ಪುಟ:ರಘುಕುಲ ಚರಿತಂ ಭಾಗ ೧.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೩೫ ಪೂಜೆಗೆ ಬೇಕಾದ ಪದಾರ್ಥಗಳನ್ನೆಲ್ಲ ಅಣಿಮಾಡಿಕೊಂಡು ಹೊರಟನು. ಶಾಸ್ತ್ರಗಳನ್ನೆಲ್ಲ ಚೆನ್ನಾಗಿ ಅರಿತು, ಮಾನಧನರೊಳಗೆ ಮೊದಲನೆಯವನೆ ನಿಸಿ, ಕಾರ್ಯಗೌರವದ ಸಂದರ್ಭಗಳನ್ನು ಬಲ್ಲವನಾಗಿರುವ ನರನಾಥನು ಉಚಿತಸ್ಥಾನದಲ್ಲಿ ತಪೋಧನನನ್ನು ಇದಿರೆ೦ಡು, ಪೀಠವನ್ನಿತ್ತು, ವಿಧಿ ಪ್ರಕಾರ ಸತ್ಕರಿಸಿ, ಕೈಜೋಡಿಸಿಕೊಂಡು, ಆತನ ಬಳಿಯೊಳು ನಿಂತು ಇಂತಂದನು - ದರ್ಭೆಯ ತುದಿಯಂತೆ ಮೊನೆಯಾದ ಮತಿಯುಳ್ಳ ಎಲೆ ಮುನಿ ಯೇ ! ಮಂತ್ರಕರಾದ ಮಹರ್ಷಿಗಳೊಳಗೆ ಅಗ ಗಣನೆನಿಸಿದ ನಿನ್ನಯ ಗುರುವು ಕುಶಲದಿಂದಿರುವನೆ ? ದಿನನಾಥನಿಂದ ಜನವು ಎಚ್ಚರ ವನ್ನು ಪಡೆವಂತೆ, ಆತನಿಂದಲೇ ಅಲ್ಲವೆ ನೀನು ಶಾಸ್ತ್ರಜ್ಞಾನವನ್ನೆಲ್ಲ ಸಂಪ ದಿಸಿದುದು ? ಮೈ, ಮಾತು, ಮನ ಎಂಬೀ ಮೂರು ಕರಣಗಳಿಂದ ಆತನು ಗಳಿಸುತಲಿರುವ ತಪವು – ತನಗೆಲ್ಲಿ ತಾವು ತಪ್ಪುವುದೋ ಎಂದು ಇಂದ್ರನನ್ನೂ ಅಳುಕಿಸತಕ್ಕುದು, ಅಂತಹ ತಪಸ್ಸು ಆವುದೊಂದು ಅಡ್ಡಿ ವಿಡೂರದಿಂದಲೂ ಕುಂದದಿರುವುದೆ ? ಪಾದೆಗಟ್ಟುವುದು, ಹದವ ರಿತು ನೀರ ಬಿಡುವುದು, ಸೆಬ್ಬೆಯರಿತು ಗೊಬ್ಬರವಿಡುವುದು, ಎಂಬಿದೇ ಮೊದಲಾದ ಬೇಸಾಯಗಳಿಂದ ಹಸುಳೆಗಳನ್ನು ಹೇಗೋಹಾಗೆ ಕಾಪಾ ಡಿದ ನಿಮ್ಮ ತಪೋವನ ತರುಗಳು – ಬಳಲಿಕೆಗಳನ್ನು ಕಳೆಯತಕ್ಕವುಗ ೪ನಿಸಿ, ಬಿರುಗಾಳಿ ಮೊದಲಾದವುಗಳಿಂದ ನೋವನ್ನು ಪಡೆಯದಿದೆಯೆ ? ಸತ್ಕರಾಚರಣೆಗೆ ಬೇಕಾದವುಗಳೆಂದು ಅಕ್ಕರೆಯಿಂದ ಬೆಳೆಯಿಸಿಕೊಂ ಡಿರುವ ದರ್ಭೆ ಹುಲ್ಲುಗಳನ್ನು ಮೆಚ್ಚ ರೂ, ಮಮತೆಯಿಂದ ಮುನಿಗಳ ಅಡ್ಡಿಯನ್ನು ಪಡೆಯದಿರುವ ಹುದ್ದೆಗಳ ಮರಿಗಳು ತಾನಾಗಿ ಹೊಕ್ಕಳು ಬೀಳುವವರೆಗೂ ತಪಸಿಗಳ ತೊಡೆಗಳ ಮೇಲೆಯೇ ಬೆಳೆಯುತ್ತಾ, ಆವುದೊಂದು ಅಪಾಯವೂ ಇಲ್ಲದೆ ಸುಖದಿಂದಿರುವುವೆ ? ನೇಮದ ಸ್ಥಾನ ಗಳಡೇರಲು ಊಡಾಗಿ, ಪಿತೃಗಳಿಗೆ ಕೊಡತಕ್ಕ ತರ್ಪಣಗಳಿಗೆ ಆಸರೆ ಯೆನಿಸಿ, ಹಕ್ಕಲಾಯ್ತು ತಂದ ಕಾಳುಕಡಿಗಳಲ್ಲಿ ಅರಸಿಗೆ ಕೊಡತಕ್ಕ ಕಂದಾಯವೆಂದು ತೆಗೆದಿಡುವ ಆರನೆಯ ಒಂದು ಪಾಲಿಗೆ ತಮ್ಮ ತಡಿಯ ಬೈಲಿನಲ್ಲಿ ಎಡೆಗೊಟ್ಟಿರುವ ನಿಮ್ಮ ತೀರ್ಥೋದಕಗಳು ಆವುದೊಂದು ತೊಂದರೆಗೂ ಒಳಗಾಗದಿರುವುವೆ ? ಮಧ್ಯಾಹ್ನಾದಿ ಕಾಲಗಳಲ್ಲಿ ಬರುವ