ಪುಟ:ರಘುಕುಲ ಚರಿತಂ ಭಾಗ ೧.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಶ್ರೀ ಖಾ ರ ದ . ಅಯ್ಯಾ ದೊರೆಯ ! ನ್ಯಾಯಾರ್ಚನೆ, ಧರ್ಮಪರಿಪಾಲನೆ, ಸತ್ತಾ ತ್ರವಿನಿಯೋಗ, ಈ ಮೊದಲಾದ ಒಳ್ಳೆಯ ನಡತೆಯಲ್ಲಿರುವ ಪ್ರಜಾನಾ ಥನಾದ ನಿನಗೆ, ಇಳಯು-ಕೇಳಿದುದನ್ನೆಲ್ಲ ಕೊಡುವುದೆಂಬುದೇನೂ ಆಶ್ಚ ರ್ಯವಲ್ಲ, ಮುಗಿಲುಕೂಡ ಮನೋಗತವನ್ನು ಕರೆದುದೇ !! ಇದರಿಂದ ನಿನ್ನ ಮಹಿಮೆಯು ಅಸದಳವೆನಿಸಿದೆ. ಎಲೈ ಉರ್ವರೇಶನೆ ! ಇಂತಹ ನಿನಗೆ ನಾನು ಮಂಗಳಾಶಾಸನ ಮಾಡತಕ್ಕುದೇನಿದೆ ? ಎಲ್ಲ ಮೇಲೆ ಗ ಳನ್ನು ಪಡೆದಿರುವ ನಿನಗೆ ಇರುವುದನ್ನೇ ಹರಸಿದಂತಾಗುವುದು. ಆದ ಕಾರಣ-ಸ್ತೋತ್ರಾರ್ಹನಾದ ನಿನ್ನನ್ನು ನಿಮ್ಮ ತಂದೆಯು ಪಡೆದಹಾಗೆ, ನಿನ್ನಂತಹ ಸುಗುಣಸಂಪನ್ನನಾದ ಸತ್ಪುತ್ರನನ್ನು ನೀನೂ ಪಡೆ, ಎಂದೀ ಪ್ರಕಾರ ರಾಜನನ್ನು ಆಶೀರ್ವದಿಸಿ, ಭೂಸುರೋತ್ತಮನಾದ ಕೌನ್ಸನು ತನ್ನ ಗುರುವಿನ ಸನ್ನಿಧಾನವನ್ನು ಕುರಿತು ತೆರಳಿದನು. ಮಹಾರಾಜನೂ ಮುನಿಯ ಆಶೀರ್ವಾದದಿಂದ, ಪ್ರಾಣಿವರ್ಗವು-ಪ್ರಭಾಕರನಿಂದ ಬೆಳಕನ್ನು ಪಡೆಯುವಹಾಗೆ, ಸಲ್ಪ ಕಾಲದಲ್ಲಿಯೇ ಸುಪುತ್ರನನ್ನು ಪಡೆದನು. ರಘು ಧರ್ಮಪತ್ನಿಯು-ಕುಮಾರಸ್ವಾಮಿಗೆಣೆಯೆನಿಸಿದ ಸುಕುಮಾ ರನನ್ನು ಬ್ರಹ್ಮನೇ ದೇವತೆಯಾಗಿರುವ ಅಭಿಜಿತ್ತೆಂಬ ಮುಹೂರ್ತದಲ್ಲಿ ಹಡದಳು, ಅದರಿಂದ ತಂದೆಯು-ಬ್ರಹ್ಮ ನಾಮವಾದ ಅಜ ಎಂಬ ಹೆಸರಿ ನಿಂದಲೇ ತನ್ನ ಮಗನಿಗೆ ನಾಮಕರಣವನ್ನು ಮಾಡಿದನು. ತಂದೆಯ ಹೊರನಾದ ಆಕಾರ, ಆತನಂತೆಯೇ ಶೌರ್ಯ, ಸ್ವಾಭಾವಿಕವಾದ ಎತ್ತ ರವೂ ತಂದೆಯ ಹಾಗೆಯೇ ಇದ್ದುದರಿಂದ, ಆ ಕುಮಾರನು ದೊಡ್ಡ ದೀಪದಿಂದ ಹತ್ತಿಸಿದ ಸಣ್ಣ ದೀಪದಹಾಗೆ ಸರ್ವಪಕಾರದಿಂದಲೂ ತನಗೆ ಕಾರಣನಾದ ತಂದೆಗಿಂತ ಬೇರೆನಿಸಲಿಲ್ಲ, ಹೀಗೆ ಕೆಲವು ಕಾಲ ಕಳೆಯಲು, ಅಜಕುಮಾರನು-ವಿಧಿಯನ್ನನುಸರಿಸಿ, ಗುರುಗಳಿಂದ ವಿದ್ಯೆಗಳನ್ನೆಲ್ಲ ಕಲಿ ತನು. ಹರೆಯದ ಹೊರವಿನಿಂದ ಹೊಮ್ಮಿ ಬಲು ಸೊಗಯಿಸುವಂತಾದನು, ರಾಜ್ಝಲಕ್ಷ್ಮಿಯು-ವಿಶೇಷವಾದ ಅಭಿಲಾಪ್ಪೆಯುಳ್ಳವಳಾದರೂ, ಸ್ಥಿರಚಿ ತಳಾದ ಕನೈಯು - ತನ್ನ ತಂದೆಯ ಅಪ್ಪಣೆಯನ್ನು ನಿರೀಕ್ಷಿಸುವಂತೆ, ಅಜನ ಕೈಹಿಡಿಯಲು ರಘುವಿನ ಆಣತಿಯನ್ನು ಇದಿರುನೋಡುತಲಿದ್ದಳು. ತರುವಾಯ - ಅಜನ ಸುಗುಣಗಳು ಕರ್ಣಾಕರ್ಣಿಕವಾಗಿ ವಿದಗ್ಧ ದೇಶಗಳ ರಾಜನಾದ ಭೋಜನ ಕಿವಿಯನ್ನು ಹೊಕ್ಕುವು. ಆತನು *