ಪುಟ:ರಘುಕುಲ ಚರಿತಂ ಭಾಗ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ರ್೪ 63 ದಿ ಸಮಾನವಾದ ವಾಸನೆಯುಳ್ಳ ಮದದಾನೆಗಳ ಮದಜಲದಿಂದ ತುಂಬಿದ ಕಪೋಲಗಳಲ್ಲಿ ಮೆರೆಯಿತು. ಮಲಯಾಧಿಯ ಬುಡದಲ್ಲಿ ಗಂಧದ ಮರ ಗಳು ತುಂಬಿದ್ದು ವು. ಆ ಗಿಡಗಳ ತಾಳುಗಳಲ್ಲಿ ಸರ್ಪಗಳು ನಿತ್ಯವೂ ಸುತ್ತಿ ಕೊಳ್ಳುತಲಿದ್ದುದರಿಂದ, ನಿಲುವಿನ ಸುತ್ತಲೂ ಮರಗಳು ಕಡೆದಂತಾಗಿ ದ್ದುವು, ಆ ಮರಗಳಲ್ಲಿಯೇ ದಂಡಿನ ಆನೆಗಳನ್ನು ಕಟ್ಟಿದ್ದರು, ಅದರಿಂ ದಲೇ ಗಜಗಳ ಹಿಂಗಟ್ಟುಗಳು ಸರಿದರೂ ಮುಂಗಟ್ಟುಗಳು ಸರಿಯಲಿಲ್ಲ. ದಕ್ಷಿಣ ದಿಕ್ಕಿಗೆ ತೆರಳಿದಾಗ ರವಿಗೂ ತಪವು ತಗ್ಗು ವುದು, ಆದರೆ - ದಕ್ಷಿಣ ದಿಕ್ಕಿನಲ್ಲಿ ಪಾಂಡುದೇಶದ ಅರಸರು-ರಘರಾಜನ ಪ್ರತಾಪವನ್ನು ತಾಳಲಾರದೆ ಹೋದರು, ಅದರಿಂದಲೇ ತಾವುವರ್ಣಿನದಿಯ ಸಂಗಮ ಸ್ಥಳದಲ್ಲಿ ಕಡಲಿನೊಳಗಿನಿಂದ ಎತ್ತಿ ಇಟ್ಟಿದ್ದ ಸಾರತರವಾದ ಮುತ್ತುಗ ಳನ್ನು ಆತನಿಗೆ ಶರಣಾಗತರಾಗಿ ಒಪ್ಪಿಸಿದುದು- ತಾವು ಗಳಿಸಿದ್ದ ಯಶಸ್ಸ ನೈಪ್ಪಿಸುವಂತಿದ್ದಿತು. ಬಳಿಕ ಧೀರನಾದ ದೊರೆಯು - ಚಂದನ ತರುಗಳಿಂದ ತುಂಬಿ, ತೆಂಕಲದೆಸೆಗೆ ಅಲಂಕಾರವಾಗಿದ್ದ ಮಲಯದುರ್ದರ ಗಳೆಂಬ ಬೆಟ್ಟಗಳಲ್ಲಿ ಸುಖವಾಗಿ ತಂಗಿಯಿದ್ದು, ಕಡಲಿಗೆ ಸ್ವಲ್ಪ ದೂರದ ಇರುವ ಭೂಮಿಯ ಬೈಲನ್ನು ದಾಟಿದನು. ಪಡೆಯು-ಪಡುವಣ ದೆಸೆಯ ಅರಸರನ್ನು ಗೆಲ್ಲಬೇಕೆಂಬ ಹುರುಡಿನಿಂದ ಹರಡಿ ನಡೆಯುತಲಿದ್ದಿತು. ಮುನ್ನು ಪರಶುರಾಮನು – ಅಂಬನ್ನೆಸೆದು ಕಡಲನ್ನು ದೂರಸರಿಯುವಂ ತೆಸಗಿದ್ದರೂ, ಮರಳ ಸಹೃಪರ್ವತದ ತಡಿಗೈದಿತೆಂಬಂತಿದ್ದಿ ತು, ದಂಡು ಮುತ್ತಿದೊಡನೆಯೇ ಕೇರಳ ದೇಶದರಸರು - ತಲೆತಪ್ಪಿಸಿಕೊಂಡು ಪಲಾ ಯನವಾದರು, ಅರಗಿತಿಯರು-ಅಂದವಾದ ಉಡಿಗೆತೊಡಿಗೆಗಳನ್ನೆಲ್ಲ ಕಳಚಿ ಬಿಟ್ಟರು, ಸೇನೆಯು ತುಳಿತದಿಂದೆದ್ದ ರಸವು-ಅವರ ಬೈತಲೆಯ ಬಳಿಯಣ ಹಣೆಗಳಲ್ಲಿ ಕುಂಕುಮಭೂರ್ಣದಂತೆ ನಿಂಗರಿಸಿತು. ಅಲ್ಲಿಗೆ ಹತ್ತಿರದಲ್ಲಿ ಹರಿಯುತಲಿದ್ದ ಮುರಳಾನದಿಯ ಮೇಲಣ ತಂಗಾಳಿಯು – ಹೊಳೆಯ ಇಕ್ಕೆಲದ ಕೇದಗೆಗಳಮೇಲೆ ಬೀಸುತಲಿದ್ದಿತು, ಹೂಗಳಿಂದೆದ್ದ ರಜವು ಸೈನಿಕರ ಉಡಿಗೆಗಳಲ್ಲಿ ಬಿದ್ದು , ಉಚ್ಚಗಿಸದೆಯೇ ಸಜ್ಜುಗೊಂಡ ಗಂದು ಯಾಯಿತು, ಪಡೆಯು ವಾಜೆಗಳ ನಡಗೆಯಲ್ಲಿ ಜೇನು ಮೊದಲಾದವು ಗಳಿಂದ ಹೇರಳವಾಗಿ ಮುರಮುರನೆಂಬ ಸದ್ದಾಗುತಲಿದ್ದಿ ತು, ಆಗ -