ಪುಟ:ರಘುಕುಲ ಚರಿತಂ ಭಾಗ ೧.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ မို ದಂಡಿನ ತುಳಿತದಿಂದೆದ್ದ ರಜದಿಂದ ರವಿಯು ಕಾಣಬರದೆ ದುರ್ದಿನವಾ ಯಿತು, ಧೂ೪ ದರ್ಶನವನ್ನು ತಾಳಲಾರದ ಅರಸು ದಾಳಿಯನ್ನು ತಾಳ ಬಲ್ಲನೆ ? ತರುವಾಯ - ಕಾಮರೂಪರಾಜನು - ರಘುವನ್ನು ಹೊರತು ಉಳಿದರಸರನ್ನೆಲ್ಲ ತನ್ನ ಆನೆಯ ಬಲದಿಂದಲೇ ಗೆದ್ದಿದ್ದನು. ಈಗ-ಅವು ಗಳನ್ನೆಲ್ಲ ಇಂದ್ರನಿಗಿಮ್ಮಡಿಯಾದ ಶೌರವುಳ್ಳ ರಘುವಿಗೊಪ್ಪಿಸಿ ಶರಣ ಹೊಂದಿದನು, ಮತ್ತು - ರಘುವಿನಡಿದಾವರೆಗಳನ್ನು ಚಿನ್ನದ ಮಣೆಯ ಮೇಲೆ ಕುಳ್ಳಿರಿಸಿ, ದೇವತೆಯಂತೆ ಭಾವಿಸಿ, ರತ್ನಗಳಿಂದ ಪೂಜಿಸಿ, ಆತ ನನ್ನು ಗೌರವಿಸಿದನು. ಹೀಗೆ - ಜಯಶೀಲನಾದ ರಘುಮಹಾರಾಜನು ತನ್ನಿ ದಿರಿಗೆ ಕೊಡೆ ಯನ್ನು ಹಿಡಿಯದಂತಾದ ಹಗೆಯ ಸರ ಶಿರಗಳಮೇಲೆ, ತೇರಿನ ರಸವನ್ನೇ ರಿಸಿ, ಸಕಲ ದಿಗ್ವಿಜಯಮಂಗೈದು, ತನ್ನ ದೇಶದ ಕಡೆಗೆ ತಿರುಗಿದನು. ತದನಂತರದಲ್ಲಿ ಪುರವಂ ಸೇರಿದ ರಘು ಭೂಪಾಲನು - ಸರಸ ವನ್ನೂ ದಕ್ಷಿಣೆಯನ್ನಾಗಿ ಒಳಗೊಂಬ ಸರ್ವಜಿತ್ತೆಂಬ ಯಾಗವನ್ನು ಮಾಡಲು ಬಲು ಸಡಗರದಿಂದ ಕೈಗೊಂಡನು, ವಾರಿದಗಳಂತೆ ಸಂತರು ಪಡೆವುದೆಲ್ಲ ಕುಡುವುದಕೇ ಅಲ್ಲವೆ ? - ಇಂತು - ರಘುವರನು ಸತ್ಯವನ್ನು ಶ್ರದ್ದೆಯಿಂದ ಸಮಗೊಳಿಸಿ, ಶುಭಸ್ಪಾನಮುಂ ಗೈದು, ಸಂದಣಿಸಿದ್ದ ಸರ್ವೊವಿ್ರಶರಿಗೂ ಸಕಲ ಸತ್ಕಾ ರಗಳನ್ನೂ ಸಚಿವವರರ ಸಹಾಯದಿಂದ ಸಂತೋಷವೂರ್ಪಕವಾಗಿ ಸಮರ್ಪಿಸಿ ಸಂತಸಗೊಳಿಸಿದನು. ಇದರಿಂದ ಯಾಗಕ್ಕೆ ತಂದಿದ್ದ ಪರರಾಯರೆಲ್ಲ ಕಾಳಗದಲ್ಲಿ ಕೀಳಾಗಿ ಪರಾಜಯವಂ ಪಡೆದೆನೆಂದು ಮನದೊಳುಂಟಾಗಿದ್ದ ಕಳವಳವನ್ನೆಲ್ಲ ಕಳೆದು ಹರ್ಷಪರವಶರಾದ ಪಿ. ಇಂತು ಕಾಕುತ್ಸ್ಥನು -ಬಹು ದಿವಸಗಳಿಂದ ಅಂತಃಪುರಗಳನ್ನು ಅಗಲಿ ಬಂದಿದ್ದ ಅರಸರನ್ನೆಲ್ಲ ತಂತಮ್ಮ ಪುರಗಳನ್ನು ಕುರಿತು ತೆರಳಲುಸಮ್ಮತಿ ನಿದನು. ಬಳಿಕ - ಪಯಣಕಣಿಯಾಗುತಲಿರುವ ಇಳೆಯಾಣ್ಮರೆಲ್ಲ ಛತ್ರಧ್ವಜಚಾಮರಗಳ ರೇಖೆಗಳಿಂದೊಡಗೂಡಿ, ಆತನ ಅನುಗ್ರಹದಿಂ ದಲೇ ಲಭಿಸತಕ್ಕುದಾಗಿರುವ ರಘುಸಾರ್ವಭೌಮನ ಅಡಿದಾವರೆಗಳಿಗೆ ಎರಗಿ ಹೊರಟರು, ಬಾಗಿದ ಶಿರಗಳಿಂದುದಿರಿದ ಪುಷ್ಕರಜಗಳಿಂದ