ಪುಟ:ರಘುಕುಲ ಚರಿತಂ ಭಾಗ ೧.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ೬ ತರಿಸಿರುವ ಲವಂಗ ಕುಸುಮಗಳಮೇಲೆ ಹರಿದುಬರುವ ನಂದನಾ ರುತದಿಂದ ಮೈಬೆವರಿನ ಹನಿಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿ ವಿರಮಿಸಿದಳು, ಆದರೆ – ಆಕಾರ ವಿಶೇಷದಿಂದ ಅಧೀ ನತೆಯನ್ನು ಪಡೆಯತಕ್ಕವಳಾಗಿರುವ ಆ ಭೋಜಾನುಜೆಯು - ಈ ಪ್ರಕಾರ ಸುನಂದೆಯಿಂದ ಆಶೆಗೊಳಿಸಲ್ಪಟ್ಟಳಾದರೂ, ಯಾವನಾದ ರೊಬ್ಬ ಪುರುಷನು - ತನ್ನ ನೌತುಷವೆಂಬ ನೀತಿಯಿಂದ ಲಕ್ಷ್ಮಿಯನ್ನು ತನಗೊಲಿಯುವಂತೆಸಗಿದರೂ, ದೈವಸಹಾಯವಿಲ್ಲದಿದ್ದರೆ ಆ ಲಕ್ಷ್ಮಿಯು ಒಲಿಯದೆ ತೊಲಗುವಹಾಗೆ, ಆಕೆಯ ಹೇಮಾಂಗದನೆಂಬ ನರದೇವನಿಗೆ ವಶಳಾಗದೆ ಆತನಿಂದ ಹಿಂತಿರುಗಿ ಮುಂದಡಿಯನಿಟ್ಟಳು. ಚತುರಳಾಗಿರುವ ದೌವಾರಿಕೆಯಾದ ಸುನಂದನೆಯು-ಆ ಕೂಡಲೇ ಅಕೆಯ ಚಿತ್ತವೃತ್ತಿಯನ್ನರಿತು, ಪಾಂಡದೇಶದೊಳಗೆ ಕನ್ಯಾ ಕುಬ್ಬದ ಬಳಿಯಲ್ಲಿರುವ ನಾಗಪುರಕ್ಕೆ ದೊರೆಯಾಗಿ, ಆಕಾರದಲ್ಲಿ ದೇವತಾ ಪುರುಷನಂತೆ ಮೆರೆಯುತಲಿರುವ ವೀರಪುರುಷನ ಹತ್ತಿರದಲ್ಲಿ ನಿಂತು - ಭೋಜಾನುಜೆಯನ್ನು ನೋಡಿ, ಎಲ್ ಚಕೋರನಯನೆ ! ನಿನ್ನಯ ನೋಟವನ್ನು ಇತ್ತ ಕಳುಹು. ಎಂದುಸಿರಿ, ಬಳಿಕ ಹೇಳತೊಡಗಿದಳು - ಎಳೆಬಿಸಿಲಿನ ಸುಳಿವಿನಿಂದೊಡಗೂಡಿ, ಹರಡಿ ಹರಿಯುತಲಿರುವ ಕಿರು ಹೊಳೆಯಿಂದ ಮೆರೆಯುವ ಗಿರಿಯಂತೆ ಕುಳಿತಿರುವ ಈತನನ್ನು ಅವಲೋಕಿಸು, ಹೆಗಲಮೇಲೆ ತೋರವುತ್ತಿನ ಹಾರಗಳನ್ನು ಅಳಿಯ ಹಾಕಿಕೊಂಡು, ಗಮಗಮಿಸುತಲಿರತಕ್ಕ ಹರಿಚಂದನದಿಂದ ಬೆಳಗುತಲಿ ರುವ ಈತನೇ ಪಾಂಡ್ಗ ಮಹಾರಾಜನು. ಈತನನ್ನು ಸಾಧಾರಣನೆಂದು ನೆನೆಯಬೇಡ ; ಈತನು - ದೀಕ್ಷೆಯನ್ನು ಕೈಗೊಂಡು, ಅಶ್ವಮೇಧ ಯಾಗವನ್ನಾಚರಿಸಿ, ಮಂಗಳಸ್ನಾನವನ್ನು ನೆರವೇರಿಸಿ, ಆರ್ದಶಿರನಾಗಿ ರುವಲ್ಲಿ - ಹಿಂದೆ ರವಿಯ ಪಯಣಮಂ ತಡೆಯಲು ಬೆಳೆಯತೊಡಗಿದ ವಿಂಧ್ಯಾದ್ರಿಯ ಉಬ್ಬಟ್ಟೆಯನ್ನಡಗಿಸಿ, ತುಸುವೂ ಉಳಿಯದಂತೆ ಕಡಲ ನೆಲ್ಲ ಕುಡಿದು, ಮರಳಿಉಗುಳಿದ ಮಹಾಮುನಿಯೆನಿಸಿರುವ ಆಗಸ್ಯನೇ ಐತಂದು – “ ಏನೈ ಧುರಧೀರನೆ ! ಸುಖಾವಭ್ಯಥವ ನೆಸಗಿದೆಯಾ ? ೨ ಎಂದು ಪ್ರೀತಿಪೂರ್ವಕವಾಗಿ ಈತನನ್ನು ಕುರಿತು ಕುಶಲಪ್ರಶ್ನೆಯಂಗ್ಯ ವನು, ಪೂರ್ವದಲ್ಲಿ-ಲಂಕಾರಮಣನಾದ ರಾವಣನು-ಹೆರರು ಪಡೆಯಲು