ಪುಟ:ರಘುಕುಲ ಚರಿತಂ ಭಾಗ ೧.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೩೫ wwwvvvvvymv r/ YYY, ಆ ಕುಮಾರಿಯು - ಭಾಸ್ಕರನಲ್ಲಿ ಕುಮುದಿನಿಯು ಹೇಗೋಹಾಗೆ ತನ್ನ ಮನೋಭಾವವನ್ನು ನೆಲೆಗೊಳಿಸಲಿಲ್ಲ. ಬಳಿಕ - ಮುಂದರಿವ ಮಂದಯಾನೆಯಾದ ಸುನಂದನೆಯು - ಇದಿರಿಗೆ ಭಾವಶೂನ್ಗಳಾಗಿ ನಿಂತಿರುವ ಕುಂದರದನೆಯಾದ ಇಂದುಮತಿ ಯನ್ನು ನೋಡಿದಳು, ಅರಳಿದ ತಾವರೆಯ ಎಸಳಿನಂತೆ ಹೊಳೆವ ಮೈ ಬೆಳಕು, ಸಕಲಸುಗುಣಸಂಪನ್ನೆ, ವಿಧಿಯ ಮಧುರವಾದ ಸೃಷ್ಟಿ, ಇಂತೆ ಸೆವ ಆ ಸುಮುಖಿಯ ಭಾವವನ್ನು ಅರಿತಳು, ಹಾಗೆಯೇ ತುಸಮುಂದೆ ಅನೂಪದೇಶದ ಪ್ರತೀಪಭೂಪನ ಬಳಿಗೈತಂದು ಇಂತೆಂದಳು - ಕುಂದದಿರುವ ಗುಣಗಳಿಂದೆಸೆವ ಓ ಇಂದುಮುಖಿ ! ಕಾಳಗಗಳ ಕೇಳಿಗಳೊಳಗೆ ಸಾಸಿರ ತೋಳುಗಳ ಬಲವನ್ನು ತೋರಿ, ಸರ್ವಯಾಗರ ಳನ್ನೂ ಆಚರಿಸಿ, ಹದಿನೆಂಟು ದ್ವೀಪಗಳೊಳಗೂ ಯಪಸ್ತಂಭಗಳನ್ನು ನಟ್ಟು, ಸಾರ್ವಭೌಮನೆನಿಸಿಕೊಂಡು, ಸರ್ವಪ್ರಜಾ ಮನೋರಂಜನಂ ಗೈದುದರಿಂದ ಹೆರರು ಪಡೆಯಲು ಅಸದಳವೆನೆಸಿದ ರಾಜಾ ಎಂಬ ಹೆಸರು ವಾಸಿಗೆ ಭಾಗಿಯಾಗಿ, ದತ್ತಾತ್ರೇಯನಿಂದ ಯೋಗವಿದ್ದೆಯನ್ನು ಕಲಿತು, ಬ್ರಹ್ಮವಿದನೂ ಆಗಿ, ಕೃತವೀರ ಮಹಾರಾಜನ ಸತ್ಸುತನೆನಿಸಿದ್ದ ಕಾರವೀರಾರ್ಜೀನನನ್ನು ಕೇಳಿಬಲ್ಲೆಯನ್ನೈ ? ಆ ಹೇಹಯರಾಜನು - ಆವ ನಾಡಿನೊಳಗೆ ಆವಮಾನವನೇ ಆಗಲಿ, ಕೆಟ್ಟ ಕೆಲಸವನ್ನು ಮಾಡ ಬೇಕೆಂದು ಬಗೆದುದೇಆದರೆ, ಆ ಕೂಡಲೇ ಬಿಲ್ಲನಾಂತು ಅವನ ಮನ ದೊಳಗೆ ಕಾಣಿಸಿಕೊಂಡು, ದುರಾಲೋಚನೆಯ ಸುಳಿವನ್ನೇ ಅಡಗಿಸು ತಲಿದ್ದ ಧೀರನಲ್ಲವೆ ? ಮತ್ತು - ಕೈಗಳೊಳಗೆ ಬಿಲ್ಲುಗಳನ್ನು ಹಿಡಿದು, ಹೆದೆಯನ್ನೇರಿಸುವವರೆಗೆ ತೋಳುಗಳು ಅಲುಗದೆ ನಿಲ್ಲಲು, ಸಿಟ್ಟೇರಿ, ಕೈಹರಿಯದೆ, ಹತ್ತು ಮೋರೆಗಳಿಂದಲೂ ನಿಟ್ಟುಸಿರನ್ನು ಬಿಡುತ್ತ, ಕಟ್ಟಿ ಗೊಳಗಾಗಿ, ಇಂದ್ರಾದಿಗಳನ್ನು ಜಯಿಸಿದ್ದ ಲಂಕಾ ಸಾರ್ವಭೌಮನಾದ ರಾವಣನು - ಈತನ ಸೆರೆಮನೆಯೊಳಗೇ ಅಲ್ಲವೆ ತಾನಾಗಿ ದಯೆಗೈಯ್ಯು ವವರೆಗೂ ನಿಲುಕಿ ನರಳುತಲಿದ್ದನು ? ಇದಕೆ, ಇದಿರಿಗೆ ಕಾಣಬರುವ ಈ ಪ್ರತೀಪನೆಂಬ ಭೂಮಿಪಾಲನು - ಆ ಕಾರವೀರ್ ಮಹಾರಾಜನ ಸಂತತಿಯಲ್ಲಿ ಸಮುದ್ಭವಿಸಿದವನು, ಶಾಸ್ತ್ರವಿದರೆನಿಸಿದ ಹಿರಿಯರನ್ನು ಸೇವಿ ಸತಕ್ಕವನು, ಇದಲ್ಲದೆ • ಲಕ್ಷ್ಮಿಯು – ಒಂದೆಡೆಯಲ್ಲಿಯೂ ನೆಲೆಯಾಗಿ