ಪುಟ:ರಘುಕುಲ ಚರಿತಂ ಭಾಗ ೧.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫] ರಘುಕುಲಚರಿತಂ ೬೫ ಅರವಿಯಂತೆ ಬಹಳ ಹೊತ್ತಿನಮೇಲೆ ಇದಿರೊ ಂಡಿತ್ತು. ಇರುಳಕಳದು, ಬೆಳಕು ಹರಿಯುತ್ತ ಬಂದಿತು, ರತ್ನಕರ್ಣಕುಂಡಲಗಳಿಂದ ಕುಮಾರನ ಬಲಿತ ಭುಜಗಳೆರಡೂ ಒತ್ತಲ್ಪಟ್ಟದ್ದುವು, ಸುಪ್ಪತ್ತಿಗೆಯ ಮೇಲು ಹಾಸಿಗೆಯಲ್ಲಿ ಅಂಗರಾಗವೆಲ್ಲ ತೊಡೆದುಹೋಗಿದ್ದಿತು. ಇನ್ನೆನು ಎಚ್ಚರವಾಗುವ ಸಮಯ, ಅಷ್ಟು ಹೊತ್ತಿಗೆ, ವಯಸ್ಸಿನಲ್ಲಿ ಓರಗೆಯವ ರಾದ ವಂದಿಕುಮಾರರು - ಪ್ರಜ್ಞಾಶಾಲಿಯಾದ ಪಾರ್ಥಿವಾತ್ಮ ಜನನ್ನು ಸ್ತುತಿಪಾಠಗಳಿಂದ ಎಚ್ಚರಗೊಳಿಸತೆ ಡಗಿದರು - ಮತಿವಂತರೊಳಗುತ್ತಮನೆನಿಸಿದ ಎಲೈ ಮಹಾರಾಜನಂದನನೇ ! ಮಂಚವನ್ನು ಬಿಟ್ಟು ಎಚ್ಚರಗೊಳ್ಳು, ಬ್ರಹ್ಮನು - ಈ ಭೂಮಿಯ ಹೊರೆಯನ್ನು ಎರಡು ಪಾಲನ್ನೆ ಮಾಡಿರುವನು, ಅವುಗಳೊಳಗೆ ಒಂದರ ತುದಿಯನ್ನು ಬಲು ಎಚ್ಚರಿಕೆಯಿಂದಿರುವ ನಿನ್ನ ತಂದೆಯು ಹೆಗಲಿನಿಂದ ಹೊತ್ತಿರುವನು, ಮತ್ತೊಂದುಕಡೆಯ ಭಾರಕ್ಕೆ ನಿನ್ನ ಭುಜವೇ ಊಡಲ್ಲವೆ ? ನೀನಾದರೆ ನಿದ್ರೆಗೆ ವಶನಾದೆ, ಕಾಂತಿಲಕ್ಷ್ಮಿಯ ನ್ನು ಪೇಕ್ಷಿಸಿದೆ, ಅಬಲೆಯಾದ ಆಕೆಗೂಡುತಪ್ಪಿತು, ನಿನ್ನ ಮುಖಕ್ಕೆ, ಣೆಯಾದ ಬೇರೊಂದಾಸರೆಯನ್ನು ತಡಕಬೇಕಾಯಿತು, ನಿನ್ನಗಲಿಕೆ ಯಿಂದುಂಟಾದ ಮನಸ್ಸಿನ ನೋವನ್ನು ತಾಳಲಾರದೆ ಹೋದಳು, ಸ್ವಲ್ಪ ನಿಟ್ಟು ಹತ್ತಿದಂತಾಯಿತು, ಚಿತ್ರವು ತುಸ ಬಂಡಾಯಿತು, ಚಂದ್ರನ ನ್ಯಾಶ್ರಯಿಸಿ ಕಿಂಚಿತ್ತು ಸಮಾಧಾನವನ್ನು ಪಡೆದುಕೊಳ್ಳುತಲಿದ್ದಳು; ಆ ಚಂದಿರನೂ ಪಡುವಣ ದೆಸೆಗಧೀನನಾಗುವಹಾಗಾಯಿತು, ನಿನ್ನ ಮೊಗದ ಸೊಬಗು ಅವನಲ್ಲಿಯ ಕಡಮೆಯಾಗುತ ಬಂದಿತು, ಅದರಿಂದಲೆ ನೀನೆಚ್ಚತ್ತು ದಿಕ್ಕಿಲ್ಲದ ಆ ಲಕುಮಿಗಾಸರೆಯನ್ನು ನೀಡು. ದಯಮಾಡು. ಅಂತಾಲಕ್ಷ್ಮಿಯನ್ನು ಪರಿಗ್ರಹಿಸಿದರೆ, ಒಂದೇ ಹೊತ್ತಿನಲ್ಲಿ ಸಮವಾಗಿ ಅರಳಿ, ಥಳಥಳನೆ ಹೊಳೆಯುತ ಚಲಿಸುತಲಿ ರುವ ಅಂದವಾದ ಕರಿಯ ಗುಡ್ಡನ್ನೊಳಗೊಂಡಿ ತಕ್ಕ ನಿನ್ನ ಕಣ್ಣೂ, ಅಲುಗುತಲಿರುವ ದುಂಬೆಯ ಈುಳ ತಾವರೆಯೂ, ಒಂದರೊಡನೊಂದು ಹೋಲಿಕೆಯನ್ನು ಪಡೆದು ಬೆಳಗಲಿ, ಮುಂಜಾನೆಯ ಮೆಲ್ಲೆಲರು-ತರುಗಳೊಳಗೆ ತೊಟ್ಟಿನಿಂದ ಕಳಚಿ ಉದಿರುವಲರನ್ನು ಸೆಳೆಯುತಲಿದೆ, ಕೆಂಬಣ್ಣದೆಳಬಿಸಿಲಿನಿಂದರಳುತಲಿರುವ ತಾವರೆಯೊಡನೆ ಕಲೆಯುತಲಿದೆ. ಆದಕಾರಣ - ಸ್ವಾಭಾವಿಕವಾಗಿರುವ