ಪುಟ:ರಘುಕುಲ ಚರಿತಂ ಭಾಗ ೧.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪o ಶ್ರೀ ಶಾ ರ ದ . (ಅ MIvy - \ \\ ಹೇಳಿದುದಲ್ಲದೆ, ಅವನಿದಿರಿಗೆ ಚಾಪದಲ್ಲಿ ಹೆದೆಯನ್ನೇರಿಸಿ, ಶರಸಂಧಾ ನಮಂ ಮಾಡಲು ಅಣಿಯಾಗುತ್ತಾ, ಬಲಗಾಲಿನ ಮಂಡಿಯನ್ನು ಮುಂ ದಕ್ಕೆ ನೀಡಿ, ಎಡಗಾಲನ್ನು ಹಿಂದಕ್ಕೆ ಸರಿದು, ಮಂಡಿಯನ್ನು ತಗ್ಗಿಸಿ, ಬಿಲ್ಲಾಳುಗಳು ಕಾಳಗದಲ್ಲಿ ನಿಲ್ಲುವ ಆಲೀಢವೆಂಬ ಮೋಡಿಯ ಒಡಲಿ ನಿಂದ ವಿನಾಕಪಾಣಿಯಂತೆ ಬೆಡಗುಗೊಂಡು ನಿಂತನು. ಕೂಡಲೆ ಕಂಬ ದಂತೆ ಬಲು ಗಡುಸಾದ ಬಾಣದಪೆಟ್ಟು ಎದೆಗೆ ಬಡಿಯಿತು, ಗಾಯವಾ ಯಿತು, ಗೋತ್ರಾರಿಗೆ ಬಲು ಸಿಟ್ಟು ಹತ್ತಿತು, ಮುಂಗಾರಿನ ಮೋಡ ಗಳ ಹಿಂಡಿಗೆ ಕ್ಷಣಕಾಲ ನಿಂಗರವಾಗಿರುವ ತನ್ನ ಬಿಲ್ಲಿನಲ್ಲಿ ಕೂಡಲೇ ಸಫಲವಾಗತಕ್ಕುದೆನಿಸಿದ ಶವವನ್ನು ತೊಟ್ಟು ಇಟ್ಟನು. ಇಂದ್ರನ ಅಂಬು ಅಂದಿನವರೆಗೆ ಭಯಂಕರರೆನಿಸಿದ ರಕ್ಕಸರೊಡಲರಕುತದ ರುಚಿಯನ್ನು ಮಾತ್ರವೇ ಬಲ್ಲದಾಗಿದ್ದಿತು. ರಘುವಿನ ಇಂಬಾದ ಭುಜಾಂತರವನ್ನು ಹೊಕ್ಕಿತು, ಹಿಂದೆ ಕುಡಿದು ಸವಿಗಂಡರಿಯದ ಮನುಷ್ಯ, ಶೋಣಿತ ವನ್ನು ಬಯಕೆಗೊಂಡಿರುವುದೆಂಬಂತೆ ಕುಡಿಯಿತು. ಬ೪ಕ - ಕುಮಾರ ವಿಕ್ರಮನಾದ ರಘುಕುಮಾರನೂ-ಐರಾವತದ ಕೊರಳನ್ನು ಆಗಾಗ ತಟ್ಟು ಇದರಿಂದ ಪೆಡಸಾದ ಬೆರಳುಳ್ಳುದೂ, ಶಚೀದೇವಿಯ ಕಪೋಲದ ಕಸ್ತೂ ಧಿಯ ಗುರುತುಳುದೂ ಆಗಿರುವ ಇಂದ್ರನ ತೋಳಿನಲ್ಲಿ, ತನ್ನ ನಾಮಾ ಕ್ಷರಗಳಿಂದ ಬೆಳಗುವ ಸರಳನ್ನು ನಟ್ಟನು, ಮತ್ತು - ವೇಗಕ್ಕೋಸುಗ ಇಕ್ಕೆಲದಲ್ಲಿಯ ನವಿಲುಗರಿಯನ್ನು ತಗಲಿಸಿರುವ ಮತ್ತೊಂದು ಬಾಣ ವನ್ನು ಬಿಟ್ಟು, ಶಕನ ತೇರಿನ ವಜ್ರರೂಪವಾದ ದಾಳನ್ನು ಕತ್ತರಿಸಿದನು, ಅದರಿಂದ ಸುರನಾಯಕನು - ಸರ್ಲೋಕದ ಸಾಮಾಜಲಕ್ಷ್ಮಿಯ ಮುಂದಲೆಯನ್ನು ಬಲಾತ್ಕಾರವಾಗಿ ಹಿಡಿದೆಳೆದರೆ ಹೇಗೋಹಾಗೆ, ಅಪಾ ರವಾದ ರೋಪವನ್ನು ತಾಳಿದನು, ಹೀಗೆ ಒಬ್ಬರನ್ನೊಬ್ಬರು ಗೆಲ್ಲಬೇ ಕೆಂಬ ಕುತೂಹಲವು ಹೆಚ್ಚುತಲಿದ್ದಿ ತು, ಬಾಂದಳದೊಳು ನಿಂತು ಕೆಳ ಮುಖವಾಗಿಯೂ, ನೆಲದಲ್ಲಿ ನಿಂತು ಮೇಲುಮೊಗನಾಗಿಯೂ ಇಡುತ ಲಿರುವ ಭಯಂಕರಗಳಾದ ಸರ್ಪಗರುಡರಂತಹ ಸರಳುಗಳಿಂದ ಇಂದು ರಘಗಳಿಬ್ಬರಿಗೂ ದೊಂಬಿಯ ಕಾಳಗವು ನಡೆಯುತಲಿದ್ದಿತು. ಸುರಾಧಿ ಪನ ಸಮಿಾಪದಲ್ಲಿ ಇದ್ದ ರೂ, ದಿಲೀಪ ಕುಮಾರನ ಇಕ್ಕೆಲದಲ್ಲಿ ಸೈನಿಕರೂ ನಿಂತು ನೋಡುತಲಿದ್ದ ರು. ಆಗ - ಮೋಡವು ತನ್ನ ಮೂಲಕವೇ