ಪುಟ:ರಘುಕುಲ ಚರಿತಂ ಭಾಗ ೧.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಶ್ರೀ ಶಾ ರ ದ . [ಅ wwwಂದೆ -m . ನಿಲ್ಲತಕ್ಕವಳಲ್ಲ, ಸ್ವಭಾವದಿಂದಲೇ ಬಹು ಚಪಲಳು , ಎಂಬ ಆಕೆಯ ಕೆಟ್ಟ ಹೆಸರುವಾಸಿಯನ್ನು ತೊಡೆದುಬಿಟ್ಟಿರುವನು, ಮತ್ತು - ಧುರಧೀ ರನಾದ ಈ ದೊರೆಯು - ಆಯೋಧನದಲ್ಲಿ ಅಗ್ನಿಯನ್ನೇ ಸಹಾಯವ ಸ್ನಾಗಿ ಪಡೆದು, ಕ್ಷೇತಿಯರ ಕುಲಕ್ಕೆ ಕಾಳರಾತ್ರಿಯೆನಿಸಿದ ಪರಶುರಾ ಮನ ಗಂಡುಗೊಡಲಿಯ ಮೊನೆಯಾದ ಮೋರೆಯನ್ನು ನೈದಿಲೆ ಹೂವಿ ನೇಣಿಗೆ ಎಣೆಯಾಗಿ ಎಣಿಸಿದಾನೆ, ಮಾಹಿಷ್ಮತೀ ನಗರಿಯೆಂಬ ನಾರಿಯ ಪಳಿಯ ಬುಡವೆಂಬ ಟೊಂಕಕ್ಕೆ ಒಡ್ಡಾಣದಂತಿರುವ, ಸುತ್ತಲೂ ಹರಿಯತಕ್ಕ ಜಲಪ್ರವಾಹದಿಂದ ರಮಣೀಯವೆನೆಸಿದ ರೇವಾನದಿಯನ್ನು ಉಪ್ಪರಿಗೆಯ ಮೇಲಣ ಕಿಟಕಿಯಿಂದ ನೋಡುತ, ಆನಂದಿಸಬೇಕೆಂಬ ಬಯಕೆಯು ನಿನಗೆ ಇದ್ದು ದೇಆದರೆ, ಆಜಾನುಬಾಹುವಾದ ಈ ಪೊಡವಿ ಯಾಣ್ಮನ ತೊಡೆಯಮೇಲೆ ಲಕ್ಷ್ಮಿಯಂತೆ ಕುಳ್ಳರು ಎಂದಳು. ಆ ಮಾಹಿಷ್ಮತೀ ನಗರದರಸು ಬಹು ಪ್ರೀತಿಕರವೆನಿಸಿದ ದರ್ಶನವುಳ್ಳವನಾ ದರೂ, ಇಂದುಮತಿಯ ಮನಸ್ಸಿಗೆ ರುಚಿಸಲಿಲ್ಲ. ಶರದೃತುವಿನಲ್ಲಿ ಮೋಡ ಗಳ ಆವರಣವಿಲ್ಲದೆ ಚಂದ್ರನು - ಪರಿಪೂರ್ಣ ಕಳೆಗಳುಳ್ಳವನಾಗಿದ್ದ ರೂ ಕವಲಲತೆಗೆ ರುಚಿಸುವುದಿಲ್ಲವಲ್ಲವೆ ? ಆ ಹಿಂದೆ - ಸದಾಚಾರದಿಂದ ಪರಿಶುದ್ಧವೆನಿಸಿರುವ ತಾಯಿತಂ ದೆಗಳ ಕುಲಗಳೆರಡಕ್ಕೂ ಪ್ರಕಾಶಕನೆನಿಸಿ,ಸ್ವರ್ಗಾದಿ ಲೋಕಗಳಲ್ಲಿಯೂ ಹೊಗಳಿಸಿಕೊಳ್ಳತಕ್ಕವನಾಗಿರುವ ಶೂರಸೇನ ದೇಶಾಧೀಶ್ವರನಾದ ಸುವೇ ೧ನನ್ನು ತೋರಿಸಿ, ರಾಣಿವಾಸದ ಸೇವಕಳಾದ ಸುನಂದೆಯು - ಇಂದು ಮತಿಯ ಕುರಿತು ಮರಳಿ ಹೇಳತೊಡಗಿದಳು - ಅಮಂದಮತಿಯಾದ ಎಲೇ ಇಂದುಮತಿಯೆ ! ಇತ್ತ ನೋಡು, ಈ ಪಾರ್ಥಿವನು - ನೀಪವಂಶದಲ್ಲಿ ಜನಿಸಿದವನು, ವಿಧಿಯನ್ನು ಅನುಸ ರಿಸಿ ಯಾಗಗಳನ್ನು ಆಚರಿಸುತ್ತಿರುವವನು, ಶಾಂತವಾದ ತಪೋವನ ವನ್ನು ಹೊಕ್ಕಿರುವ ಗೋ ವ್ಯಾಘ, ಗಜನಿಂಹ ಮೊದಲಾದ ಜಂತು ಗಳು-ತಮ್ಮ ಜಾತಿಸಿದ್ದ ವಾದ ವೈರವನ್ನು ತೊರೆದು, ಒಂದರೊಡನೊಂದು ಗೆಳತನದಿಂದಿರುವಹಾಗೆ, ಈತನಲ್ಲಿ - ಜೈನ, ಮನ, ಕ್ಷಮಾ, ಶಕ್ತಿ ಮುಂತಾದ ಗುಣಗಳು - ಸಂಭಾವಿಕವಾದ ವಿರೋಧವನ್ನು ಬಿಟ್ಟು ಒಡನಾಡಿಗಳಾಗಿರುವುವು, ತಣ್ಣ ದಿರನ ಬೆಳ್ತಂಗಳನಂತೆ ಈತನ ಟ