ಪುಟ:ರಘುಕುಲ ಚರಿತಂ ಭಾಗ ೧.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಶ್ರೀ ಶಾ ರ ದ . ಆ ಪ್ರಾಂತದ ತಾಳಯ ಮರಗಳಲ್ಲಿ ಗಾಳಿಯ ಹೊಡೆತದಿಂದುಂಟಾಗುತ ಲಿರುವ ಎಲೆಗಳ ಗಲಗಲ ಶಬ್ದವು ಕೇಳಬರಲೇಇಲ್ಲ. ಖರ್ಜರದ ಗಿಡಗಳ ತಾಳುಗಳಲ್ಲಿ ಮದವೇರಿದ ಆನೆಗಳನ್ನು ಕಟ್ಟಿದ್ದರು. ಅವುಗಳ ಕಪೋಲಗಳು ಮದಜಲದ ಹರಿತದಿಂದ ಸುವಾಸನೆಯಾಗಿದ್ದು ವು. ಇಕ್ಕಲ ಗಳಲ್ಲಿ ಬೆಳೆದಿದ್ದ ಸುರಹೊನ್ನೆಯ ಹೂಗಳನ್ನು ತೊರೆದು ದುಂಬಿಗಳು ಆನೆಗಳ ಗಲ್ಲಿಗಳಲ್ಲಿ ಬಂದಿಳಿದುವು, ಪಡುವಣ ಕಡಲ ತಡಿಯ ನಾಡುಗ ಳರಸರು - ಕಾಳಗಕ್ಕೆಳಸದೆ ಕಾಣಿಕೆಗಳನ್ನೊಪ್ಪಿಸಿ ರಘುರಾಜನಿಗೆ ಅಡಿ ಯಾಳುಗಳಾದರು, ಹಿಂದೆ ಜಮದಗ್ನಿ ಕುಮಾರನು ತಪವಂಗೆಯ್ಯಲು ಬೇಡಿಕೊಂಡುದರಿಂದ ತಾವನ್ನು ಕೊಟ್ಟ, ಕಡಲು - ಈಗ, ತಾನೂ ಒಬ್ಬ ಅರಸೆಂದು ಅಧೀನವಾಗಿ ಕಪ್ಪವನೆ ಪ್ಪಿಸುವಂತಿದ್ದಿ ತು, ಆಗ - ರಘು ರಾಜನ ಪಡೆಯೊಳಿದ್ದ ಮದವೇರಿದ ಆನೆಗಳು -- ಅಲ್ಲಿರುವ ತ್ರಿಕೂಟ ಪರ್ವತದ ದೊಡ್ಡ ಬಂಡೆಗಳನ್ನು ಕೊಂಬುಗಳಿಂದ ತಿವಿದು ಗೂಟಾಡಿ ದುವು. ಅಲ್ಲಲ್ಲಿ ಕಲ್ಲಿನ ಚಕ್ಕೆಗಳನ್ನು ಗುರುತಾಯಿತು, ಅದರಿಂದ ರಘುವು - ನಾನಾನಾಡುಗಳನ್ನು ಜಯಿಸಿದುದಕ್ಕೆ ತ್ರಿಕೂಟವನ್ನೇ ತನ್ನ ಪರುಪ್ಪದ ಪರಿಯನ್ನು ಸೂಚಿಸುವ ವರ್ಣಾವಳಿಯನ್ನು ಕೆತ್ತಿಸಿದ ಎತ್ತ ರವಾದ ಜಯಸ್ತಂಭವನ್ನಾಗಿ ಎಸಗಿದನು. ಆ ಬಳಿಕ ಯೋಗಿಯು – ತತ್ತ್ವಜ್ಞಾನದಿಂದ ಇಂದ್ರಿಯಗಳೆಂಬ ಹಗೆಗಳನ್ನು ಗೆಲ್ಲುವಹಾಗೆ, ರಘುವು , ಪಾರಸೀ ದೇಶದ ಅರಸನನ್ನು ಜಯಿಸಬೇಕೆಂದು ಬಯಸಿದನು ; ಆದರೆ - ಹಡಗಿನಿಂದ ಕಡಲಮಲಣ ಹಾದಿಯೇ ಹತ್ತಿರವಾಗಿ ತೋರಿದರೂ, ಅದನ್ನು ಬಿಟ್ಟು, ನೆಲದಮೇಲಣ ಹಾದಿಯಿಂದಲೇ ಹೊರಟನು. ರಘುವು - ಯವನರಾಜರರನಿಯರ ಮೊಗದಾವರೆಗಳಲ್ಲಿ ಮಧುಸೇವೆಯಿಂದುಂಟಾಗಿದ್ದ ಮದರಾಗವನ್ನು ಸಹಿಸದೆ ಹೋದುದು, ಅಕಾಲದಲ್ಲಿ ಮುಗಿಲೊಳಗೆ ಮೂಡಿದ ಮೋಡವುತಾವರೆಗಳಿಗೆರಗುವ ಎಳಬಿಸಿಲನ್ನು ತಾಳಲಾರದಂತಿದ್ದಿತು, ಪಡುವಣ ನಾಡುಗಳ ಯವನರು - ಕುದುರೆಗಳ ಬಲವನ್ನೊಳಗೊಂಡು ರಘುವನ್ನಿದಿ ರಿಸಿದರು, ಇವರೊಡನೆ ನಡೆದ ದೊಂಬಿಯ ಕಾಳಗದ ಧೂಳಿಯಲ್ಲಿ ಕೊಂಬಿನ ಕೂಗಿನಿಂದಲೋ, ಬಿಲ್ಲಿನ ಟಂಕಾದಿಂದಲೋ, ಆದಿಕಾಳನ್ನು ಅರಿಯಬೇಕಾಗಿದ್ದಿತು. ರಘುವು -ಯವನರ ಶಿರಗಳನ್ನೆಲ್ಲ ತರಿದು ಬವರದ