ಪುಟ:ರಘುಕುಲ ಚರಿತಂ ಭಾಗ ೧.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ರಘುಕುಲಚರಿತಂ wwwvvvvvvwwwMMwwwmv rv YP + | ತನ್ನ ತಂಗಿಯಾದ ಇಂದುಮತಿಗೆ ಸ್ವಯಂವರ ಮಹೋತ್ಸವವನ್ನು ಬೆಳಸ ಬೇಕೆಂದು ಬಯಸಿ, ಅಜಕುಮಾರನನ್ನು ಕರೆತರಲಿಕ್ಕೆ ಆಪ್ತನಾದ ದೂತ ನನ್ನು ಕಳುಹಿಸಿದನು. ರಘುವು - ಭೋಜನ ವಾಗ್ವಾಹರನಿಂದ ಸುದ್ದಿ ಯನ್ನು ತಿಳಿದನು, ಸಂಬಂಧವನ್ನು ಬೆಳಸಲಿಕ್ಕೆ ಭೋಜನು ಅರ್ಹನೆಂದು ಭಾವಿಸಿದನು, ತನ್ನ ಕುಮಾರನೂ ಪಾಣಿಗ್ರಹಣಕ್ಕೆ ತಕ್ಕವನಾಗಿರುವ ನೆಂದು ಚಿಂತಿಸಿದನು, ಆಮೇಲೆ - ಅನುಕೂಲವಾದ ಸಲಕರಣೆಗಳನ್ನೆಲ್ಲ ಅಣಿಮಾಡಿಕೊಟ್ಟು, ತನಯನನ್ನು ತಕ್ಕ ಪಡೆಯೊಡನೆ ಭೋಜ ರಾಜಧಾ ನಿಯನ್ನು ಕುರಿತು ಕಳುಹಿಸಿಕೊಟ್ಟನು. ಆ ರಾಜಕುಮಾರನಿಗೆ ಪ್ರಯಾಣ ಸಮಯದಲ್ಲಿ ಇಳಿದುಕೊಂಡ ಸ್ಥಲಗಳೊಳಗೆ ನಟ್ಟ ಗೂಡಾರಗಳಲ್ಲಿ - ದೇಶದಿಂದ ಬಂದ ರಾಜಾರ್ಹವಾದ ಪದಾರ್ಥಗಳಿಂದಲೇ ಸಮಸ್ತ ಉಪ ಚಾರಗಳೂ ನಡೆದುವಲ್ಲದೆ, ವನದಲ್ಲಿ ಬೆಳೆದ ಪದಾರ್ಥಗಳಿಂದಲ್ಲ. ಆದ ಕಾರಣ, ಟಂಕಿ (ಮಜಲು) ಗಳೆಲ್ಲವೂ ಉಪವನ ವಿಹಾರಗಳಂತೆಯೇ ಆಗಿದ್ದು ವು. ಹೀಗೆ - ದೊರಮಗನು - ಪಯಣದಮೇಲೆ ಪಯಣವನ್ನು ಬೆಳಸಿ, ನರ್ಮದಾ ನದಿಯ ತಡಿಯೊ೪ಳಿದನು, ಅದುವರೆಗೆ ಸೇನೆಯಲ್ಲಿ ಬಳಲಿತು, ದಳದ ಧ್ವಜಗಳ ತುದಿಯ ಬಟ್ಟೆಗಳೆಲ್ಲ ಧೂಳಿಯಿಂದ ಮಲಿನ ಗಳಾದುವು, ಆ ಹೊಳೆಯ ದಡದಲ್ಲಿಯೇ ಬೀಡುಬಿಟ್ಟಿತು, ಪ್ರವಾಹ ದಮೇಲೆ ಹರಿದು, ತುಂತುರುಗಳನ್ನು ಹೊತ್ತು, ಹೊಂಗೆಯ ಮರಗಳೂ ಳಗೆ ನುಗ್ಗಿ ಬರುತಲಿರುವ ತಂಗಾಳಿಯು ಬೀಸುತಲಿದ್ದಿತು. ಇದಿರಿಗೆ ಹರಿಯುತಲಿರುವ ಪ್ರವಾಹದ ಮೇಲುಗಡೆಯಲ್ಲಿ ಒಂದೇ ಕಡೆಯೊಳಗೆ ಗುಂಪಾಗಿ ದುಂಬಿಗಳು ಹಾರಾಡುತಲಿದ್ದು ವು, ಅದರಿಂದ - ನೀರಿನಲ್ಲಿ ಕಾಡಾನೆಯೊಂದು ಮುಳುಗಿರುವುದೆಂದು ಸೂಚಿತವಾಗುತಲಿದ್ದಿ ತು, ಸಲ್ಪ ಹೊತ್ತಿನಲ್ಲಿಯೇ ಗಜವು ಮೇಲಕ್ಕೆದ್ದು ಕಾಣಿಸಿಕೊಂಡಿತು, ನೀರಿನಿಂದ ಮದಜಲಧಾರೆಯೆಲ್ಲ ತೊಳೆದುಹೋಗಿದ್ದುದರಿಂದ, ಕರೋ ಲವು ನಿರ್ಮಲವಾಗಿ ಕಾಣಬಂದಿತು. ಮೇಲುಗಡೆ ಹತ್ತಿದ್ದ ಕಾವಿ ಮೊದಲಾದ ಕಲ್ಲಿನ ಬಣ್ಣವು ಚೆನ್ನಾಗಿ ತೊಡೆದುಹೋಗಿದ್ದ ರೂ, ಕಾ ಗಿಯ, ಮೇಲ್ಮುಖವಾಗಿಯೂ ಕಾಣಬರುವ ಗೆರೆಗಳನ್ನೊಳಗೊಂಡು, ಕಲ್ಲಿನ ಪೆಟ್ಟಿ ನಿಂದ ಚಕ್ಕೆಗಳೆದ್ದಿರುವ ಕೊಂಬುಗಳಿಂದ ಮಕ್ಕವತ್ತೆಂಬ ಪರ್ವತ ಪ್ರಾಂತದಲ್ಲಿ ಗೂಟಾಡಿದ್ದು ದನ್ನು ಸೂಚಿಸುತಲಿದ್ದಿತು. ಇದಲ್ಲದೆ