ಪುಟ:ರಘುಕುಲ ಚರಿತಂ ಭಾಗ ೧.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

89 ಶ್ರೀ ಕಾ ಕ ಬಾ Mwwwmmmmmmmmmmmmmmmmmmmr Mwwwmmmmmmmmm. ಮುಂದರಿಸದೆ ನಿಲ್ಲಿಸಿ, ಪ್ರಯಭಾಷಣನಾದ ನರನಾಥನಂದನನು ವೃತ್ತಾ ರಿಯಂ ನೋಡಿ - ಎಲೈ ದೇವನೇ ! ಇನ್ನು ನಾನು ಬಾಣವನ್ನು ಬಿಡಬಾರದೆಂಬುದು ನಿನ್ನ ಮನದೆಣಿಕೆಯಾಗಿದ್ದರೆ, ನೇಮದಿಂದ ಯಾಗದೀಕ್ಷೆಯಲ್ಲಿಯೇ ನೆಲೆಗೊಂಡಿರುವ ನಮ್ಮ ತಂದೆಗೆ ನೂರನೆಯ ಯಾಗದ ಫಲವೂ ಸಲ್ಲು ವಂತೆ ಅನುಗ್ರಹಿಸು, ಮತ್ತು - ಎಲೈ ಮೂಲೋಕದೊಡೆಯನೆ ! ಮುಕ್ಕಣ್ಣನಂಶವನೊಳಗೊಂಡು ನನ್ನಂಥವರಿಂದ ಅತಿಕ್ರಮಿಸಲಸದಳನೆ ನಿರುವ ಪ್ರಜಾನಾಥನು - ಯಜ್ಞವಾಟದೊಳಿರುವನಷ್ಮೆ ? ಆತನಿಗೆ ಈ ಸುದ್ದಿ ಯನ್ನು ನಿನ್ನ ದೂತನಿಂದಲೇ ತಿಳಿಸಬೇಕು ಎಂದನು. ಅದನ್ನು ಕೇಳಿ - ಮಘವಂತನು ಹಾಗೆಯೇ ಆಗಲಿ ಎಂದು ಹೇಳಿ, ತನ್ನ ಸಾರಥಿಯಾದ ಮಾತಲಿಯೊಡನೆ ಸರ್ಗಾಭಿಮುಖನಾದನು, ಸುದಹ ಣಾಸೂನುವು – ಅಂತಾದರೂ ತಾನು ಪೂರ್ಣಕಾಮನಾದದ್ದು ಸಂತೋಷ್ಟಿಸದೆ, ದಿಲೀಪನ ಯಾಗಶಾಲೆಯಂ ಕುರಿತು ಹಿಂದಿರುಗಿದನು ಅದುವರೆಗೆ ಪಾಕಶಾಸನನ ಶಾಸನವನ್ನು ಶಿರದೊಳಾಂತು ಬಂದ ದೇವದೂತನೊಬ್ಬನಿಂದ ಯಜ್ಞಭೂಮಿಯೊಳಿದ ಮನುಜೇಶ್ವರನುಮೊದಲೇ ಆ ಸಂಗತಿಯನ್ನರಿತಿದ್ದನು. ಹಾಗೆಯೇ-ಇದಿರಿಗೈತಂದ ನಂದ ನನಂ ಕಂಡ ಭೂಮಂಡಲಾಧಿಪನು - ಆನಂದಾಮೃತಭರದಿಂದ ಜಡವಾದ ಕರತಲದಿಂದ ಕುಮಾರನಂ ಅಪ್ಪಿದನು, ಕುಲಿಶಾಯುಧದ ಗಾಯದಿಂದ ಜಡ್ಡುಗಟ್ಟಿದ ತನಯನ ಮೆಚ್ಚನ್ನು ತಡಹುತ್ತಾ ಸಂತೋಷಿಸಿದನು. ಇಂತು-ಅಡ್ಡಿಯಿಲ್ಲದಂತೆ ಅಪ್ಪಣೆಯನ್ನು ನಡೆಯಿಸುತಲಿದ್ದ ಆ ಪೊಡವಿಯೊಡೆ ಯನು- ಆಯುಷ್ಯದ ಮುಗುವಳಿಯಲ್ಲಿ ನಾಕಲೋಕವನ್ನೇರಲು ಸೊ ಪಾನಗಳಂತಿರುವ ತೊಂಭತ್ತೊಂಭತ್ತು ಮಹಾಶ್ವಮೇಧಗಳನ್ನಾಚರಿಸಿ, ಸುಕೃತವನ್ನಣಿಮಾಡಿಟ್ಟನು. ಆ ಬಳಿಕ - ಪರಸಾದಿ ಸಮಸ್ಯ ವಿಷಯಗಳಿಂದಲೂ ಮನಸ್ಸನ್ನು ಹಿಂದಿರುಗಿಸಿ, ರಾಜಲಕ್ಷಣವಾದ ಛತ್ರ ಚಾಮರಗಳನ್ನು ವಿಧಿಪಕಾರ ಮಗನಿಗೊಪ್ಪಿಸಿ, ತನ್ನ ಧರ್ಮಪತ್ನಿಯೊ ಡನೆ ತಪೋವನ ತರುವಿನ ನೆಳಲನ್ನು ಆಶ್ರಯಿಸಿದನು.: ಮುಪ್ಪಿಗೆಬಂದ ಮನುಕುಲದರಸರಿಗೆಲ್ಲ ಇದೇ ಮನೆತನದ ಸಂಪ್ರದಾಯವು. - ಇಂತು ರಘುರಾಜ್ಞಾಭಿಷೇಕವೆಂಬ ಮೂರನೆಯ ಅಧ್ಯಾಯಂ -