ಪುಟ:ರಘುಕುಲ ಚರಿತಂ ಭಾಗ ೧.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ 8೧ ••vvvvv ಹೊರಗೆ ಹೊರಟ ಸಿಡಿಲಿನ ಬೇಗೆಯನ್ನು, ತನ್ನಿಂದುದಿರಿದ ಹನಿಗಳಿಂದ ಆರಿಸಲಳವಲ್ಲದಹಾಗೆ, ಎಡೆಬಿಡದೆ ಬಿಡುತಲಿರುವ ಬಾಣಗಳ ಹೊಯಿ ಲಿನಿಂದ ಅಸದಳವೆನಿಸಿದ ಪ್ರತಾಪಕ್ಕಾಸರೆಯಾದ ರಘುವನ್ನು ಅಡಗಿಸಲು ಸುರಪತಿಯು ಶಕ್ತನಾಗಲಿಲ್ಲ. ಇಂದನ ಕಯ್ಯ ಮಣಿಕಟ್ಟು - ಕಲ್ಪ ತರುವಿನ ಚಂದನದಗುರುತನ್ನೊಳಗೊಂಡಿರುವುದು. ಕಡತದ ವೇಳ ಯಲ್ಲಿನ ಕಡಲಿನಂತೆ ಬಿಲ್ಲಿನ ಹೆದೆಯಲ್ಲಿ ದನಿಗೈಸುತ ಕೌರಸಂಪನ್ನ ನಾದ ಆ ಶಕ್ರನ ಬಿಲ್ಲಿನ ಹೆದೆಯನ್ನು, ಅರ್ಧಚಂದ್ರಾಕಾರವಾದ ಅಲಗ ದ್ವಾಂತಿರುವ ತನ್ನ ಶರದಿಂದ ರಘುವು ಕತ್ತರಿಸಿದನು, ಆಗ ಇಂದ್ರನಿಗೆ ರೋಪವು ತಲೆಗೇರಿತು, ಮತ್ಸರವು ಹೆಚ್ಚಿತು, ಪ್ರಬಲನಾದ ಹಗೆ ಯನ್ನು ಮುಗಿಸಲೇಬೇಕೆಂದು ನೆನೆದನು, ಬೆಟ್ಟಗಳ ರೆಕ್ಕೆಗಳನ್ನು ಕತ್ತರಿಸಲಿಕ್ಕೆ ತಕ್ಕುದೆನಿಸಿ, ಮಂಡಲಾಕಾರವಾದ ಬೆಳಕನ್ನು ತಳೆದಿರುವ ವಜ್ರವನ್ನು ಕಯ್ಯಲ್ಲಿ ಹಿಡಿದೆಸೆದನು. ಅದರ ಬಿರುಸಿನ ಪೆಟ್ಟು ರಘುವಿ ನೆದೆಯನ್ನು ಬಾರಿಸಿತು, ಸೇನಾಜನರ ಕಣ್ಣೀರುಗಳೊಡನೆ ನೆಲದಲ್ಲಿ ಉರುಳಿದನು, ಆದರೂ ನಿಮಿಷಮಾತ್ರದಲ್ಲಿ ಆ ನೋವನ್ನು ತಿರಸ್ಕರಿಸಿ, ಸೈನಿಕರ ಸಂತೋಷದ ಸಿಂಹನಾದಗಳೊಡನೆ ತಟ್ಟನೆ ಎದ್ದು ನಿಂತನು. ಅಹಹ ! ವಜ್ರಾಯುಧದ ಪೆಟ್ಟು ಬಿದ್ದರೂ ಹಿಂಜರಿಯದೆ ಮರಳಿ ಸರಳಿನ ಹೋರಾಟದಿಂದ ಕ್ರೂರವಾಗಿರುವ ಹಗೆತನದಲ್ಲಿ ಚಲದಿಂದನಿಂದ ರಘು ವಿನ ಹೇರಳವಾದ ಶೌರ್ಯವನ್ನು ಕಂಡು, ವೃತ್ತಾರಿಯು – ಸಂತೋ ಪ್ರಪಟ್ಟನು, ವೀರನೇ ವೀರನ ಪರಿಯನ್ನು ಬಲ್ಲನು, ಎಲ್ಲೆಲ್ಲಿಯೂ ಸುಗುಣಗಳ ಮನಮುಂ ಸೆಳೆಯತಕ್ಕುವಲ್ಲವೆ ? ಅಂತಾದಬಳಿಕ – ರಘು ವನ್ನು ಕುರಿತು ಶಕನು “ಎಲೈ ವೀರಕುಮಾರನೇ ! ಬೆಟ್ಟಗಳಲ್ಲಿಯೂ ಕಟ್ಟಿಲ್ಲದ ನನ್ನ ಈ ವಜ್ರಾಯುಧದ ಹೊಡೆತವನ್ನು ಇದುವರೆಗೆ ನೀನೊಬ್ಬನು ಹೊರತು ಮತ್ತಾರೂ ಸಹಿಸಿದುದೇ ಇಲ್ಲ. ಅದರಿಂದ ಈ ನಿನ್ನ ಯಾಗದ ತುರಗ ವನ್ನು ಬಿಟ್ಟು ಕೊಡುವುದೊಂದನ್ನು ಬಿಟ್ಟು, ಮತ್ತಾವ ವರವನ್ನಾದರೂ ಕೇಳು, ಸಂತೋಷ್ಟದಿಂದ ಕೊಡುತ್ತೇನೆ ಎಂದು ಸ್ಪಷ್ಮವಾಗಿ ಹೇಳಿ ದನು, ಬಂಗಾರದ ಗರಿಯ ಬೆಳಕಿನಿಂದ ಬೆಳಗುತಲಿರುವ ಬೆರಳುಗ ೪ಂದ ಬಾಣವನ ಹಿರಿಯಲು ಬತ್ತಳಿಕೆಯೊಳಿಟ್ಟಿದ್ದ ಆ ಕರವನ್ನು ಟ ೧