವೇದವಿಹಿತವಾದ ಸನ್ಮಾರ್ಗವನ್ನು ತಿಳಹತಕ್ಕವರು - ಮಲಿನವಾದ ಹಾದಿಯಲ್ಲೆಂದಿಗೂ ಹೆಜ್ಜೆಯನ್ನಿಡುವುದಿಲ್ಲ. - ಇಂತು - ಬಹು ಪ್ರೌಢಿಮೆಯಿಂದ ಹೇಳುತಲಿರುವ ರಘುವಿನ ನುಡಿಯನ್ನಾಲಿಸಿ, ಅಚ್ಚರಿಗೊಂಡ ದಿವೌಕಸರೊಡೆಯನು -ತಟ್ಟನೆ ತೇರಂ ತಿರುಗಿಸಿ ಮಾರುತ್ತರವನಿಂತು ಕೈಗೊಂಡನು ಎಲೈ ಅರಸು ಮಗನೇ ! ನೀನು ಹೇಳಿದುದೆಲ್ಲ ದಿಟ. ಆದರೆ - ಲೋಕದಲ್ಲಿ ಯಾರಾದರೆ ಒಳ್ಳೆಯ ಹೆಸರುವಾಸಿಯನ್ನೇ ಹಣವನ್ನಾಗಿ ನಿಶ್ಚಯಿಸಿರುವರೋ, ಅಂಥವರು - ಆ ತಮ್ಮ ಹೆಸರಿಗೆ ಕುಂದುಂಟಾಗ ದಂತೆ ಕಾಪಾಡಿಕೊಳ್ಳಲೇಬೇಕು, ನಿಮ್ಮ ತಂದೆಯು - ಈ ಜಾಗವನ್ನು ಮಾಡಿ, ಜಗತ್ತಿನಲ್ಲೆಲ್ಲ ಬೆಳಗುತಲಿ ರುವ ನನ್ನ ಕೀರ್ತಿಯನ್ನು ಅತಿಕ್ರ ಮಿಸಲಿಕ್ಕೆ ಪ್ರಯತ್ನಿಸಿ ಇದಾನೆ. ಪ್ರಪಂಚದಲ್ಲಿ – ಪುರುಷೋತ್ತಮನೆಂಬ ಬಿರುದು ಶ್ರೀಹರಿಗೊಬ್ಬ ನಿಗಲ್ಲದೆ ಬೇರೊಬ್ಬನಿಗೆ ಸಲ್ಲದು, ಮುಕ್ಕಣ್ಣನೊಬ್ಬನೇ ಮಹೇಶ್ವರ ನೆಂಬ ಹೆಸರಿಗೆ ಗುರಿಯಲ್ಲದೆ ಬೇರಾರೂ ಅಲ್ಲ. ಹಾಗೆಯೇ ಮುನಿಗಳೆ ಲ್ಲರೂ ನನ್ನನ್ನು ಶತಮ೩ನೆಂದು ಕರೆಯುತ್ತಾರೆ, ಆ ಹರಿಹರರಂತೆ ಈ ನನ್ನ ಹೆಸರೂ ಎರಡನೆಯವರಿಗೆ ಸಲ್ಲತಕ್ಕುದಲ್ಲ, ಇಂತು ಶತಕ್ರತುವೆ ನಿಸಿದ ನಾನು - ಕಪಿಲ ಮುನಿಯಂತೆ ನಿಮ್ಮಪ್ಪನ ಈ ಕುದುರೆಯನ್ನು ಕಳುವು ಮಾಡಿದೇನೆ, ಇದನ್ನು ಬಿಡಿಸಿಕೊಂಬ ವಿಷಯದಲ್ಲಿ ನಿನ್ನ ಪ್ರಯು ತ್ನವನ್ನು ನಿಲ್ಲಿಸು, ಸಗರ ಚಕ್ರವರಿಯ ಮಕ್ಕಳ ಹಾದಿಯಲ್ಲಿ ಅಡಿಯ ನ್ನಿಟ್ಟು ಕೆಡಬೇಡ ಎನಲು, ಅಶ್ವಮೇಧಾಕ್ಷದ ಅಂಗರಕ್ಷನಾದ ರಘುವು ಆ ಪುರಂದರನ ನುಡಿಗೆ ತುಸ ನಕ್ಕು, ಎಲೈ ಪುರೂಹುತನೇ ! ಈ ಕುದು ರೆಯನ್ನು ಬಿಟ್ಟು ಕೊಡುವುದಿಲ್ಲವೆಂಬುದೇ ನಿನ್ನ ನಿಜವಾದ ಸಂಕಲ್ಪ ವಾಗಿದ್ದರೆ, ಕಯ್ಯಲ್ಲಿ ಬಿಲ್ಲನ್ನು ಹಿಡಿ, ಸರಳನ್ನು ತೊಡು, ಈ ರಘುವನ್ನು ಗೆಲ್ಲದೆ ನಿನ್ನನ್ನು ಕೃತಕೃತ್ಯನೆಂದು ಎಂದಿಗೂ ಭಾವಿಸಬೇಡ ಎಂದು