ಪುಟ:ರಘುಕುಲ ಚರಿತಂ ಭಾಗ ೧.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ v ರಘುಕುಮಾರನನ್ನು ತಣಿವಾರ ಕುಡಿಯುತಲಿದ್ದ ರು. ಆಗಲವರ ಇತರೇಂದ್ರಿಯಗಳೆಲ್ಲವೂ ಬೇರೆ ವಿಷಯಗಳನ್ನು ತೊರೆದು, ದೃಗ ಳನ್ನೇ ಸರ್ವ ಪ್ರಕಾರದಿಂದಲೂ ಹೊಕ್ಕಿರುವಂತಿದ್ದುವು. “ ಆಹಾ ! ದೂರದಲ್ಲಿ ಮರೆಯೊಳಿದ್ದ ನರಪತಿಗಳು - ಈ ಇಂದುಮತಿಯನ್ನು ನನಗೆ ಕೊಡಬೇಕು, ತನಗೆ ಕೊಡಬೇಕು ಎಂದು ಭೋಜನನ್ನು ಕುರಿತು ಬೇಡುತಲಿದ್ದರೂ, ಈ ಸುಕುಮಾರಿಯು ಸ್ವಯಂವರವನ್ನೇ ಬಯಸಿ ದುದು ಸಾರ್ಥಕವಾಯಿತು, ಹಾಗಿಲ್ಲದಿದ್ದರೆ ವರಮಹಾಲಕ್ಷ್ಮಿಯು ನಾರಾಯಣನನ್ನು ವರಿಸಿದಂತೆ ಈ ಅರಗುವರನನ್ನು ವರಿಸುತ್ತಿದ್ದಳೆ? ಸಾತ್ಮನಾ ಇಲ್ಲ !” ಎಂದು ಆ ನಾರೀಮಣಿಯರೆಲ್ಲ ಮಾತನಾಡಿಕೊ ಳ್ಳುತ್ತಿದ್ದರು. –ll ಅಹಹ !! ಎಲ್ಲರ ಹೊಗಳಿಕೆಗೂ ಈಡಾಗಿ, ಎಲ್ಲರೂ ಬಯಸತಕ್ಕುದೆನಿಸಿರುವ ಚಲುವಿಕೆಯನ್ನು ಪಡೆದಿರತಕ್ಕೆ ಈ ವಧೂವರರಿಗೇ, ದಾಂಪತ್ಯವನ್ನು ವಿಧಿಯು ಅನುಗೊಳಿಸದೆ ಇದ್ದು ದೇ ಆದರೆ, ಆಗ - ಈ ಹೆಣ್ಣು ಗಂಡುಗಳಲ್ಲಿ ಇಂತಪ್ಪ ಅಪಾರವಾದ ಸೌಂದರ್ ವನ್ನು ನಿರ್ಮಿಸಿದ ಆ ಪಜಾನಾಥನ ಪ್ರಯಾಸವು-ಪ್ರಯೋಜನವಿಲ್ಲದೆಯೆ ಹೋಗುತಲಿದ್ದಿ ತು ಎಂದೂ ಆಡಿಕೊಳ್ಳುತಲಿದ್ದ ರು. ಮತ್ತು-<< ಎಂದೂ ಒಡನಾಡಿಗಳಾಗಿದ್ದ ಆ ರತಿಮನ್ಮಥರೇ ಈ ಹೆಣ್ಣು ಗಂಡುಗಳ ರೂಪದಿಂದ ಹುಟ್ಟಿರಬೇಕು. ಹಾಗೆ ಇಲ್ಲದಿದ್ದರೆ, ಸಾವಿರಾರುಮಂದಿ ನರಪತಿ ಕುಮಾ ರರಿದ್ದ ರೂ, ಅವರನ್ನೆಲ್ಲ ತೊರೆದು, ಬೊಜಕುಮಾರಿಯು – ತನಗನುರೂ ಪನಾದ ರಘುಕುಮಾರನನ್ನು ವರಿಸಲು ಕಾರಣವೇನು ? ಈಗ ಅರಿಯ ಲಾಗದಿದ್ದರೂ ಜನ್ಮಾಂತರಾನುಭವದ ವಾಸನಾವಶದಿಂದ ಪೂರ್ವಸಂಬಂ ಧದ ವಸ್ತುವಿನಲ್ಲಿ ಮನವು - ಸ್ನೇಹದಿಂದ ತಾನಾಗಿ ಪ್ರವರ್ತಿಸುವುದು ದಿಟ ,, ಎಂತಲೂ ಎಂದುಕೊಂಡರು. ಹೀಗೆಲ್ಲ – ಆ ಪುರಸುಂದರಿಯರ ಮುಖಗಳಿಂದ ಹೊರಡುತಲಿರುವ ಕಿವಿಗಿಂಪಾದ ಮಾತುಗಳನ್ನು ಆಲಿಸುತ್ತಾ, ಅಜಕುಮಾರನು - ಮಂಗಳ ಕರವಾದ ರಚನೆಗಳಿಂದ ಅಂದವಾಗಿ ಬೆಳಗುತಲಿರುವ ಮಾವನ ಮನೆ ಯನ್ನು ಹೊಕ್ಕನು, ಕಾಮರೂಪದೇಶದರಸಿನ ಕಯಡಮಾರಿ ಕೊಂಡು ಕರೇಣುವಿನಿಂದ ಕೆಳಗೆ ಇಳಿದನು, ಬಳಿಕ ವೈದರ್ಭನು ತೋರಿದ ಒಳತೆಟ್ಟಿಯನ್ನು, ಸಂಬಂಧಿಯು ಸದನದೊಳಗಣ ಸುದತಿಯರ