ಪುಟ:ರಘುಕುಲ ಚರಿತಂ ಭಾಗ ೧.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lಳಿ ಶ್ರೀ ಕಾ ರದಾ . {ಅ MMM-೧೧ ಪರಿಗ್ರಹಿಸಲಿ ? ಎಂದು ನಾಚಿಕೆಗೊಳ್ಳಬೇಡ, ನೀನು ಸರಳನ್ನಿಡುವಾಗ ಸ್ವಲ್ಪ ಕಾಲ ತಾಳ್ಮೆಯಿಂದ ದಯಾಳುತೆಯನ್ನು ತೋರಿ - ಮೃದುವಾ ಗಿಯೂ ಪ್ರಯೋಗಿಸಿ ಇದ್ದೀಯೆ. ನಾನಾಗಿ ಪ್ರಾರ್ಥಿಸುತ್ತಿರುವಲ್ಲಿ ನೀನು ತಿರಸ್ಕಾರದ ಕೌರವನ್ನು ತೋರಬಾರದು ಎಂದನು. ಆ ಬಳಿಕ – ಹಾಗೆಯೇ ಆಗಲೆಂದು ಸಮ್ಮತಿಸಿ, ಸೋಮನಂತೆಸೆವ ಅಜಕುಮಾರನು - ಸೋಮಸುತೆಯಾದ ನರ್ಮದೆಯ ಪಾವನ ಜಲದಲ್ಲಿ ಆಚಮನಮಾಡಿ, ಉತ್ತರಾಭಿಮುಖನಾಗಿ, ಶಾಪಪರಿಹಾರದಿಂದ ಪ್ರಯ ವನ್ನು ಪಡೆದ ಪ್ರಿಯಂವದನಿಂದ ಪ್ರತಿಕ್ರಿಯವಾಗಿ ಅಸ್ತಮಂತ್ರವನ್ನು ಪರಿಗ್ರಹಿಸಿದನು. ಹೀಗೆ - ದೈವವಶದಿಂದ ದಾರಿಯಲ್ಲಿ ಸಂಧಿಸಿದ ಅವ ರೀರ್ವರಿಗೂ ಕಾಕತಾಳೀಯ ನ್ಯಾಯದಿಂದ ಸಖ್ಯವು ಕಲೆಯಿತು. ಹಾಗೆ - ಸೇರಿದ್ದ ಅವರಿಬ್ಬರಲ್ಲಿ ಪ್ರಿಯಂವದನು ಕುಬೇರೋದ್ಯಾನವನ್ನು ಕುರಿತೂ, ಅಜಕುಮಾರನು ಭೂಾಜನಗರಿಯನ್ನು ಕುರಿತೂ ಪ್ರಯಾ ಇವನ್ನು ಬೆಳಸಿದರು. - ಅಜಕುಮಾರನು ರಾಜಧಾನಿಯ ಸವಿಾಪಕ್ಕೆ ಬಂದನೆಂಬ ಸುದ್ದಿ ಯು ವಿದರ್ಭರಾಜನಿಗೆ ತಿಳಿಯಿತು, ಅವನ ಆಗಮನದಿಂದ ಅತಿ ಹರ್ಷಿತನಾ ದನು, ಮೂಡಿ ಬೆಳಗುತಲಿರುವ ಚಂದಿರನನ್ನು ತೆರೆಗಳಿಂದುಬ್ಬಿ ಮೆರೆ ಯುವ ಕಡಲಿನಂತೆ ಅರಗುವರನನ್ನು ಇದಿರ್ಗೊಂಡನು. ಭೋಜನಾ ಇತಿಯನ್ನು ಶಿರದೊಳಾಂತ ಅಧಿಕಾರಿಗಳು ವಿಧೇಯರಾಗಿ ಬಿಡಾರವನ್ನು ತೋರಿದರು. ಆ ರಾಜಭವನದ ಮುಂದಣ ಜಗುಲಿಯ ಇಕ್ಕೆಲದಲ್ಲಿಯೂ ಮಂಗಳಕರವಾದ ಪೂರ್ಣಕುಂಭಗಳನ್ನಿಟ್ಟಿದ್ದರು, ಪೊಸತೆನಿಸಿದ ಆ ಅರಮನೆಯನ್ನು ಅರಸುಕುಮಾರನು ಹೊಕ್ಕುದು ಬಾಲ್ಯಕ್ಕಿಂತ ಎರಡ ನೆಯದಾದ ಪ್ರಾಯವನ್ನು ಪಂಚಬಾಣನು ಪ್ರವೇಶಿಸುವಂತಿದಿತು. ಅಜನು ಆ ದಿವ್ಯ ಭವನದಲ್ಲಿ ಅಂದಿನ ದಿನವನ್ನು ಸುಖವಾಗಿ ಕಳೆದನು, ರಾತ್ರಿಯಾಗಲು ರಾಜಾರ್ಹವಾದ ಭೋಜನವನ್ನು ತೀರಿಸಿಕೊಂಡನು, ದಿವ್ಯ ಹಂಸತೂಲಿಕಾ ತಲ್ಪದಲ್ಲಿ ಹವಳದನು, ಆದರೆ – ಸ್ವಯಂವರಾ ರ್ಥವಾಗಿ ರಾಜಕುಮಾರನನ್ನು ಕರೆತರಿಸಿರುವ ಮನೋಹರವಾದ ಕನ್ಯಾ ರತ್ನವನ್ನು ಪಡೆಯಲು ಬಯಸುತಲಿರುವ ಅಜಕುಮಾರನ ನಯನಗಳನ್ನು ನಿದ್ರೆಯು, ಇವನ ಅಂತರಂಗವನ್ನು ಅರಿಯಲು ಅಸಮರ್ಥಳಾದ