ಪುಟ:ರಘುಕುಲ ಚರಿತಂ ಭಾಗ ೧.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ &n ಒಂrwwwx ಅನ್ಯನಾದ ಒಬ್ಬ ಅವನಿಪಾಲನು - ಧ್ವಜದಂತೆಸೆವ ಗೆರೆಯಿಂದೆ ಡಗೂಡಿ, ಕೆಂದಾವರೆಯಂತೆ ಕಂಗೊಳಿಸುವ ಕರತಲದಿಂದ - ರತ್ನಗಳನ್ನು ಕೆತ್ತಿರತಕ್ಕ ಉಂಗುರಗಳ ಹೊಳವನ್ನೊಳಗೊಂಡಿರುವ ಪಗಡೆಯ ಕಾಯಿ ಗಳನ್ನು ಹಾರಿಸುತಲಿದ್ದನು, ನೀನು ನನಗೆ ಪ್ರಿಯವಲ್ಲಭೆಯಾದರೆ - ನಿನ್ನೊಡನೆ ಪರಮ ಪ್ರೀತಿಯಿಂದ ಪಗಡೆಯನ್ನಾಡುವೆನೆಂದು ನರನಾಥನ ಅಭಿಪ್ರಾಯ, ಇವನು ಸಪ್ತವ್ಯಸನಗಳಲ್ಲೊಬ್ಬನಾದ ಅಹವ್ಯಸನಿ, ಅಯೋಗ್ಯನು ಎಂದು ಇಂದುಮತಿಯ ಭಾವ, ತದಿತರನೊಬ್ಬನು - ತನ್ನ ತಲೆಯಮೇಲಣ ಕಿರೀಟವು ಸ್ಪಷ್ಟ ನದಲ್ಲಿ ಸರಿಯಾಗಿ ಕುಳಿತಿದ್ದ ರೂ, ಸ್ವಲತಪ್ಪಿ ಸರಿದುಹೋಗಿರುವುದನ್ನು ಸರಿಮಾಡಿಕೊಳ್ಳುವವನಂತೆ, ಕರತಲದಿಂದ ಅಲುಗಿಸಿ ಹೊಂದಿಸಿಕೊಳ್ಳತೊಡ ಗಿದ್ದನು, ಆ ಮಕುಟಕ್ಕೆ ಕೆತ್ತಿದ್ದ ವಜಮಣಿಗಳ ಹೊಳವು-ಬೆರಳುಗಳ ಸಂದುಗಳಲ್ಲಿ ಬೆಳಗುತಲಿದ್ದಿತು. ಎಲ್‌ ಸುಂದರಾಂಗಿಯೇ ! ನೀನೆನ್ನ ಒಡತಿಯಾದರೆ - ಈ ಕಿರೀಟದಂತೆ ನಿನ್ನನ್ನು ತಲೆಯಮೇಲೆ ಕೂಡಿಸಿ ಕೊಂಡು ಲಾಲಿಸುವೆನು, ಮತ್ತು ನಿನ್ನ ಹೊರೆಯೇ ನನಗೆ ತೋರುವು ದಿಲ್ಲ ಎಂಬುದು ಆ ಭೂರಮಣನ ಬಯಕೆ, ಶಿರದಮೇಲೆ ಕರವನಿಟ್ಟು ಕುಳಿತಿರುವುದು ದುರ್ಲ ಕ್ಷಣವೆಂದು ಇಂದುಮತಿಯ ಅಭಿಪ್ರಾಯ. ಹೀಗೆ - ಕೆಲವುಮಂದಿ ಅರಸುಮಕ್ಕಳು - ತಂತಮ್ಮ ಮನೋಭಾ ವಗಳನ್ನು ಕರಚರಣಾದಿ ಚೇಷ್ಟೆಗಳಿಂದ ವ್ಯಕ್ತಗೊಳಿಸುತ್ತಿದ್ದರು, ರಾಜಕುಮಾರಿಯು - ಅವರಲ್ಲಿರುವ ದೋಷಗಳನ್ನರಿತು ಮುಂದರಿದಳು ಆ ಇಂದುಮತಿಯ ಮುಂದೆ ಮರ್ಯಾದೆಯಿಂದ ದಾರಿತೋರುತ ಬರುತ ಲಿರುವ ಸುನಂದೆಯೆಂಬ ದ್ವಾರಪಾಲಿಕೆಯೋರ್ವಳು - ಆ ದೊರೆಮಕ್ಕಳ ವಂಶಾವಳಿಯ ಚರಿತ್ರೆಯನ್ನೆಲ್ಲ ಚೆನ್ನಾಗಿ ಬಲ್ಲವಳು, ಉತ್ತಮ ಪುರುಷ ನಂತೆ ಮಾತನಾಡುವುದರಲ್ಲಿ ಬಲು ಜಾಣೆ, ಆ ಅರಗುವರಿಯನ್ನು ರಾಜ ಮಂಡಲದಲ್ಲಿ ಕುಳಿತಿರುವ ಮಗಧರಾಜನಬಳಿಗೆ ಕರೆತಂದು ಕೈತೋರಿ ಇಂತೆಂದಳು - ಎಲ್ ರಾಜನ್ಯಕುಮಾರಿಯೇ ! ಇದಕೊ, ಈತನು - ಶರಣಾಗತ ರಾದವರನ್ನು ಕೈಬಿಡದೆ' ಅಭಯದಾನವನ್ನು ಮಾಡಿ ಕಾಪಾಡತಕ್ಕವನು, ಬಹು ಗಂಭೀರವಾದ ಸ್ವಭಾವದವನು, ಮಗಧದೇಶಗಳ ಮಹಾರಾಜನ