ಪುಟ:ರಘುಕುಲ ಚರಿತಂ ಭಾಗ ೧.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪v ಶ್ರೀ ಕಾ ರ ದಾ . ಇದಿರಾಗಿ ಬಿಜಯಂಗೈದನು. ಅಲ್ಲಿ - ಗಂಭೀರವೇದಿಯೆಂಬ ಆನೆಯ ಶಿರದಮೇಲೆ ಮಾವಟಗನು ಮೊನೆಯಾದ ಅಂಕುಶವನ್ನಿಡುವಂತೆ, ರಘುವುಮಹೇಂದ್ರಪರ್ವತದಲ್ಲಿನ ಅರಸರಮೇಲೆ ತನ್ನ ಪ್ರತಾಪವನ್ನು ತೋರಿ ದನು. ಹಿಂದೆ ರಕ್ಕೆಗಳನ್ನೋಕ್ಕಲಿಕ್ಕಲುಜ್ಜಗಿಸಿದ ಇಂದ್ರನನ್ನು ಕಳಕರೆ ಯುತ ಇದಿರೇಂಡ ದೊಡ್ಡ ಬೆಟ್ಟದಂತೆ, ಆನೆಯಬಲವುಳ್ಳ ಕಾಳಿಂಗನುಅಂಬುಗಳನ್ನಿಡುತ ರಘುವನ್ನಿದಿರೆ೦ಡನು. ಬಳಿಕ -ಕಾಕುತ್ಸ್ಥನುಹಗೆಗಳ ಬಾಣದ ಮಳೆಯಲ್ಲಿ ಮುಳುಗಿ, ಸೈರಿಸಿ, ಯಾಗದಲ್ಲಿ ಮಂಗಳ ಸ್ನಾನ ಮಾಡಿದವನಂತೆ, ಜಯಲಕ್ಷ್ಮಿಯ ಕೈಹಿಡಿದನು. ಅದುವರೆಗೆ ದಂಡಿನ ವೀರರೆಲ್ಲ ಬಳಲಿದ್ದ ರು, ಮಹೇಂದ್ರಪರ್ವತದಲ್ಲಿ ಬೀಡುಬಿಟ್ಟು, ಎಡೆಗೊಂಡು, ಹಗೆಗಳ ಹೆಸರುವಾಸಿಯನ್ನು ಹೀರಿದಂತೆ, ವೀಳೆಯದೆಲೆಯ ದೊನ್ನೆಗಳಿಂದ ತೆಂಗಿನ ಹೆಂಡವನ್ನು ಕುಡಿದು ತಣಿದರು, ಧಮ್ಮ ಕಾರ್ಯ ಕೋಸುಗವೇ ದಿಗ್ವಿಜಯವುಂ ಬಳಸುತಲಿರುವ ರಘುವು - ಮಹೇಂದ್ರ ನಾಥನ ಸಿರಿಯನ್ನು ಮಾತ್ರವೇ ಕಸುಗೊಂಡನಲ್ಲದೆ ಧರೆಯನ್ನಲ್ಲ, ಕೈಸೆರೆ ಹಿಡಿದಿದ್ದು ಕಪ್ಪವನೊಪ್ಪಿಸುವ ಅರಸನನ್ನಾಗಿ ಅಲ್ಲಿಯೇ ನೆಲೆಗೊ ೪ನಿದನು. ಇಂತು ರಘುರಾಜನಿಗೆ ಪೂರ್ವದಲ್ಲಿ ಅಪೂರ್ವ ದಿಗ್ವಿಜಯವಾ ಯಿತು. ಕಡಲಿನ ದಡದ ದಾರಿಯುದ್ದಕ್ಕೂ ಹೊಂಬಾಳೆಯ ಬೆಳೆಯಿಂದ ತುಂಬಿದ ಅಡಕೆಯ ಗಿಡಗಳಸಾಲು ಕಂಗೊಳಿಸುತಲಿದ್ದಿತು. ಆ ಹಾದಿ ಯಿಂದಲೇ, ಬಯಸದೆಯೇ ಬರುತಲಿರುವ ಜಯಲಕ್ಷ್ಮಿಯೊಂದಿಗೆ ಅಗ ಸ್ಯಮುನಿಗಾಸರೆಯೆನಿಸಿದ ತೆಂಕಲದೆಸೆಗೆ ತಿರುಗಿದನು. ಸವಿಾಪದಲ್ಲಿ ಕಾವೇರಿಯು ಕಾಣಬಂದಿತು, ಮದವೇರಿದ ಆನೆಗಳೆಲ್ಲ ಮಜ್ಜನಸುಖ ವನ್ನನುಭವಿಸಿದುವು, ಸೈನಿಕರೆಲ್ಲ ಸ್ಥಾನಮಾನಾದಿಗಳನ್ನಾಚರಿಸಿದರು, ಹೀಗೆ-ಅಲ್ಲಿ ವಿಶ್ರಮಿಸಿಕೊಂಡು, ಮುಂದಕ್ಕೆ ಪಯಣವನ್ನು ಬೆಳೆಸಿದರು. ಜಯಶಾಲಿಯಾದ ರಘುವು - ದಂಡಿನೊಡನೆ ದಾರಿಯನ್ನು ದಾಟಿ, ಮಲಯ ಪರ್ವತದ ತೊಪ್ಪಲಿನ ವಿಸ್ತಾರವಾದ ಮೆಣಸಿನ ತೋಟಗಳಲ್ಲಿ ಬಂದಿಳ ದನು, ಸೈನಿಕರ ಹಾವಳಿಯಿಂದ ಅಲ್ಲಿ ನೆಲೆಗೊಂಡಿದ್ದ ಕಾರಂಡವ ಪಕ್ಷಿಗಳಲ್ಲ ಹಾರಿಹೋದುವು, ಮತ್ತು - ಹೇರಳವಾಗಿದ್ದ ಏಲಕ್ಕಿ ತೋಟಗಳನ್ನೆಲ್ಲ ಕುದುರೆಗಳು ತುಳಿಯಲು, ಕಾಯಿಗಳ ಧೂಳಿಯು -