ಪುಟ:ರಘುಕುಲ ಚರಿತಂ ಭಾಗ ೧.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಶ್ರೀ ಶ ರ ದಾ , - [ಅ • ಒಬ್ಬ ಭಾಮಿನಿಯು - ಬೆಳಗಂಡಿಯಬಳಿಗೆ ಬಲು ಬೇಗನೆ ಓಡಿ ಬರುವ ಬೆಡಗಿನಲ್ಲಿ- ತಲೆಯ ತುರುಬಿನ ಗಂಟು ಸಡಿಲವಾಗಿ ಕಳಲಿತು, ಸುತ್ತಿದ್ದ ಹೂವಿನ ಸರವು ಕೋಲಾಡ ತಲಿದ್ದಿತು, ಅದನ್ನು ಸರಿಮಾಡಿ ಕೊಳ್ಳಲು ಕೂದಲಿಗೆ ಕೈ ಹಾಕಿದ್ದವಳು ಹಾಗೆಯೇ ಮರೆತುಬಿಟ್ಟಳು, ಮತ್ತೊಬ್ಬ ಅಂಗನಾಮಣಿಯ ಹೆಜ್ಜೆಯನ್ನು ದಾದಿಯು ಅರಗಿನ ರಸ ದಿಂದ ಸಿಂಗರಿಸುತಲಿದ್ದಳು, ಆಗಲಾ ಸುಂದರಿಯು- ತನ್ನ ಮಲ್ನಡೆ ಯನ್ನು ತೊರೆದು, ಹೆಜ್ಜೆಯನ್ನು ಚಿನ್ನುತ, ದುಡುಕಿನಿಂದ ಮುಂದಡಿ ಗಳನ್ನಿಡುವಲ್ಲಿ - ಗವಾಕ್ಷದವರೆಗೂ ದಾರಿಯ ನೆಲದಮೇಲೆ ಅರಗಿನ ಬಣ್ಣದ ಗುರುತುಗಳು ಕಂಗೊಳಿಸುತಲಿದ್ದು ವು. ಒಬ್ಬ ಗರತಿಯು - ಸಣ್ಣ ಸಲಾಕೆಯಿಂದ ಬಲಗಣ್ಣಿಗೆ ಕಾಟಿಕೆಯನ್ನು ಹಚ್ಚಿಕೊಂಡು, ಎಡಗಣ್ಣನ್ನು ಸಿಂಗರಿಸುವ ಹೊತ್ತಿಗೆ, ನೋಟದ ಸಂಭ್ರಮವು ಒದಗಲು, ಕಜ್ವಲವನ್ನೊತ್ತಿದ್ದ ಕಡ್ಡಿಯನ್ನು ಹಿಡಿದಿದ್ದ ವಳು ಹಾಗೆಯೇ ವಾತಾಯನದ ಬಳಿಗೆ ದುಡದುಡನೆ ಓಡಿದಳು. ಜಾಲರಂಧದ ಹತ್ತಿರಕ್ಕೆ ಬಂದು ನಿಂದು ನೋಡುವ ಒಯ್ಯಾರದಲ್ಲಿ, ಸಡಲಿದ ನಿರಿಮುಡಿಯನ್ನು, ಟೊಂಕದಲ್ಲಿ ಬೆಳಕನ್ನು ಬೀರುವ ಕಯ್ಯಲ್ಲಿ ಹಿಡಿದಿದ್ದ ಸೀಮಂತಿನಿಯೋ ಗೃಳು ಹಾಗೆಯೇ ನಿಂತು ನೋಡತೊಡಗಿತಳು, ಇನ್ನೊಬ್ಬ ಲಲನೆಯು - ಉಡಿಗೆ ಸುತ್ತಿಕೊಂಬ ಬಂಗಾರದೆಳೆಗೆ ಮಣಿಗಳನ್ನು ಪೋಣಿಸುತ್ತಿದ್ದಳು, ತೃರೆಯಿಂದೆದ್ದು ನಡೆವ ಬೆಡಗಿನಲ್ಲಿ ದಾರವು ಹರಿದು, ರತುನಗಳು - ಸರಿದು ಉದಿರುತ್ತಿದ್ದುವು, ತಂತುವಿನ ತುದಿಯು ಹಜ್ಞೆಯ ಹೆಬ್ಬೆರಳಿಗೆ ತೊಡ ರುತಲಿದ್ದಿತು, ಆದರೂ ಅದು ಆಕೆಯ ನೆನಪಿಗೆ ಬರಲೇ ಇಲ್ಲ. ಹೀಗೆ - ಬಹುಮಂದಿ ಮಾನಿನಿಯರು - ಮದುಮಕ್ಕಳ ಮೆರವಣಿಗೆಯನ್ನು ನೋಡಬೇಕೆಂಬ ಬಯಕೆಯ ಬಿರುವಿನಿಂದ ಬುಡಬುಡನೆ ಬಲುಬೇಗನೆ ಬಂದು, ಸುವಾಸನೆಯು ಉಸಿರನ್ನೂ, ತಳತಳಿಸುವ ದೃಷ್ಟಿಗಳನ್ನೂ ಬಳ ಗೊಂಡಿರುವ ಮುಖಗಳನ್ನು ಕಿಟಕಿಗಳಲ್ಲಿ ದಟ್ಟವಾಗಿ ಕಿಕ್ಕಿರಿವಂತೆ ಇಟ್ಟರು. ಆಗಲಾ ಗವಾಹಗಳು - ಚಲಿಸುತಲಿರುವ ದುಂಬಿಗಳೊಡ ಗೂಡಿ ಅಂದವಾಗಿ ಅರಳಿ, ಗಮಗಮಿಸುವ ಕೆಂದಾವರೆಗಳಿಂದ ಸಿಂಗರ ಗೊಂಡಂತೆ ಕಂಗೊಳಿಸುತಲಿದ್ದುವು. ಅಂತು ನಿಂತ ನಾರಿಯರು - ಸುರಸುರನೆ ಸವಿಯನ್ನು ಚಪ್ಪರಿಸುತ, ಅಲುಗದಿರುವ ತನ್ನ ನಯನಗಳಿಂದ