ಪುಟ:ರಘುಕುಲ ಚರಿತಂ ಭಾಗ ೧.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತ ೫೧ wwwmwww•w+ ••••• •mM ತಿರಯಮೇಲೆ ಹರಡಿ ಇಟ್ಟಿದನು, ರೂಮುಗಳ ಬೆಳವಳಿಗೆಯಿಂದ ತುಂಬಿದ ಅವರ ತಲೆಬುರುಡೆಗಳು- ನೋಣಗಳಿಂದ ತುಂಬಿದ ಜೇನುಕೊಡ ಗಳಂತೆ ಕಾಣಬರುತಲಿದ್ದುವು. ಕಾಳಗದೊಳಗೆ ಕಳೆದುಳಿದ ಯವನರು - ತಲೆಚಿಗುಗಳನ್ನು ತೆಗೆದು ಅರಸಿಗೆ ಮರೆಹೊಕ್ಕರು, ಮಹಾತ್ಮರ ಸಿಟ್ಟುಇದಿರಾಳು ತಗ್ಗು ವವರೆಗೆ ಮಾತ್ರವೇ ಇರತಕ್ಕುದು, ಅಥವಾ ಮಹನೀ ಯರ ರೂಪಕ್ಕೆ ಇದಿರಾಳು ತಗೊಣವೇ ಮುಚ್ಚಲ್ಲವೆ ?

  • ತರುವಾಯ ದ್ರಾಕ್ಷೆಯ ಚಪ್ಪರಗಳ ಅಡಿಯಲ್ಲಿ ಕೃಷ್ಣಾಜಿನಗ ಳನ್ನು ಹರಡಿ ಕುಳಿತು, ದ್ರಾಕ್ಷಾರಸಗಳನ್ನು ಪಾನಮಾಡಿ, ತಣಿದು, ರಘುಸೈನಿಕರು ಕಾಳಗದ ಬಳಲಿಕೆಯನ್ನು ಕಳೆದರು.

ಬಳಿಕ - ಬೆಂಗದಿರನು ಬಡಗಣದೆಸೆಗೆ ಬಂದಾಗ ತನ್ನ ತೇಜದಿಂದ ನೆಲದಲ್ಲಿನ ನೀರನ್ನು ಹೀರುವಹಾಗೆ, ತನ್ನ ಅಂಬುಗಳಿಂದ ಹಗೆಗಳ ಉಸಿ ರನ್ನು ಸೆಳೆಯಲು ರಘುವು-ಕುಬೇರನಾಶೆಗೆ ತಿರುಗಿ, ಸಿಂಧುನದಿಯ ತಡಿಗೆ ಬಂದು, ಕುಂಕುಮ ಕೇಸರದ ತೋಟದಲ್ಲಿ ತಂಗಿದನು, ದಳದ ಹಯಗಳು ನೆಲದಲ್ಲಿ ಉರುಳಾಡಿ ಕೇಸರದಿಂದ ತುಂಬಿದ ಹೆಗ್ಗ ತ್ತುಗಳನ್ನು ಒದರಿ ಮಾರ್ಗಾಯಾಸವನ್ನು ಪರಿಹರಿಸಿಕೊಂಡುವು. ಆಮೇಲೆ-ರಘುರಾಜನು ಹಣದೊರೆಗಳಲ್ಲಿ ತೋರಿದ ಹೇರಳವಾದ ಪೌರುಷವು - ಅವರ ಹೆಂಡಿರು ಗಳ ಕನ್ನಗಳಲ್ಲಿನ ಕೆಂಪುಬಣ್ಣಕ್ಕೆ ಗುರುವಾಯಿತು. ಕಾಂಭೋಜ ದೇಶದ ಅರಸು 1- ಸಮರದಲ್ಲಿ ರಘುವಿನ ಶೌದ್ಧವನ್ನು ತಾಳಲಾರದೆ ತಮ್ಮ ಆನೆಗಳನ್ನು ಬಿಗಿದಿದ್ದ ಅಂಕೋಲೆಯ ಗಿಡಗಳೊಂದಿಗೆ ತಾವೂ ಶಿರಬಾಗಿದರು. ಆ ಹಿಂದೆ - ಮುಕ್ಕಣ್ಣನರಸಿಗೆ ತವರುಮನೆಯಾದ ಹಿಮಗಿರಿ ಯನ್ನು ವಾಜಿಗಳ ಊಡಿನಿಂದ ಏರಿದನ್ನು, ತೇಜೆಗಳ ತುಳಿತದಿಂದೆದ್ದ ರಜದಿಂದ ಬೆಟ್ಟದ ಕೋಡನ್ನು ಬೆಳೆಸುವನೆಂಬಂತೆ ಕಂಗೊಳಿಸಿದನು, ಧರಾಧರವನ್ನೇರುವಾಗ ದಳದ ಕೋಲಾಹಲವು ಬಲವಾಗಿದ್ದರೂ, ಗವಿಗ ಳೊಳಗೆ ಅಲುಗದೆ ಮಲಗಿದ್ದ ನಿಂಗಗಳು ಶಿರಗಳನ್ನು ತಿರುಹಿ ನೋಡಿದ ಕುಡಿನೋಟವು - ಸಮಬಲವನ್ನು ಸೂಚಿಸುತಲಿದ್ದಿ ತು, ಆಗ- ಭುಜಪ ತ್ರೆಯ ಗಿಡಗಳಲ್ಲಿ ಮುರಮುರವೆಂಬ ಸದ್ದನ್ನುಂಟುಮಾಡುತ್ತಾ, ಬಿದಿರು