ಪುಟ:ರಘುಕುಲ ಚರಿತಂ ಭಾಗ ೧.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಶ್ರೀ ಕಾ ರ ದಾ , ಇರಲಿಲ್ಲ, ಆದರೂ ಆ ಕನೈಗೆ ಆ ವರನು ರುಚಿಸದಿರಲು ಕಾರಣವೇನು ? ಎಂದರೆ - ಲೋಕವು ಭಿನ್ನ ರುಚಿಯುಳ್ಳುದಲ್ಲವೆ ? ಆಮೇಲೆ - ಬಾಗಿಲ ಕಾವಲುಗಾತಿಯಾದ ಸುನಂದನೆಯು - ಬವ ರಗಳೊಳಗೆ ಇದಿರಿಸುವ ಹಗೆಗಳಿಗೆ ಅಸದಳನೆನಿಸಿ, ಹೊಸದಾಗಿ ಮೂಡುವ ಚಂದಿರನಂತೆ ಬಲು ಸುಂದರನೂ ಆಗಿರುವ ಬೇರೊಬ್ಬ ಭೂಪಾಲನನ್ನು ತೋರಿ ಹೇಳತೊಡಗಿದಳು - ಎಲ್ ಮುಂದಯಾನೆಯಾದ ಇಂದುಮತಿಯ | ಇತ್ತ ನೋಡು - ಈತನು ಅವಂತಿದೇಶಾಧೀಶರನು, ಅಜಾನುಬಾಹುವೆನಿಸಿರುವನು, ಬಲು ಅಗಲವಾದ ಎದೆಯುಳವನು, ದುಂಡಾಗಿಯೂ ಬಡತನದಿಂದೊಡಗೂ ಡಿಯೂ ಇರುವ ನಡುವಿನಿಂದೆಸೆವನು, ಹಿಂದೆ - ಇನನ ಬೇಗೆಯನ್ನು ತಾಳಲಾರದೆ ಬೇಡಿಕೊಂಡ ಮಗಳ ಮಾತನ್ನು ಕೇಳಿ ವಿಶ್ವಕರ್ಮನು - ಸಾಣೆಯಲ್ಲಿ ತೀಡಿದ ಬೆಂಗದಿರನಂತೆ ಬೆಳಗುತಲಿದಾನೆ, ಶಕ್ತಿತಯಸಂ ಪನ್ನನಾದ ಈ ಮಾರಾಯನು – ದಿಗ್ವಿಜಯಕ್ಕೆ ಹೊರಟಾಗಲೆಲ್ಲ, ಮುಂ ದರಿವ ನಾಜಿಗಳ ತುಳಿತದಿಂದೆದ್ದ ದೂಳಿಗಳು - ಇದಿರಿಸಬೇಕೆಂದಿರುವ ಇಳೆಯಾಣ್ಮರ ಚೂಡಾಮಣಿಗಳ ತೇಜಗಳನ್ನೆಲ್ಲ ಮುತ್ತಿ, ಹುಟ್ಟಿಲ್ಲದಂತೆ ಅಡಗಿಸುತ್ತವೆ, ಮತ್ತು - ತಣ್ಣದಿರನನ್ನು ತಲೆಯೊಳಾಂತಿರುವ ಮುಕ್ಕ ಇನು ಮಹಾಕಾಲವೆಂಬೆಡೆಯಲ್ಲಿ ನೆಲೆಗೊಂಡಿರುವನು. ಅಲ್ಲಿಗೆ ಬಲು ಹತ್ತಿರದಲ್ಲಿಯೇ ಈ ಅವಂತಿನಾಥನೂ ವಾಸಮಾಡುತಲಿದಾನೆ, ಆದುದರಿಂ ದಲೇ ಕೃಹಪಕ್ಷದಲ್ಲಿಯೂ ಕತ್ತಲ ಕಾಟವಿಲ್ಲದ ಇರುಳುಗಳನ್ನು ತನ್ನ ಹೆಂಡಿರುಗಳೊಡನೆ ಅನುಭವಿಸುತಲಿರುವನು. ಎಲ್' ತರು ಣಿಯೇ ! ಸಿಪಾನದಿಯ ಅಲೆಗಳ ನಡುವೆ ಹಾಯಾಗಿ ಹರಿದುಬರುವ ವಾಯುವನ್ನು ಸೇವಿಸುತ, ಇಕ್ಕೆಲದ ತೋಟಗಳ ಸಾಲುಗಳಲ್ಲಿ ಈತನೊ ಡನೆ ವಿಹರಿಸಲು ನಿನ್ನ ಚಿತ್ತವು ರುಚಿಗೊಂಬುದಾದರೆ – ತರುಣನಾದ ಈ ತಿರೆಯಾಣ್ಮನೊಡನೆ ಪಾಣಿಗ್ರಹಣ ಮಂಗಳವನ್ನು ಅನುಭವಿಸು ಎಂದ ಸುನಂದೆಯ ನುಡಿಯನಾಲಿಸಿ, ಬಂಧುಗಳಂಬ ತಾವರೆಗಳನ್ನು ಬೆಳಗಿ ಸುತ, ಹಗೆಯೆಂಬ ಹೆಸರನ್ನು ತನ್ನ ಪ್ರತಾಪದಿಂದ ಬತ್ತಿಸತಕ್ಕ ವನೂ ಆಗಿರುವ, ಆ ಅವಂತೀಶರನಲ್ಲಿ, ಬಲು ಸುಕುಮಾರಿಯಾದ