ಪುಟ:ರಘುಕುಲ ಚರಿತಂ ಭಾಗ ೧.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , M. .Mom

  • # +A PAWh* "

ಪದವಿಯಲ್ಲಿ ನೆಲೆಗೊಂಡಿದಾನೆ, ಪರಿಪಾಲನ ಪರಿಸ್ಟಿಯಿಂದ ಪ್ರಜೆಗಳ ಮನೋರಂಜನವುಂಮಾಡಿ, ಬಲು ಜಾಣನೆನಿಸಿ, ಉತ್ತ ರ್ಪದ ಹೆಸರುವಾ ನಿಯನ್ನು ಪಡೆದಿದಾನೆ, ಪರರನ್ನು ತಪ್ಪಿಸುವಂತೆ ಮಾಡುವುದರಿಂದಲೇ ಈ ರಾಜನು - ಪರಂತಪನೆಂದು ಅನ್ವರ್ಥನಾಮವನ್ನು ಪಡೆದಿರುವನು. ಈ ಲೋಕದಲ್ಲಿ ಇನ್ನೂ ಬಹುಮಂದಿ ಇಳೆಯಾಣ್ಮರಿರುವರು, ಆದರೂ ಅವರೆಲ್ಲ ಹಾಗಿರಲಿ, ಅಶಿನಿ ಮೊದಲಾದ ನಕ್ಷತ್ರಗಳೂ, ಇತರ ತಾರೆ ಗಳೂ, ಗ್ರಹಗಳೂ ಕಂಗೊಳಿಸುತಲಿದ್ದ ರೂ, ಇರುಳು - ಚಂದಿರನೊಬ್ಬ ನಿಂದಲೇ ಪ್ರಶಸ್ತವಾದ ತೇಜಸನ್ನುಳುದೆಂದು ಹೆಸರುವಾಸಿಯನ್ನು ಪಡೆ ದಿರುವಹಾಗೆ, ಈ ರಾಜನೋರ್ವನಿಂದಲೇ ಈ ಭೂಮಿಯನ್ನೂ (ರಾಜ ನೃತಿ) ಪ್ರಶಸ್ತ ರಾಜನುಳ್ಳುದನ್ನಾಗಿ ಪ್ರಾಜ್ಞರೆಲ್ಲ ಹೇಳುತ್ತಾರೆ. ಈ ಪರಂತಪ ರಾಜನು ಸಾಧಾರಣನಲ್ಲ, ಎಡೆಬಿಡದೆ ಯಾವಾಗಲೂ ಯಾಗ ಗಳನ್ನು ಮಾಡುತ್ತಲೇ ಇರುವುದರಿಂದ ಸಾವಿರಗಣ್ಣನಾದ ಬಿಡುಗಣ್ಣರೊ ಡೆಯನನ್ನು ಅನವರತವೂ ತನ್ನಯಜ್ಞವಾಟದೊಳಿರುವಂತೆ ಮಾಡಿ ರುವನು, ಆ ಇಂದ್ರನ ಅಗಲಿಕೆಯಿಂದಲೇ ಸ್ವರ್ಗದಲ್ಲಿ ಇಂದ್ರಾಣಿಯು - ತನ್ನ ಬಿಳುಪಾದ ಕಪೋಲತಲಗಳಲ್ಲಿ ಜೋಲಾಡುತಲಿರುವ ಮುಂಗೂದಲನ್ನು ಏರಗಟ್ಟಿ ಕಲ್ಪತರು ಕುಸುಮಗಳಿಂದ ಸಿಂಗರಿಸಿಕೊಳ್ಳದಿರುವಳು. ಎಲ್‌ ಸುಮಂಗಲಿಯೆ ! ಈ ಪೊಡವಿಯಾ ನೊಡನೆ ನೀನು - ಪಾಣಿಗ್ರಹಣ ಮಂಗಳವನ್ನು ಒಪ್ಪುವುದಾದರೆ ಬಹು ಚೆನ್ನಾಗಿರುವುದು, ಪ್ರಯಾಣ ಕಾಲದಲ್ಲಿ ಈತನಸಂಗಡ ತೆರಳಿ, ರಾಜಧಾನಿಯಾದ ಪಾಟಲೀಪುರವನ್ನು ಪ್ರವೇಶಿಸುವಲ್ಲಿ - ಆ ಪುಷ್ಪಪುರದ ರಾಜವೀಧಿಯ ಇಕ್ಕೆಲದ ಉಪ್ಪರಿ ಗೆಗಳ ಕಿಟಕಿಗಳೊಳಗೆ ಸಾಲಾಗಿ ನಿಲ್ಲುವ ರಮಣೀಮಣಿಯರ ಕಣ್ಣುಗ ಆಗೆಲ್ಲ ನಿನ್ನ ನೋಟದಿಂದ ಹಬ್ಬವನ್ನು ಮಾಡಬಹುದು, ಎಂದೀಪ್ರಕಾರ ವಿವರಿಸುತಲಿರುವ ಸುನಂದೆಯ ನುಡಿಯನ್ನು ಕೇಳಿದಳು, ಇಂದುಮತಿ ಅವನನ್ನು ನೋಡಿದಳು, ಮನವು ಭಾವಶೂನ್ಯವಾಯಿತು, ಮುಡಿಯೊಳು ಮುಡಿದಿರುವ ಎಳೆಗರಿಕೆಯಿಂದೊಡಗೂಡಿದ ಹಿಪ್ಪೆಯ ಹೂವಿನಸರವು ತುಸ ಸಡಿಲವಾಗುತ್ತಿರಲು, ಆತನನ್ನು ಕುರಿತು ಏನೊಂದು ಮಾತನ್ನೂ ಆಡದೆ, ಕೃಶಾಂಗಿಯಾದ ಇಂದುಮತಿಯು - ನಮಸ್ತರಕ್ರಿಯೆಯಿಂದಲೇ ತಿರಸ್ಕರಿಸಿ ಮುಂಬರಿದಳು.. ಅವಳ ಮನೋಭಾವವನ್ನರಿವುದರಲ್ಲಿ