ಪುಟ:ರಘುಕುಲ ಚರಿತಂ ಭಾಗ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಶ್ರೀ ಕ ತ ದಾ ಮಳಗಳಲ್ಲಿ ಒಳಹೊಕ್ಕು ಕೊಳಲದನಿಯನ್ನು ಕಲ್ಪಿಸಿ, ಬಿಡುಗಣ್ಣರ ಪನಲ ಪನಿಯನ್ನಾಂತು ಹರಿದುಬರುವ ಮೆಲ್ಲೆಲರು - ಮಾರಾಯನಿಗೆ ಹಾಯಾಗಿದ್ದಿತು, ಮತ್ತು - ಆ ಪ್ರಾಂತದ ದೇವಹೊನ್ನೆಯ ಮರಗಳ ನೆಳಲುಗಳಲ್ಲಿನ ಬಂಡೆಗಳಮೇಲೆ ಕತ್ತುರಿಯ ಮಿಕಗಳು ಬಿದ್ದು ಗೊಂಡು ನಿದ್ದೆ ಗೈದಿದ್ದುವು, ಆ ಶಿಲೆಗಳು- ಹೊಕ್ಕಳ ಸೋಂಕಿನಿಂದ ಸುವಾಸನೆಗ ೪ಾಗಿದ್ದುವು. ಅಲ್ಲಿಯೇ ರಘುಸೈನಿಕರು ಬಳಲಿಕೆಯನ್ನು ಕಳೆದರು? ಅಂದಿನ ಇರುಳಿನಲ್ಲಿ ಅಂಕೋಲೆ ಗಿಡಗಳಿಗೆ ಕಟ್ಟಿದ್ದ ಆನೆಗಳ ಕೊರಳನ ಬಂಗಾರದ ಸರಪಣಿಗಳಲ್ಲಿ, ಆ ನೆಲದಲ್ಲಿ ಬೆಳೆದ ಬಳ್ಳಿಗಳು ಹೋಳದು, ದಳ ದಾಳುಗಳಿಗೆ ಆ ಇರುಳಿನಲ್ಲಿ ಎಣ್ಣೆಯಿಲ್ಲದ ದೀವಿಗೆಗಳಾದುವು. ಮಾರ ನೆಯ ದಿನ ಅರಸು-ಅಲ್ಲಿಂದ ಮುಂದಕ್ಕೆ ಪಯಣಮಂ ಬೆಳಸಿದನು. ಅಂದು ಆ ಅಟವಿಗೆ ಬಂದ ಬೇಟೆಗಾರರಿಗೆ ಆನೆಗಳ ಕಟ್ಟುಗಳಿಗೊಳಗಾಗಿದ್ದು ತಿಗ ಡೆದ್ದಿದ್ದ ಅಂಕೋಲೆ ಗಿಡಗಳು-ದಳದಾನೆಗಳ ಮಟ್ಟದಳತೆಯನ್ನು ತಿಳಿಸಿ ದುವು. ಹಿಮಗಿರಿಯಲ್ಲಿನ ಉತ್ಪವರೆಂಬ ಗಣದವರೊಡನೆ ರಘುವಿಗೆ ಘೋರವಾದ ಬವರವು ಬೆಳೆಯಿತು, ಗದವರಿಡುವ ಕವಣೆಗಲ್ಲುಗಳೂ, ದಳಪತಿಗಳೆಸೆವ ಅಂಬಿನಲಗುಗಳೂ ಒಂದಕ್ಕೊಂದು ತಗಲಿ ಬೆಂಕಿಯ ಕಿಡಿಗಳುದುರುತ್ತಿದ್ದವು, ರಘುವು- ತನ್ನ ಶರದಿಂದ ಉತ್ಸವರ ಉತ್ಸಾ ಹವನ್ನೆಲ್ಲ ಅಡಗಿಸಿದನು, ಕಿನ್ನರರು ಅರಸಿನ ತೋಳುಬಲವನ್ನು ಹಾಡಿ ಕೊಂಡಾಡಿದರು. ಬಳಿಕ - ಉತ್ಸವರೆಂಬ ಪರ್ವ ತೀಯರು - ಕಾಣಿಕೆ ಗಳನ್ನು ಕಯ್ಯಲ್ಲಿ ಹಿಡಿದರು. ಆಗ.- ಹಿಮಗಿರಿಯ ಸಾರವು ರಘುರಾ ಹನಿಗೂ, ಅರಸಿನ ಸಾರವು ಹಿಮಗಿರಿಗೂ ಗೊತ್ತಾಯಿತು. ತರುವಾಯ - ರಘುವು ಹಿಮಾದ್ರಿಯಲ್ಲಿ ತನ್ನ ಯಶೋರಾಶಿಯನ್ನು ನೆಲೆಗೊಳಿಸಿ, ದಶಗ ಳನೆತ್ತಿದುದರಿಂದ ಮೊದಲೇ ಪರಾಜಯವನ್ನು ಪಡೆದ ಕೈಲಾಸಕ್ಕೆ ಲಜ್ಜೆಯ ನ್ನುಂಟುಮಾಡುವವನಂತೆ ಅಲ್ಲಿಗೆ ತೆರಳದೆ ಹಿಂದಿರುಗಿದನು, ಮತ್ತು-ಲೌಹಿ ತವೆಂಬ ನದಿಯನ್ನು ದಾಟಿ, ಕಾಮರೂಪ ದೇಶಗಳೊಳಪೊಕ್ಕನು. ಕಾಮರೂಪೇಶ್ವರನು - ಮೊದಲೇ ರಘುಪತಾಪವನ್ನು ಕೇಳಿದ್ದನು, ಹತ್ತಿರಕ್ಕೆ ಬಂದುದಂ ಕೇಳಿ ಹೆದರಿ, ರಳದ ಓರದಗಳ ಕಟ್ಟಿಗಾಸರೆ ಯಾದ ಕಾಲಾಗುರು ತರುಗಳಂತೆ ನಡುಗಿದನು, ಸೋನೆಗರೆಯದಿದ್ದರೂ