ಪುಟ:ರಘುಕುಲ ಚರಿತಂ ಭಾಗ ೧.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ v ವರಿಸಿರುವ ತಂಗಿಯಾದ ಇಂದುಮತಿಯನ್ನು ಕರೆದುಕೊಂಡು, ವಿದರ್ಭ ನಾಥನಾದ ಭೋಜನು - ಪುರಪ್ರವೇಶಕ್ಕೆ ಅಣಿಯಾದನು, ವಿವಾಹಮಂಗಳ ಶಾಲೆಯೊಳಗೆ ನೆರೆದಿದ್ದ ಅರಸುಮಕ್ಕಳೂ - ಭೋಜ ಕುಮಾರಿಯು ತಮ್ಮ ಕೈಸೇರದೆ ಹೋದುದರಿಂದ, ಅಯ್ಯೋ ! ಕೋರಿ ಕೆಯು ನೆರವೇರದೆ ಹೋಯಿತಲ್ಲಾ ಎಂದು, ಹೇರಳವಾದ ಪೇಚಾಟದಿಂದ ಮುಂಜಾನೆಯ ಮುಗಿಲಿನಲ್ಲಿ 'ಚಂದಿರನೇ ಮೊದಲಾದ ಗ್ರಹಗಳಂತೆ ಕಳೆಗುಂದಿದ ಮೊರೆಯುಳ್ಳವರಾದರು, ಕನ್ಯಾರತ್ನದ ಮನಕೊಪ್ಪದಿದ್ದ ತಂತಮ್ಮ ಆಕಾರಗಳನ್ನೂ, ಅಲಂಕಾರಗಳನ್ನೂ ಹೊಟ್ಟೆಕಿಚ್ಚಿನಿಂದ ಬೈದುಕೊಳ್ಳುತ್ತಾ ಬಿಡಾರಗಳಿಗೆ ಹೊರಟರು. ಇಂದುಮತಿಯು ಅಜ ನನ್ನು ವರಿಸಿದುದು ಸೈರಿಸದಿದ್ದರೆ ಅರಸುಮಕ್ಕಳ ಕೂಟವು - ರಘು ಕುವರನೊಡನೆ ಹೋರಾಡಲಿಕ್ಕೆ ಹೊರಡದೆ ಹಿಮ್ಮೆಟ್ಟಲು ಕಾರಣ ವೇನು ? ಎನ್ನಬಹುದು ; ಆದರೆ - ಶಚೀದೇವಿಯ ಸನ್ನಿಧಾನದ ಮಹಿ ಮೆಯಿಂದ ಸ್ವಯಂವರ ಮಂಡಪದಲ್ಲಿನ ಉತ್ಸವಕ್ಕೆ ಅಡ್ಡಿಯನ್ನು ಮಾಡು ವವರಿಗೆ ವಿತ್ತೂರಗಳು ಬಂದೊದಗುವುವು ಎಂಬುದನ್ನು ದೊರೆಮಕ್ಕಳೆಲ್ಲ ಬಲ್ಲವರಾಗಿದ್ದರು. ಕ್ಷತ್ರಪುತ್ರರು - ಶಾಂತರಾಗಲಿಕ್ಕೆ ಇದೇ ಕಾರ೧. ಅದುವರೆಗೆ ಪರಿಜನರು - ಪುರದ ಹೊರವಯದಿಂದಲೂ ದಾರಿಯಲ್ಲಿ ಮಕರತೋರಣಗಳನ್ನು ಕಟ್ಟುವುದು, ಹೂಗಳನ್ನೆರಚುವುದು, ಧೂಪ ಗಳನ್ನು ಹಾಕುವುದು, ಪನ್ನೀರನ್ನು ಚೆಲ್ಲುವುದು, ಮೊದಲಾದ ಬಗೆ ಲಗೆಯ ಉಪಚಾರಗಳನ್ನು ಕಲ್ಪಿಸುವುದರಲ್ಲಿ ನಿರತರಾಗುತ್ತಿದ್ದರು. : ಜಪಟಗಳನ್ನು ಸಾಲಾಗಿಯೂ, ಒತ್ತಾಗಿಯೂ ಹಿಡಿದರು. ಬಿಸಿಲಿನ ರೇಗೆಗೆಡೆಯಿಲ್ಲದ ರಾಜಮಾರ್ಗದಲ್ಲಿ ಅಜಕುಮಾರ ವರನು - ವಿಧುವಿನಿಂ ರೂಡಗೂಡಿ, ಬಲು ಸಡಗರದಿಂದ ಪುರಪ್ರವೇಶವನ್ನು ಮಾಡಿದನು | ಬಳಿಕ - ವಧೂವರರು ಮೆರವಣಿಗೆಯಿಂದ ಪುರ ಪ್ರವೇಶ ಮಾಡುವ ಸುದ್ದಿ ಯು - ಊರೊಳಗೆಲ್ಲ ಹರಡಿತು, ಕೇರಿಕೇರಿಗಳಲ್ಲಿ ಇಕ್ಕೆಲದ ಉಪ್ಪರಿಗೆಗಳಮೇಲೆ ಬಂಗಾರದ ಸಲಾಕೆಗಳನ್ನು ನಟ್ಟಿರುವ ಕಿಟಕಿ ಗಳೊಳಗೂ, ಬಾಗಿಲುಗಳೊಳಗೂ, ಮುಖಗಳನ್ನಿಟ್ಟು, ಹೆಣ್ಣು ಗಂಡುಗಳನ್ನು ನೋಡಬೇಕೆಂಬ ಸಂಭ್ರಮದಲ್ಲಿ - ಆ ಪುರಸುಂದರಿಯರ ಬೇರೆ ಕೆಲಸಗಳನ್ನು ತೊರೆದ ಓಡಾಟಗಳು ಬಗೆಬಗೆಯಾಗಿದ್ದು ವು