ಪುಟ:ರಘುಕುಲ ಚರಿತಂ ಭಾಗ ೧.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩y ಶ್ರೀ ಕಾ ರ ದಾ . MMww ತದನಂತರದಲ್ಲಿ - ಅಂತಃಪುರದಲ್ಲಿನ ಕಿಂಕರಿಯಾದ ಸುನಂದೆಯು - ಇಂಗಿತವನ್ನರಿವುದರಲ್ಲಿ ಬಹು ಚತುರಳು, ಮುಂದೆ ಹೊರಟಳು ಹೇಮಾಂಗದಾಲಂಕೃತನಾಗಿರುವ ಹೇಮಾಂಗದನೆಂಬ ಕಳಿಂಗ ದೇಶಾಧಿ ಪತಿಯಬಳಿಗೆ ಬಂದು ನಿಂತಳು, ಆತನು - ಹಗೆಗಳೂಡ್ಡನ್ನೆಲ್ಲ ಗುಡ್ಡೆಗೆ ಡಹಿದವನು ಎಂಬುದನ್ನು ಬಲ್ಲವಳು. ಪೂರ್ಣೆ೦ದುವದನೆಯಾದ ಇಂದು ಮತಿಯಕಡೆಗೆತಿರುಗಿ, ಎಲ್‌ ಚಾಲೆ ! ಈತನೇ ಕಲಿಂಗನಾಥನು, ಇವ ನನ್ನು ಹೇಮಾಂಗದನೆಂದು ಕರೆಯುತ್ತಾರೆ, ಮಹೇಂದ್ರಾಧಿಗೆಣೆಯೆ ನಿಸಿದ ಬಾಹುಸಾರವುಳ ವನು, ಮಹೇಂದ್ರ ಪರ್ವತಕ್ಕೂ, ಮಹೋಧ ಧಿಗೂ ಸ್ವಾಮಿಯೆನಿಸಿರುವನು. ಅ ವುಗಳೇ ಈತನಿಗೆ ಗಿರಿಜಲದುರ್ಗ ಗಳು, ಈತನು - ದಿಗಿಜಯಕ್ಕೆ ಹೊರಡುವ ವೇಳೆಯಲ್ಲಿ - ದಳದ ದಂತಾವಳಗಳು ತೆರಳುತಲಿರುವುದನ್ನು ನೋಡಿದರೆ, ಮಹೇಂದ್ರಾಚಲವೇ ಅನೇಕಾಕಾರಗಳನಾಂತು ಮುಂದೆ ತೆರಳುವಂತಿರುವುದು, ಎಲ್‌ ಲಲನೆ ! ನಾನು ಏನ ಹೇಳಲಿ ! ಈತನು ಬಿಲ್ಲಾಳುಗಳೊಳಗೆ ಮೊದಲ ನೆಯವನೆನಿಸಿರುವನು, ಎರಡು ಕೈಗಳಿಂದಲೂ ಹಗೆಗಳಮೇಲೆ ಅಂಬು ಗಳನ್ನಿಡುವಾಗ ಹೆದೆಯನ್ನೇರಿಸುವ ಸಡಗರದಲ್ಲಿ ನೀಳವಾದ ತೋಳುಗ ಳೊಳಗೆ ಕರೆಗಟ್ಟಿರುವ ಕರಿಯ ಗೆರೆಗಳು ಕಾಣಬರುತಲಿವೆ. ಹಗೆಯರ ಸರ ಸಿರಿಯನ್ನು ಸೆರೆಹಿಡಿದು ಸೆಳೆದು ತರುವಾಗ - ಅವಳ ಕಣ್ಣುಗಳಿಂದ ಹರಿದ ಕಾಟಕೆಯಿಂದೊಡಗೂಡಿರುವ ಕಣ್ಣೀರಿನ ಕಾಲುವೆಗಳೊ ಎಂ ಬಂತೆ ತೋರಿಬರುವುವು. ಈ ರಣಧೀನು - ತನ್ನ ಪ್ರಾಸಾದದೊಳಗೆ ಸುಪ್ಪತ್ತಿಗೆಯಮೇಲೆ ಹಾಯಾಗಿ ಪವಳಿಸಿರುವಾಗ - ವಾತಾಯನದೊ ಳಗೆ ಹತ್ತಿರದಲ್ಲಿಯೇ ಕಡಲಿನಲೆಗಳು ಕಾಣಬರುತ್ತವೆ. ಆ ಮಹೋ ದಧಿಯೇ - ಒಂದೊಂದು ಜಾವದ ತುದಿಯನ್ನು ಸೂಚಿಸುವ ವಾದಧ ನಿಯಿಲ್ಲದೆ ತನ್ನ ಗಂಭೀರವಾದ ದನಿಯಿಂದಲೇ ಭೂವಲ್ಲಭನಿಗೆ ಬೋಧೆ ಯಗೈಯುತಲಿರುವುದು, ಈ ಮಹಾರಾಯನನ್ನು ಮದುವೆಮಾಡಿಕೊ ಳ್ಳಲು ಮನವೊಪ್ಪಿದರೆ - ಮುತ್ಸಂಜೆಯ ಹೊತ್ತಿನಲ್ಲಿ ತಾಳೆಯ ಮರಗಳ ಅಲ್ಲಾಟದಿಂದ ಮರ್ಮರವೆಂಬ ದನಿಯನ್ನೊಳಗೊಂಡಿರುವ ಮಹೋಧ ಧಿಯ ಮಗ್ಗಲ ಹಾದಿಯೊಳಗೆ ಮನೋಹರವಾದ ಮಂದಗಮನದಿಂದ ಹಾಯಾಗಿವಿಹರಿಸಬಹುದು, ಮತ್ತು-ಆ ಹೊತ್ತಿನಲ್ಲಿ-ದೀಪಾಂತರಗಳಿಂದ