ಪುಟ:ರಘುಕುಲ ಚರಿತಂ ಭಾಗ ೧.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚಂತಂ 8ಳಿ ಶ್ರೀ? + ನಾಲ್ಕನೆಯ ಅಧ್ಯಾಯಂ, ಸೂಚನೆ | ಹಿಶತನವ ಪಡೆದು ಪಿತನಿಂ ಬಿಡದರಸರ ಗೆಲಿದು ತಂದ ನಾರಘು ಸಿರಿಯಂ | ಪಡವುದು ಕೊಡುವುದಕನ್ನು ತ ತಡೆಯದೆ ಗೈದಂ ಸು ವಿಕ್ಷ ಜಿತ್ಸವವು ನಹ ! " ಬ೪ಕ ರಘುವು – ತನ್ನ ತಂದೆಯು ಕೊಟ್ಟ ದೊರೆತನವನ್ನು ಪಡೆದನು, ಆಗ - ಸಂಜೆಯಲ್ಲಿ ಸೂ'ನಿತ್ತ ತೇಜವನ್ನು ಪಡೆದುಕೊಂಡ ಅಗ್ನಿಯಂತೆ ಹೇರಳವಾಗಿ ಬೆಳಗುತಲಿದ್ದನು. ದಿಲೀಪನ ತರುವಾಯು ರಘುವು - ರಾಜ್ಯದಲ್ಲಿ ನೆಲೆಗೊಂಡನೆಂಬ ಸುದ್ದಿ ಯು ನಾಡುಗಳೊಳಗೆಲ್ಲ ಹರಡಿತು, ಮುನ್ನರಸಿನ ಆಳ್ವಿಕೆಯಲ್ಲಿ ಹಗೆಗಳದೆಯೊಳಗೆ ಹೊಗೆಯಾ ಡುತಲಿದ್ದ ಬೆಂಕಿಯು ಹೊತ್ತಿ ಉರಿಯುವಂತಾದುದು, ಅರಮನೆಯ ಮುಂದೆ ದಾಳನ್ನು ನಟ್ಟು ಪೂಜಿಸಿ, ಕಾಲಕಾಲದಲ್ಲಿ ಮಳೆಗರೆವುದಕ್ಕೆ ಇಂದ್ರನಿಗೆ ಹಬ್ಬವನ್ನು ಮಾಡುವುದುಂಟು. ದೇಶದ ಪ್ರಜೆಗಳೆಲ್ಲ ತಂತಮ್ಮ ಮಕ್ಕಳೊಡನೆ ಆ ಇಂದ್ರಧ್ವಜವನ್ನು ನೋಡುವಂತೆ, ರಘುವಿನ ಹೊಸದಾದ ಏಳಿಗೆಯನ್ನು ಕಣ್ಣೆತ್ತಿ ನೋಡುತ ಆನಂದಿಸುತ್ತಿದ್ದರು. ರಘುವು – ಅಭಿವೃದ್ಧಿಗೆ ಬಂದು, ಎಲ್ಲರ ಸಂತೋಷಕ್ಕೂ ಈಡಾದನು. ಆನೆಯಂತೆ ಅಂದವಾದ ನಡಗೆಯುಳ್ಳ ರಘುವು - ತನ್ನ ತಂದೆಯ ನಿಂಹಾ ಸನದಲ್ಲಿಯೂ ಶತ್ರುಗಳ ರಾಜ್ಯದಲ್ಲಿಯೂ ಒಂದೇ ಸಮಯದೊಳಗೆ ಹಜ್ಜೆಯನ್ನೂರಿದನು. ಆ ರಘುವು ಸಾಮ್ರಾಜ್ಯದಲ್ಲಿ ಪಟ್ಟವನ್ನು ಕೈಗೊಂ ಡನ ? ಆಗ - ಸಿರಿಯು ಕಾಣಿಸಿಕೊಳ್ಳದಂತೆಯೇ” ಛಾಯಾಮಂಡ ಲದಿಂದ ಊಹಿಸತಕ್ಕುದಾಗಿರುವ ತಾವರೆಯೆಂಬ ಕೊಡೆಯ ಕುರುಹಿ ನಿಂದ ಆತನನ್ನು ಸೇವಿಸಿದಳು, ಹೊಗಳುಭಟರು-ಆಗಾಗ ಅರಸನನ್ನು ಹೊಗಳತೊಡಗುತಲಿದ್ದ ರು. ಆ ಸಮಯದಲ್ಲಿ ಸರಸ್ಪತಿಯೂ ಅವರಲ್ಲಿದ್ದು, ಅರ್ಥವನ್ನು ಅನುಸರಿಸುವ ನುತಿಗಳಿಂದ ತಾನೂ ದೇವತಾಂಶನಾಗಿ -