ಪುಟ:ರಘುಕುಲ ಚರಿತಂ ಭಾಗ ೧.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಥಾ ಮು ಖ ೦. ಈ ಭೂಮಂಡಲದಲ್ಲಿ ಸರಸಕವಿತಸಾಮಾಜ್ಯ ಸಾರ್ವಭೌಮನೆಂದರೆ ಕಾಳಿದಾಸ ಮಹಾಕವಿಯೊಬ್ಬನಲ್ಲದೆ ಬೇJಾರೂ ಅಲ್ಲ, ಇದರಿಂದ ಇತರ ಮಹ) ಕವಿಗಳಿಗೆ ದೂಷಣೆಯಲ್ಲ, ಎಮಂದಿ ಮಹಾಕವಿಗಳೂ ಇದುರೆ, ಅವರೂ ಆಗೆ ಈಡನು ಪ್ರಥಮಗಣನೀಯನೆನಿಸಿದಾನೆ. ಪುರಾಕವೀನಾಂ ಗಣ ನಾಪ್ರಸಂಗ ! ಕನಿಕ$ಧಿತ ಕಾಳಿದಾಸ || ಅದ್ಯಾಪಿ ತತ್ತುಲ್ಯ ಕವೇ ರಭಾವಾತ್ || ಅನಾಮಿಕಾ ಸಾರ್ಥವತೀ ಬಭೂವ | ನಿ ಪೂರ್ವ ಕವಿಗಳೊಳಗೆ ಹಸರುವಾಸಿಯಲ್ಲಿ ಮೊದಲನೆಯವರಾರು ? ಎಂದು ಕೈಬೆರಳುಗಳಿಂದ ಲೆಕ್ಕ ಮಾಡಲಿಕ್ಕೆ ಹೊರಟಂಗ-ಕಿರಿಬೆರಳು, ಮೊಟ್ಟಮೊದಲು ಕಾಳಿದಾಸನ ಹೆಸರಿಗಸರೆಯಾಯಿತು. ಬಳಿಕ ಆತನಿಗನಯದ ಮತ್ತೊಬ್ಬ ಕವಿಯ ಹೆಸರಾವುದು ? ಎಂದು ಎಣಿಕೆ ಮಾಡುವಲ್ಲಿ . ಇಂದಿನವರೆಗೆ ನೋಡುತಖಂದರೂ ಕಿರಿಬೆರಳಿನಂತೆ ಮಡಿಸಿ ಎಣಿಸಲಿಕ್ಕೆ ಕಾಳಿದಾಸನಿಗೆ ಸಮಾನನಾದ ಕವಿಯ ಹಸರೆ ದೊರೆಯದೆ ಹೋದುದರಿಂದ, ಕಿರಿಬೆರಳಿನ ಪಕ್ಕದ ಬೆರಳಿಗೆ ಅನಾಮಿಕಯಂದಿದ್ದ ರೂಢನಾಮವು ಅನ್ವರ್ಥ ನಾಮವಾಯಿಸು ' ಎಂದು ಕಾಳಿದಾಸ ಕವಿಯ ವಿಷಯ ವಾರ ಶ್ಲಾಘಾಲ್ಲೊಕವು ಲೋಕದಲ್ಲಿ ವಾಡಿಕೆಯಾಗಿದೆ, ಷೇಕ್ಸ್‌ಪಿಯರ್‌ ಕವಿಯು ಹೆಸರಿನಂತೆ ಕಾಳಿದಾಸನ ಹೆಸರೂ ಈ ದೇಶದಲ್ಲಿ ಮಾತ್ರವಲ್ಲದೆ ದೇಕ೦ತರಗಳ ಲ್ಲಿಯೂ ಪ್ರಸಿದ್ಧಿ ಗೊಂಡಿದೆ. ಕವಿತಾ ಕುಂತಗೆ ಚರಕವಿಯು ಮುಂಗೂದಲು, ವಯ೦ನು ಕರ್ಣಾ ಛರಣ, ಭಾಸನೇ ಪಾಸ, ಕವಿಕುಲಗುರುವಾದ ಕಾಳಿದಾಸನೇ ವಿಲಾಸ, ಹರ್ಷನೇ ಹರ್ಷ, ಬಾಣವೇ ಹೃದಯಗತನಾದ ಪಂಚಬಾಣ, ಇಂತಹ ಕಮನೀಯಳಾದ ಈ ಕವಿಕಾಂತಯು ಯಾರಿಗೆ ಕೌತುಕವನ್ನುಂಟು ಮಾಡದಿರುಳು ? ಎಂದು ಜಯ ದೇವ ಕವಿಯು ಕಾಳಿದಾಸನಿಗೆ ವಿಶೇಷ ಮಾನ್ಯತೆಯನ್ನು ಕೊಟ್ಟಿದಾನೆ.