ಪುಟ:ರಘುಕುಲ ಚರಿತಂ ಭಾಗ ೧.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತು 22 » ಕಾಂತಿಯು - ನಯನಾನಂದಕರವೆನಿಸಿ, ತನ್ನ ಮನೆಯೊಳಗೆ ಹರಡಿ ಇದೆ. ಸಹಿಸಲಸದಳವೆನಿಸಿದ ಈತನ ಪ್ರತಾಪವಾದರೆ - ಉಪ್ಪರಿಗೆಗಳಮೇಲೆ ಹೇರಳವಾಗಿ ಹುಲ್ಲು ಬೆಳೆದಿರುವ ಹಗೆಗಳ ಪುರಗಳೊಳಗೆ ಹರಡಿರುವುದು. ಈತನು - ತನ್ನ ರಾಣಿವಾಸದ ರಮಣೀಮಣಿಯರೊಡನೆ ಕಳಿಂದ ಕನ್ನೇ ಯಾದ ಯಮುನೆಯಲ್ಲಿ ಜಲಕ್ರೀಡೆಯನ್ನೆಸಗಿದಾಗ - ಆ ಸುಂದರಿಯರ ಮೆಯ ಚಂದನವೆಲ್ಲ ಕದಡಿಹೋಗುವುದು, ಆಗಲಾ ಸೂಗತನಯಳು ಈ ಸುಷೇಣ ಭೂರಮಣನ ನಗರಿಯಾದ ಮಧುರೆಯ ಬಳಿಯೊಳಿದ್ದು ಗಂಗಾಸಂಗಮವಿಲ್ಲದಿದ್ದರೂ ಸಂಗಮವನ್ನು ಪಡೆದಿರುವಂತೆ ಬಣ್ಣದಿಂದ ಕಾಣಬರುವಳು, ಮತ್ತು - ಪೂರ್ವದಲ್ಲಿ ಆ ಯಮುನೆಯೊಳಗೆ ಕಾ೪ ಯವೆಂಬ ಒಂದು ಮಹಾಸರ್ಪವು ಮನೆಮಾಡಿಕೊಂಡಿದ್ದಿತು. ಗರುಡನು ಬಂದು ಅದನ್ನು ಬೆದರಿಸಿದನು, ಸುಷೇಣನು - ಆ ಭೋಗಿವರನಿಗೆ ಅಭಯದಾನವನ್ನು ಮಾಡಿದುದರಿಂದ, ಅದು - ಒಂದು ದಿವ್ಯರತ್ನವನ್ನು ಬಹುಮಾನವಾಗಿ ಕೊಟ್ಟಿತು, ಆ ಮಣಿಯನ್ನು ಈತನು - ವಕ್ಷಸ್ಥಲ ದಲ್ಲಿ ಸಿಂಗರಿಸಿಕೊಂಡು, ತನ್ನ ಸೊಬಗಿನಿಂದ ಕೌಸ್ತುಭ ರತ್ನದಿಂದ ಅಲಂಕೃತನಾದ ಶ್ರೀ ಕೃಷ್ಣನನ್ನು ಲಜ್ಜೆಗೊಳಿಸುವಂತೆ ಕಾಣಬರು ತಾನೆ. ಎಲೌ ರಮಣಿಯೇ ! ಈ ಧರಣೀರಮಣನಾದ ತರುಣನನ್ನು ರಮಣನನ್ನಾಗಿ ಭಾವಿಸು, ಕುಬೇರೋದ್ಯಾನಕ್ಕಿಮ್ಮಡಿಯಾದ ಸೊಬ ಗಿನಿಂದ ಮೆರೆವ ಈತನ ಪುರೋದ್ವಾನವಾದ ಬೃಂದಾವನದಲ್ಲಿ - ಕೋಮ ಲವಾದ ತಳಿರುಗಳ ಮೇಲುಹಾಸಿಗೆಯನ್ನು ಪಡೆದಿರುವ ಹೂವಿನ ಸುಪ್ಪ ತಿಗೆಯಲ್ಲಿ ಸವಳಸಿ ಆನಂದಿಸಬಹುದು ಇದೂಅಲ್ಲದೆ, ಅಲ್ಲಿ - ಗೋವ ರ್ಧನ ಪರ್ವತವುಂಟು, ಮಳೆಯ ಹನಿಗಳಿಂದ ನನದು, ಶಿಲಾಜತುವಿನ ಅಥವಾ ಕಲ್ಲುಹೂಗಳ ವಾಸನೆಯನ್ನು ಪಡೆದು, ಬೆಳಗುತಲಿರುವ ಗವಿಗಳ ಬಳಿಯಲ್ಲಿನ ಅಂದವಾದ ಬಂಡೆಗಳಮೇಲೆ ಹಾಯಾಗಿ ಕುಳಿತು, ಮಳಗಾ ಲದಲ್ಲಿ ಸಂತೋಷದಿಂದ ಕುಣಿಯುತಲಿರುವ ನವಿಲುಗಳ ನೃತ್ವವನ್ನು ನೋಡುತ ಆನಂದಿಸಲೂಬಹುದು. ಎಂದ ಸುನಂದನೆಯ ವಚನವನ್ನಾ ಲಿಸಿ ಇಂದುಮತಿಯು – ಬೇರೊಬ್ಬ ಭೂವರನಿಗೆ ಭಾರೈಯಾಗುವುದು ಭವಿತವೃತೆಯಾಗಿದ್ದು ದರಿಂದ, ಸಾಗರದಲ್ಲಿಳಿಯಲು ಹರಿದುಹೋಗುತಲಿ ರುವ ಹೊಳೆಯು - ದಾರಿಯಲ್ಲಿ ದೊರೆತ ಗಿರಿಯನ್ನು ಮೀರಿಹೋಗುವ ಹಾಗೆ, ಆ ನರವರನನ್ನು ಮಾರಿ ಮುಂದಕ್ಕೆ ಸರಿದಳು.