ಪುಟ:ರಘುಕುಲ ಚರಿತಂ ಭಾಗ ೧.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] | ರಘುಕುಲಚರಿತಂ MM••••••• /wwwmm. ಮನದೊಳಗೆ ಕಳವಳಸತೊಡಗಿದನು, ಆ ವೇಳೆಗೆ ಸರಿಯಾಗಿ ಅಂಗದಾ ಲಂಕೃತವಾದ ಆತನ ಬಲದೊಳು- ಅದಿರುತ, ಸಂಶಯಪಡಬೇಡವೆಂದು ಆತನ ಚಿತ್ತಚಾಂಚಲ್ಯವನ್ನು ಪರಿಹರಿಸುತಲಿದ್ದಿತು. ಆ ಸುಕುಮಾರಿಯಾದ ಕುಮಾರಿಯು-ಸರ್ವಾವಯವಸುಂದರನಾದ ರಘುಕುಮಾರನ ಬಳಿಗೈತಂದಕೂಡಲೇ - ಬೇರೊಬ್ಬ ತರುಣನ ತಡಿಗೈ ದುವ ಆಸೆಯನ್ನು ತೊರೆದಳು. ದುಂಬಿಯಸಾಲು - ಚೆನ್ನಾಗಿ ಅರಳಿದ ಹೂಗಳಿಂದ ಸಿಂಗರವಾಗಿರುವ ಸಿಹಿ ಮಾವಿನ ಗಿಡವನ್ನು ಕಂಡಕೂಡಲೆ, ಬೇರೊಂದು ಮರಕ್ಕೆ ಸಾರಲೆಳಸುವುದುಂಟೆ ? ಆಹಾ ! ಸುನಂದೆಯು - ಭಾವಬೋಧೆಯಲ್ಲಿ ಬಲು ಜಾಣೆ, ರಾಜಕುವರಿಯ ಚಿತ್ತವೃತ್ತಿಯು ಅಜಕುಮಾರನಲ್ಲಿ ನೆಲೆಗೊಂಡಿತು ಎಂಬುದನ್ನು ತಟ್ಟನೆ ತಿಳಿದುಕೊಂ ಡಳು. ಇಂದುಕಳೆಯಂತೆಸೆವ ಇಂದುಮತಿಯ ಮುಖಕಾಂತಿಯನ್ನು ಕಂಡಳು, ಹಿಂದಿನ ಕ್ರಮವನ್ನನುಸರಿಸಿ, ವಿಷಯವನ್ನು ವಿಸ್ತಾರವಾಗಿ ವಿವರಿಸತೊಡಗಿದಳು ಎಲ್‌ ಕುಲಕನೈಯೇ ಕೇಳು ಮನುಪುತ್ರನಾದ ಇಕ್ಷಾಕು ಮಹಾರಾಜನ ವಂಶದೋಳುದಿಸಿದ ಕಕುತ್ಸ್ಥನೆಂಬ ಮಹೀಪಾಲನು ಸಕಲಗುಣಸಂಪನ್ನನೆನಿಸಿ, ವಸುಮತೀಶರೊಳಗೆಲ್ಲ ಉತ್ತಮನೆಂದು ಹೆಸರುವಾಸಿಯನ್ನು ಪಡೆದಿದ್ದನು. ಮಹಾಶಯರಾದ ಉತ್ತರ ಕೋಸಲೇ ಶರರೆಲ್ಲರೂ ಆ ಮಹಾಪುರುಷನಿಂದಲೇ ಕಾಕುತ್ಸ್ಥರೆಂಬ ಕ್ಲಾವಾದ ಪ್ರಖ್ಯಾತಿಯನ್ನು ಪಡೆದಿದ್ದಾರೆ, ಆ ಕಕುತ್ಸ್ಥ ಮಹೀಪಾಲನು - ಒಂದುವೇಳೆ - ದೊಡ್ಡ ಗೂಳಿಯ ರೂಪವನ್ನು ತಾಳ ಮಹೇಂದ್ರನನ್ನು ಏರಿ, ವಿನಾಕಪಾಣಿಯು ಬೆಡಗನ್ನಾಂತು, ಕಾಳಗದಲ್ಲಿ ಕಣೆಗಳ ಮಹಿಮೆ ಯಿಂದ ರಕ್ತನಿಯರ ಕಪೋಲಗಳನ್ನು ಕುಂಕುಮಾದಿ ಮಂಗಳದ್ರವ್ಯದ ಸಂಬಂಧವಿಲ್ಲದಂತೆ ಮಾಡಿದನು, ಮತ್ತು - ಸುರನಾಯಕನು ನಿಂಹ ಸನದಲ್ಲಿ ಕುಳಿತಿರುವಾಗ - ಐರಾವತವನ್ನು ಏರಿ ಇಳಿಯುವ ಸಮಯ ದೊಳಗೆ ಅದರ ಕೊರಳನ್ನು ತಟ್ಟುವ ಸಡಗರದಿಂದ ಸಡಿಲವಾಗಿದ್ದ ತೋಳನ ಭುಜಕೀರಿಗೆ ತನ್ನ ಅಂಗದವು ಒತ್ತಾಗಿ ತಾಗುವಹಾಗೆ, ಆತನ ಅರ್ಧಾಸನದಲ್ಲಿಯೂ ಕೂಡುತಲಿದ್ದನು. ಆ ಕಕುತ್ಸ್ಥ ಕುಲಪ್ರದೀ ಪನೆನಿಸಿದವನೇ ಅಲ್ಲವೆ ಮಹಾ ಯಶಸ್ವಿಯಾದ ದಿಲೀಪ ನೃಪನು,